ನವದೆಹಲಿ:ಕೇಂದ್ರ ಸರ್ಕಾರವು ಆರ್ಥಿಕ ಉತ್ತೇಜನಾ ಕೊಡುಗೆಗಳ ಭಾಗವಾಗಿ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) 20,000 ಕೋಟಿ ರೂ. ಅಧೀನ ಸಾಲ ಖಾತರಿ ಯೋಜನೆಯನ್ನು ಪ್ರಾರಂಭಿಸಿದೆ.
ಆತ್ಮನಿರ್ಭರ ಭಾರತ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ ಘೋಷಿಸಲಾದ ಈ ಯೋಜನೆಗೆ ಬುಧವಾರ ಎಂಎಸ್‌ಎಂಇಗಳ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಟ್ವಿಟ್ಟರ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಕೆಲವು ಖಾಸಗಿ ಬ್ಯಾಂಕ್ಗಳು ಮಂಡಳಿಯಲ್ಲಿವೆ ಎಂದು ಸಚಿವಾಲಯ ಹೇಳಿದೆ.
ತೀವ್ರ ಆರ್ಥಿಕ ಒತ್ತಡಕ್ಕೊಳಗಾದ ಎಂಎಸ್‌ಎಂಇಗಳಿಗೆ ಸರ್ಕಾರ ಮತ್ತೊಂದು ಸೌಲಭ್ಯ ನೀಡಿದೆ. ಉಪ ಸಾಲ ಯೋಜನೆ ಪ್ರಾರಂಭಿಸಲಾಗಿದೆ. ಅಗತ್ಯವಾದ ಎಲ್ಲಾ ತಯಾರಿಗಳನ್ನು ಮಾಡಲಾಗುತ್ತದೆ. ಎಲ್ಲಾ ಪಿಎಸ್‌ಯು ಬ್ಯಾಂಕ್ಗಳು ಮತ್ತು ಕೆಲವು ಪ್ರೈವೇಟ್ ಬ್ಯಾಂಕ್ಗಳು ಮಂಡಳಿಯಲ್ಲಿವೆ ಎಂದು ಹೇಳಿದೆ.
ಸಿಜಿಎಸ್‌ಎಸ್‌ಡಿ ಅಡಿಯಲ್ಲಿ ಮಂಜೂರಾದ ಎಲ್ಲಾ ಸಾಲ ಸೌಲಭ್ಯಗಳಿಗೆ ಗ್ಯಾರಂಟಿ ಲಭ್ಯತೆ ದಿನಾಂಕದಿಂದ ಅಥವಾ 2021ರ ಮಾರ್ಚ್ 31ರಿಂದ ಗರಿಷ್ಠ 10 ವರ್ಷಗಳವರೆಗೆ ಈ ಯೋಜನೆ ಅನ್ವಯಿಸುತ್ತದೆ. ಇದಕ್ಕಾಗಿ 20,000 ಕೋಟಿ ರೂ. ಅಧೀನ ಖಾತರಿ ಮೊತ್ತ ಅನುಮೋದಿಸಲಾಗಿದೆ.