ಕರ್ನಾಟಕ

karnataka

ETV Bharat / business

7 ತಿಂಗಳಲ್ಲಿ 1,32,800 ಕೋಟಿ ರೂ. ತೆರಿಗೆ ಬಾಕಿ ಮರು ಪಾವತಿಸಿದ ಸಿಬಿಡಿಟಿ! - ಆದಾಯ ತೆರಿಗೆ ಮರುಪಾವತಿ

ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2020ರ ನವೆಂಬರ್​ 10 ನಡುವೆ 39.75 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 1,32,800 ಕೋಟಿ ರೂ. ಮರುಪಾವತಿ ಮಾಡಿರುತ್ತದೆ. 37,81,599 ಪ್ರಕರಣಗಳಲ್ಲಿ 35,123 ಕೋಟಿ ರೂ. ಆದಾಯ ತೆರಿಗೆ ಮರುಪಾವತಿಯಾಗಿದೆ. 97,677 ಕೋಟಿ ರೂ. ಮೊತ್ತ 1,93,813 ಪ್ರಕರಣಗಳಲ್ಲಿ ನೀಡಲಾಗಿದೆ

tax refund
ತೆರಿಗೆ

By

Published : Nov 11, 2020, 3:15 PM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 39.75 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 1,32,800 ಕೋಟಿ ರೂ. ತೆರಿಗೆ ಬಾಕಿ ಹಣ ಪಾವತಿಸಿದೆ.

ಒಟ್ಟು ಮರುಪಾವತಿಯಲ್ಲಿ 35,123 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು ಕಾರ್ಪೊರೇಟ್ ತೆರಿಗೆ ಮರುಪಾವತಿ 97,677 ಕೋಟಿ ರೂ. ಒಳಗೊಂಡಿದೆ ಎಂದು ತಿಳಿಸಿದೆ.

ಸಿಬಿಡಿಟಿ 2020ರ ಏಪ್ರಿಲ್ 1ರಿಂದ 2020ರ ನವೆಂಬರ್​ 10 ನಡುವೆ 39.75 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 1,32,800 ಕೋಟಿ ರೂ. ಮರುಪಾವತಿ ಮಾಡಿರುತ್ತದೆ. 37,81,599 ಪ್ರಕರಣಗಳಲ್ಲಿ 35,123 ಕೋಟಿ ರೂ. ಆದಾಯ ತೆರಿಗೆ ಮರುಪಾವತಿಯಾಗಿದೆ. 97,677 ಕೋಟಿ ರೂ. ಮೊತ್ತ 1,93,813 ಪ್ರಕರಣಗಳಲ್ಲಿ ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವಿಟರ್​​ನಲ್ಲಿ ತಿಳಿಸಿದೆ.

ಸಾಂಕ್ರಾಮಿಕ ರೋಗದಿಂದ ಉಂಟಾಗುವ ವಿತ್ತೀಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಮರುಪಾವತಿಗಳನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಲು ಒತ್ತು ನೀಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಈ ಹಿಂದೆ ತಿಳಿಸಿತ್ತು.

ABOUT THE AUTHOR

...view details