ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 41ನೇ ಸಭೆಯು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.
ಕೇಂದ್ರದ ಬಿಡುಗಡೆಯ ವಿಳಂಬದಿಂದ ಕೊರೊನಾ ಪೀಡಿತ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಏಕಮುಖ ಕಾರ್ಯಸೂಚಿ ಬಗ್ಗೆ ಚರ್ಚಿಸಲಾಯಿತು. ಸಭೆಯ ಬಳಿಕ ಮಾತನಾಡಿದ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಜಿಎಸ್‌ಟಿ ಸಂಗ್ರಹದ ಮೇಲೆ ತೀವ್ರವಾದ ಪರಿಣಾಮ ಬೀರಿದೆ. ಜಿಎಸ್‌ಟಿ ಪರಿಹಾರ ಕಾನೂನಿನ ಪ್ರಕಾರ, ರಾಜ್ಯಗಳಿಗೆ ಬಾಕಿ ಪರಿಹಾರ ನೀಡಬೇಕಾಗಿದೆ ಎಂದರು.
ಮಾರ್ಚ್‌ನಲ್ಲಿನ 13,806 ಕೋಟಿ ರೂ. ಸೇರಿದಂತೆ 2019-20ನೇ ಸಾಲಿನ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವಾಗಿ ಕೇಂದ್ರ ಸರ್ಕಾರ 1.65 ಲಕ್ಷ ಕೋಟಿ ರೂ. ನೀಡಿದೆ. 2019-20ನೇ ಸಾಲಿನ ಒಟ್ಟು ಪರಿಹಾರದ ಮೊತ್ತ 1.65 ಲಕ್ಷ ಕೋಟಿ ರೂ. ಆಗಿದೆ. ಆದರೆ ಸಂಗ್ರಹಿಸಿದ ಸೆಸ್ ಮೊತ್ತ 95,444 ಕೋಟಿ ರೂ. ಇದೆ ಎಂದು ಮಾಹಿತಿ ನೀಡಿದರು.