ನವದೆಹಲಿ: ಎಂಎಸ್‌ಎಂಇ ರಫ್ತು ಉತ್ತೇಜನ ಮಂಡಳಿ ಜತೆ ಯಾವುದೇ ವಿಧದ ಸಂಬಂಧವಿಲ್ಲ ಮತ್ತು ಈ ಮಂಡಳಿಗೆ ಸಂಬಂಧಪಟ್ಟ ಯಾವುದೇ ಹುದ್ದೆಯ ನೇಮಕಾತಿಗೆ ಅಧಿಕಾರ ನೀಡಿಲ್ಲ ಎಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್‌ಎಂಇ) ಸ್ಪಷ್ಟಪಡಿಸಿದೆ.
ಖಾಸಗಿ ಎಂಎಸ್‌ಎಂಇ ವರ್ತಕರ ಒಕ್ಕೂಟದ ಸಂಬಂಧ ತಳ್ಳಿಹಾಕಿದ ಕೇಂದ್ರ - ಖಾಸಗಿ ಎಂಎಎಸ್ಎಂಇ ವ್ಯಾಪಾರ ಒಕ್ಕೂಟ ವಿವಾದ
ಎಂಎಸ್ಎಂಇ ರಫ್ತು ಉತ್ತೇಜನ ಮಂಡಳಿಯ 'ನಿರ್ದೇಶಕ' ಹುದ್ದೆಗೆ ನೇಮಕಾತಿ ಪತ್ರ ನೀಡುವ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಸ್ಥೆ ಎಂಎಸ್‌ಎಂಇ ಸಚಿವಾಲಯದ ಹೆಸರನ್ನು ಬಳಸುತ್ತಿರುವುದು ಕಂಡುಬರುತ್ತದೆ ಎಂದು ಎಂಎಸ್‌ಎಂಇ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಎಸ್ಎಂಇ ರಫ್ತು ಉತ್ತೇಜನ ಮಂಡಳಿಯು 'ನಿರ್ದೇಶಕ' ಹುದ್ದೆಗೆ ನೇಮಕಾತಿ ಪತ್ರ ನೀಡುವ ಬಗ್ಗೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಸ್ಥೆ ಎಂಎಸ್‌ಎಂಇ ಸಚಿವಾಲಯದ ಹೆಸರನ್ನು ಬಳಸುತ್ತಿರುವುದು ಕಂಡುಬರುತ್ತದೆ ಎಂದು ಎಂಎಸ್‌ಎಂಇ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಎಂಎಸ್ಎಂಇ ಸಚಿವಾಲಯ, ಕೇಂದ್ರ ಸರ್ಕಾರವು ಎಂಎಸ್ಎಂಇ ರಫ್ತು ಉತ್ತೇಜನ ಮಂಡಳಿಯೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಈ ಮಂಡಳಿ ಸಂಬಂಧಿಸಿದ ಯಾವುದೇ ಹುದ್ದೆಗೆ, ಯಾವುದೇ ವಿಧದ ಪೋಸ್ಟ್ ಅಥವಾ ನೇಮಕಾತಿಯನ್ನು ಎಂಎಸ್ಎಂಇ ಸಚಿವಾಲಯವು ಅಧಿಕೃತಗೊಳಿಸಿಲ್ಲ. ಸಾರ್ವಜನಿಕ ಅಂತಹ ಸಂದೇಶಗಳಿಗೆ ಅಥವಾ ಅಂತಹ ಅಂಶಗಳಿಗೆ ಕಿಗೊಡದಂತೆ ಈ ಮೂಲಕ ತಿಳಿಸುತ್ತೇವೆ ಎಂದು ಹೇಳಿದೆ.