ಕರ್ನಾಟಕ

karnataka

ETV Bharat / business

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ: ಕರ್ನಾಟಕಕ್ಕೆ 577 ಕೋಟಿ ರೂ. ಕೊಟ್ಟ ಕೇಂದ್ರ!

'ನಿಸರ್ಗಾ' ಚಂಡಮಾರುತದಿಂದ ಹಾನಿಗೊಳಗಾದ ಮಹಾರಾಷ್ಟ್ರಕ್ಕೆ ಕೇಂದ್ರವು 268.59 ಕೋಟಿ ರೂ. ನೈಋತ್ಯ ಮಾನ್ಸೂನ್ ವೇಳೆ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ರಾಜ್ಯಗಳಿಗೆ ಕೇಂದ್ರವು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 577.8 ಕೋಟಿ ರೂ. ಮಧ್ಯಪ್ರದೇಶಕ್ಕೆ 611.61 ಕೋಟಿ ರೂ. ಮತ್ತು ಸಿಕ್ಕಿಂಗೆ 87.84 ಕೋಟಿ ರೂ. ಒದಗಿಸಿದೆ..

cyclones
ಚಂಡಮಾರುತ

By

Published : Nov 13, 2020, 3:27 PM IST

ನವದೆಹಲಿ :ಈ ವರ್ಷ ಸಂಭವಿಸಿದ ಚಂಡಮಾರುತ, ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಆರು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಅಡಿಯಲ್ಲಿ 4,381.88 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

'ಅಮ್ಫಾನ್' ಚಂಡಮಾರುತದಿಂದ ಹಾನಿಗೊಳಗಾದ ರಾಜ್ಯಗಳಿಗೆ 2,707.77 ಕೋಟಿ ರೂ. ನೀಡಲಾಗಿದೆ. ತೀವ್ರವಾಗಿ ಹಾನಿಗೊಳಗಾದ ಪಶ್ಚಿಮ ಬಂಗಾಳಕ್ಕೆ 2,707.77 ಕೋಟಿ ರೂ. ಹಾಗೂ ನೆರೆಯ ರಾಜ್ಯ ಒಡಿಶಾಗೆ 128.23 ಕೋಟಿ ರೂ. ಕೊಡಲಾಗಿದೆ.

'ನಿಸರ್ಗಾ' ಚಂಡಮಾರುತದಿಂದ ಹಾನಿಗೊಳಗಾದ ಮಹಾರಾಷ್ಟ್ರಕ್ಕೆ ಕೇಂದ್ರವು 268.59 ಕೋಟಿ ರೂ. ನೈಋತ್ಯ ಮಾನ್ಸೂನ್ ವೇಳೆ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ರಾಜ್ಯಗಳಿಗೆ ಕೇಂದ್ರವು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 577.8 ಕೋಟಿ ರೂ. ಮಧ್ಯಪ್ರದೇಶಕ್ಕೆ 611.61 ಕೋಟಿ ರೂ. ಮತ್ತು ಸಿಕ್ಕಿಂಗೆ 87.84 ಕೋಟಿ ರೂ. ಒದಗಿಸಿದೆ.

'ಅಮ್ಫಾನ್' ಚಂಡಮಾರುತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮೇ 22ರಂದು ಪಶ್ಚಿಮ ಬಂಗಾಳ ಮತ್ತು ಒಡಿಶಾದ ರಾಜ್ಯಗಳಿಗೆ ಭೇಟಿ ನೀಡಿದ್ದರು. ಪಶ್ಚಿಮ ಬಂಗಾಳಕ್ಕೆ 1,000 ಕೋಟಿ ರೂ. ಮತ್ತು ಒಡಿಶಾಗೆ 500 ಕೋಟಿ ರೂ. ಆರ್ಥಿಕ ಸಹಾಯವನ್ನು ತಕ್ಷಣದ ಪರಿಹಾರಕ್ಕಾಗಿ ಮೇ 23ಕ್ಕೂ ಮುಂಚಿತವಾಗಿ ಬಿಡುಗಡೆ ಮಾಡಲಾಯಿತು.

ಸತ್ತವರ ಕುಟುಂಬಸ್ಥರಿಗೆ 2 ಲಕ್ಷ ರೂ., ಗಾಯಾಳುಗಳಿಗೆ 50,000 ರೂ. ಅನ್ನು ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಮತ್ತು ಎನ್‌ಡಿಆರ್‌ಎಫ್ ಮೂಲಕ ಒದಗಿಸಲಾದ ಎಕ್ಸ್ ಗ್ರೇಷಿಯಾಕ್ಕಿಂತ ಹೆಚ್ಚಿನದಾಗಿದೆ. 2021ರ ಹಣಕಾಸು ವರ್ಷದಲ್ಲಿ ಇದುವರೆಗೆ ಎಸ್‌ಡಿಆರ್‌ಎಫ್‌ನಿಂದ ಕೇಂದ್ರವು 28 ರಾಜ್ಯಗಳಿಗೆ 15,524.43 ಕೋಟಿ ರೂ. ನೀಡಿದೆ ಎಂದು ಸರ್ಕಾರ ಹೇಳಿದೆ.

ABOUT THE AUTHOR

...view details