ಕರ್ನಾಟಕ

karnataka

ETV Bharat / business

ಸುರಾಲೋಕದಲ್ಲಿ ಕುಡುಕರ ಬಾಳು ನರಕ: ಕೊರೊನಾಘತದಲ್ಲಿ ಸರ್ಕಾರಗಳಿಗೆ ಅದುವೇ ಅಕ್ಷಯ ಪಾತ್ರೆ - ಪೆಟ್ರೋಲ್ ಮತ್ತು ಡೀಸೆಲ್​ ಮೇಲೆ ರಾಜ್ಯಗಳ ಸುಂಕ ಏರಿಕೆ

ಕೊರೊನಾ ಸಂಕಷ್ಟದ ಕಾಲದಲ್ಲಿ ಹೆಚ್ಚುವರಿ ಆದಾಯ ಗಳಿಸಲು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿದ್ದರೇ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮದ್ಯದ ಮೇಲಿನ ಸುಂಕ ಏರಿಕೆ ಮಾಡಿವೆ. ಈ ಮೂಲಕ ತಮ್ಮ ಖಜಾನೆ ಭರ್ತಿಗೆ ಜನಸಾಮಾನ್ಯರ ಜೇಬಿಗೆ ಕೈಹಾಕಿವೆ.

alcohol
ಮದ್ಯ

By

Published : Oct 29, 2020, 5:05 PM IST

ನವದೆಹಲಿ:ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ರಾಜ್ಯಗಳು ಅನುಭವಿಸಬೇಕಾದ ಆದಾಯದ ನಷ್ಟವನ್ನು ಸಾಮಾನ್ಯ ಜನರು ಸರಿದೂಗಿಸುತ್ತಿದ್ದಾರೆ.

ಈ ಸಂಕಷ್ಟದ ಕಾಲದಲ್ಲಿ ಹೆಚ್ಚುವರಿ ಆದಾಯ ಗಳಿಸಲು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿದ್ದರೇ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮದ್ಯದ ಮೇಲಿನ ಸುಂಕ ಏರಿಕೆ ಮಾಡಿವೆ. ಇದರ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 60 ಪೈಸೆಯಿಂದ 8 ರೂ.ಗಳಷ್ಟು ಏರಿಕೆ ಆಗಿದೆ. ಇನ್ನೊಂದಡೆ ಆಲ್ಕೋಹಾಲ್​ ತೆರಿಗೆ ಏರಿಕೆ ಸರಾಸರಿ ಶೇ 10ರಿಂದ 120ರಷ್ಟರ ವ್ಯಾಪ್ತಿಯಲ್ಲಿದೆ ಎಂದು ಕೇರ್ ರೇಟಿಂಗ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

ಪೆಟ್ರೋಲಿಯಂ ಮತ್ತು ಆಲ್ಕೋಹಾಲ್ ರಾಜ್ಯಗಳ ತೆರಿಗೆ ಆದಾಯದ ಶೇ 25-35ರಷ್ಟು ಪೂರೈಸುತ್ತಿವೆ. ಹೀಗಾಗಿ, ಸುಂಕ ಹೆಚ್ಚಿಸುವ ಕ್ರಮವು ರಾಜ್ಯಗಳ ಜಿಡಿಪಿಯ ಶೇ 0.03 ರಿಂದ 0.35ರ ವ್ಯಾಪ್ತಿಯಲ್ಲಿ ಆದಾಯ ತಂದುಕೊಡುತ್ತಿವೆ ಎಂದು ಅಂದಾಜಿಸಲಾಗಿದೆ.

ಈ ಹಿಂದೆ ಆರ್ಥಿಕತೆ ಬೆಳವಣಿಗೆ ನಿರೀಕ್ಷೆಯಲ್ಲಿ ರಾಜ್ಯಗಳು ಹೆಚ್ಚಿನ ತೆರಿಗೆ ಆದಾಯ ಸಂಗ್ರಹಣೆಗೆ ಬಜೆಟ್ ಲೆಕ್ಕಾಚಾರ ಹಾಕಿಕೊಂಡಿದ್ದವು. ಆದರೆ, ಸಾಂಕ್ರಾಮಿಕದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿ ಈಗ ಆದಾಯ ಸಂಗ್ರಹಕ್ಕೆ ಅಪಾಯವನ್ನುಂಟುಮಾಡುತ್ತಿದೆ. ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯಾದ ರಾಜ್ಯಗಳ ಸ್ವಂತ ಕಂದಾಯದ ಆದಾಯದ ಮೇಲೆ ಹೆಚ್ಚು ಭಾರ ಬೀಳುತ್ತಿದೆ ಎಂದು ವರದಿ ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಸ್‌ಜಿಎಸ್‌ಟಿ ಶೇ 47.2ರಷ್ಟು ಕುಸಿದಿದ್ದು, ಇದು ಒಟ್ಟಾರೆ ಜಿಎಸ್‌ಟಿ ಕುಸಿತಕ್ಕಿಂತ ಬಹು ತೀಕ್ಷ್ಣವಾಗಿದೆ. ಕುಸಿತದ ಪ್ರಮಾಣವು ಎರಡನೇ ತ್ರೈಮಾಸಿಕದಲ್ಲಿ ಶೇ 6.4ಕ್ಕೆ ಮಧ್ಯಮ ಪ್ರಮಾಣದಲ್ಲಿದೆ. 2020-21ರಲ್ಲಿ ಅರ್ಧದಷ್ಟು ರಾಜ್ಯಗಳು ಜಿಎಫ್‌ಡಿ / ಜಿಎಸ್‌ಡಿಪಿ ಅನುಪಾತ ಶೇ 3ರ ಮಿತಿಯಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಜೆಟ್ ಅಂದಾಜು ಮಾಡಿವೆ. ಸಾಂಕ್ರಾಮಿಕ ರೋಗ ಹರಡುವ ಮೊದಲೇ ರಾಜ್ಯಗಳು ತಮ್ಮ ಬಜೆಟ್ ಮಂಡಿಸಿದ್ದರಿಂದ ಸಂಭವನೀಯ ಪರಿಷ್ಕರಣೆಯ ದಿಕ್ಕು ಸ್ಪಷ್ಟವಾಗಿದೆ.

ರಾಜ್ಯಗಳ ನೇರ ತೆರಿಗೆಗಳ ವ್ಯಾಪ್ತಿಯಲ್ಲಿ ಆದಾಯದ ಆದ್ಯ ಮೂಲವಾಗಿರುವ ಸ್ಟಾಂಪ್ ಸುಂಕಗಳು ಸಹ ನಿರ್ಮಾಣ ಕ್ಷೇತ್ರದಲ್ಲಿ ಸಂಕೋಚನ, ಕಾರ್ಮಿಕರ ಹಿಮ್ಮುಖ ವಲಸೆ ಮತ್ತು ಸಾಮಾಜಿಕ ಅಂತರದ ಮಾನದಂಡಗಳು ಕೊರತೆ ತಂದೊಡ್ಡಬಹುದು ಎಂದು ಕೇರ್ ರೇಟಿಂಗ್ಸ್ ಎಚ್ಚರಿಕೆ ನೀಡಿದೆ.

ABOUT THE AUTHOR

...view details