ಕರ್ನಾಟಕ

karnataka

ETV Bharat / business

ಕೆಲಸ ಕೊಡದೇ ಎಸ್​ಸಿ, ಎಸ್​ಟಿ, ಒಬಿಸಿ ಪದವೀಧರರನ್ನು ಸರ್ಕಾರ ದಂಡಿಸುತ್ತಿದೆ: ರಾಹುಲ್ ಗಾಂಧಿ ಆಕ್ರೋಶ - ಐಐಎಂಗಳಲ್ಲಿ ಎಸ್​ಸಿ ಫ್ಯಾಕಲ್ಟಿ ಸ್ಥಾನ

ವಿದ್ಯಾವಂತ ಯುವಕರು ತೀವ್ರ ನಿರುದ್ಯೋಗ ಎದುರಿಸುತ್ತಿದ್ದಾರೆ. ನೈಜ ಪದವಿಗಳನ್ನು ಹೊಂದಿದ್ದಕ್ಕಾಗಿ ಕೇಂದ್ರ ಸರ್ಕಾರ ಅವರಿಗೆ, ಅದರಲ್ಲೂ ವಿಶೇಷವಾಗಿ ಒಬಿಸಿ - ಎಸ್​ಟಿ - ಎಸ್​ಟಿ ಅಭ್ಯರ್ಥಿಗಳಿಗೆ ದಂಡ ವಿಧಿಸುತ್ತಿದೆ ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ನಿರುದ್ಯೋಗದ ಬಗ್ಗೆ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.

Rahul Gandhi
Rahul Gandhi

By

Published : Mar 17, 2021, 12:37 PM IST

ನವದೆಹಲಿ:ಭಾರತದಲ್ಲಿನ ನಿರುದ್ಯೋಗ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅರ್ಹ ಶೈಕ್ಷಣಿಕ ಅರ್ಹತೆ ಹೊಂದಿರುವ ಯುವಕರನ್ನು ಸರ್ಕಾರವು ಅವರೆಲ್ಲರನ್ನೂ ದಂಡಿಸುತ್ತಿದೆ ಎಂದು ಟ್ವಿಟರ್​ನಲ್ಲಿ ಆರೋಪಿಸಿದ್ದಾರೆ.

ವಿದ್ಯಾವಂತ ಯುವಕರು ತೀವ್ರ ನಿರುದ್ಯೋಗ ಎದುರಿಸುತ್ತಿದ್ದಾರೆ. ನೈಜ ಪದವಿಗಳನ್ನು ಹೊಂದಿದ್ದಕ್ಕಾಗಿ ಕೇಂದ್ರ ಸರ್ಕಾರ ಅವರಿಗೆ, ಅದರಲ್ಲೂ ವಿಶೇಷವಾಗಿ ಒಬಿಸಿ - ಎಸ್​ಟಿ - ಎಸ್​ಟಿ ಅಭ್ಯರ್ಥಿಗಳಿಗೆ ದಂಡ ವಿಧಿಸುತ್ತಿದೆ ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ನಿರುದ್ಯೋಗದ ಬಗ್ಗೆ ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ಹಂಚಿಕೊಂಡ ಸುದ್ದಿಯೊಂದರ ಪ್ರಕಾರ, ಐಐಎಂಗಳಲ್ಲಿ ಶೇ 62ರಷ್ಟು ಒಬಿಸಿ ಮತ್ತು ಶೇ 63ರಷ್ಟು ಎಸ್​ಸಿ ಅಧ್ಯಾಪಕರ ಹುದ್ದೆಗಳು ಖಾಲಿ ಉಳಿದಿವೆ. ಐಜಿಎನ್​ಒಯುನಲ್ಲಿ ಶೇ 41ರಷ್ಟು ಎಸ್​ಸಿ ಮತ್ತು ಶೇ 67ರಷ್ಟು ಒಬಿಸಿ ಅಧ್ಯಾಪಕರ ಸ್ಥಾನಗಳು ಖಾಲಿಯಾಗಿವೆ. ಐಐಎಂಗಳು ಅತಿ ಹೆಚ್ಚು ಶೇ 73.7ರಷ್ಟು ಖಾಲಿ ಹುದ್ದೆಗಳನ್ನು ಹೊಂದಿವೆ ಎಂದು ಕಾಂಗ್ರೆಸ್ ಮುಖಂಡರು ಹಂಚಿಕೊಂಡ ವರದಿಯಲ್ಲಿದೆ.
ಇದನ್ನೂ ಓದಿ: ಕೊರೊನಾ ಬಳಿಕ ಮೋದಿ ಬಾಂಗ್ಲಾಗೆ ಮೊದಲ ವಿದೇಶ ಭೇಟಿ: ಮೂರು ಸ್ಮರಣೀಯ ಘಳಿಗೆಗೆ ನಮೋ ಸಾಕ್ಷಿ

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ (ಸಿಎಂಐಇ) ಇತ್ತೀಚಿನ ಅಂಕಿ- ಅಂಶಗಳ ಪ್ರಕಾರ, 2021ರ ಫೆಬ್ರವರಿಯಲ್ಲಿ ಭಾರತದ ನಿರುದ್ಯೋಗ ದರವು ಶೇ 6.9ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ನಿರುದ್ಯೋಗ ಅಂಕಿ ಅಂಶಗಳ ಏರಿಕೆಯ ಹೊರತಾಗಿ, ನಗರ ಪ್ರದೇಶಗಳಲ್ಲಿನ ನಿರುದ್ಯೋಗ ದರವು 2021ರ ಜನವರಿಯಲ್ಲಿ ಶೇ 8.08ರಿಂದ 2021ರ ಫೆಬ್ರವರಿಯಲ್ಲಿ ಶೇ 6.99ಕ್ಕೆ ಇಳಿದಿದೆ ಎಂದು ಸಿಎಂಐಇ ವರದಿ ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ದರವು 2021ರ ಜನವರಿಯಲ್ಲಿ ಶೇ 5.83ರಿಂದ ಫೆಬ್ರವರಿಯಲ್ಲಿ ಶೇ 6.86ಕ್ಕೆ ಏರಿದೆ.

ಈ ಅಂಕಿ - ಅಂಶಗಳ ಪ್ರಕಾರ, ಫೆಬ್ರವರಿಯಲ್ಲಿ ಹರಿಯಾಣ (ಶೇ 26.4ರಷ್ಟು), ರಾಜಸ್ಥಾನ (ಶೇ 25.6ರಷ್ಟು) ಮತ್ತು ಗೋವಾ (ಶೇ 21.1ರಷ್ಟು) ರಾಜ್ಯಗಳು ಅತಿ ಹೆಚ್ಚು ನಿರುದ್ಯೋಗ ಅಂಕಿ - ಅಂಶಗಳನ್ನು ವರದಿ ಮಾಡಿವೆ. ಅಸ್ಸೋಂ (ಶೇ 1.6ರಷ್ಟು) ಮತ್ತು ಮಧ್ಯಪ್ರದೇಶ (ಶೇ 2.1ರಷ್ಟು) ಕಡಿಮೆ ನಿರುದ್ಯೋಗ ದಾಖಲಿಸಿವೆ.

ABOUT THE AUTHOR

...view details