ಕರ್ನಾಟಕ

karnataka

ETV Bharat / business

ಚೀನಿ ವಸ್ತುಗಳ ನಿಷೇಧ ಅಭಿಯಾನಕ್ಕೆ ಬೆಂಬಲ ನೀಡಿ.. ಟಾಟಾ, ಬಿರ್ಲಾ,ಅಂಬಾನಿ, ಪ್ರೇಮ್​ಜಿಗೆ ಪತ್ರ!! - ಇಂಡಿಯನ್​ ಇಂಕಾಗೆ ಸಿಎಐಟಿ ಪತ್ರ

ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನದಲ್ಲಿ ತಮ್ಮ ಬೆಂಬಲ ಕೋರಿ ಅಖಿಲ ಭಾರತ ವರ್ತಕರ ಒಕ್ಕೂಟ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಟಾಟಾ ಗ್ರೂಪ್​ ಮುಖ್ಯಸ್ಥ ರತನ್ ಟಾಟಾ, ಅಜೀಮ್ ಪ್ರೇಮ್​ಜಿ, ಗೌತಮ್ ಅದಾನಿ, ಅಜಯ್ ಪಿರಮಾಲ್, ಆನಂದ್ ಮಹೀಂದ್ರಾ ಮತ್ತು ಸುನಿಲ್ ಭಾರತಿ ಮಿತ್ತಲ್ ಸೇರಿದಂತೆ ಹಲವರಿಗೆ ಪತ್ರ ಬರೆದಿದೆ..

ರತನ್ ಟಾಟಾ
Ratan Tata

By

Published : Jun 24, 2020, 3:28 PM IST

ನವದೆಹಲಿ :ದೇಶದ ಅತಿದೊಡ್ಡ ವ್ಯಾಪಾರಿಗಳ ಸಂಘಟನೆ ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ), ಚೀನಿ ವಸ್ತುಗಳ ನಿಷೇಧ ಅಭಿಯಾನಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿ ಭಾರತ ಇಂಕ್​ನ 50 ಮುಖ್ಯಸ್ಥರಿಗೆ ಮನವಿ ಮಾಡಿದೆ.

ಚೀನಾದ ಸರಕುಗಳನ್ನು ಬಹಿಷ್ಕರಿಸುವ ಅಭಿಯಾನದಲ್ಲಿ ತಮ್ಮ ಬೆಂಬಲ ಕೋರಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ, ಟಾಟಾ ಗ್ರೂಪ್​ ಮುಖ್ಯಸ್ಥ ರತನ್ ಟಾಟಾ, ಅಜೀಮ್ ಪ್ರೇಮ್​ಜಿ, ಗೌತಮ್ ಅದಾನಿ, ಅಜಯ್ ಪಿರಮಾಲ್, ಆನಂದ್ ಮಹೀಂದ್ರಾ ಮತ್ತು ಸುನಿಲ್ ಭಾರತಿ ಮಿತ್ತಲ್ ಸೇರಿ ಹಲವರಿಗೆ ಪತ್ರ ಬರೆದಿದೆ. ಕುಮಾರ್ ಮಂಗಲಂ ಬಿರ್ಲಾ, ವಿಕ್ರಮ್ ಕಿರ್ಲೋಸ್ಕರ್, ರಾಹುಲ್ ಬಜಾಜ್, ಶಿವ ನಾಡರ್, ಪಲ್ಲೊಂಜಿ ಮಿಸ್ತ್ರಿ, ಉದಯ್ ಕೋಟಕ್​​​​, ನುಸ್ಲಿ ವಾಡಿಯಾ, ಶಶಿ ರುಯಾ, ಮಧುಕರ್ ಪರೇಖ್, ಹರ್ಷ್ ಮಾರಿವಾಲಾ, ಸತೀಶ್ ರೆಡ್ಡಿ, ಪಂಕಾ ರೆಡ್ಡಿ ಪ್ರಾಮ್, ಪಂಕಜ್ ಪಟೇಲ್​ ಅವರಿಗೂ ಪತ್ರ ಕಳುಹಿಸಿದೆ.

ಲಡಾಖ್ ಗಡಿಯಲ್ಲಿ ಚೀನಾದ ಸೈನ್ಯವು ಅತ್ಯಂತ ರಹಸ್ಯವಾಗಿ ಭಾರತೀಯ ಸೈನ್ಯದ ಮೇಲೆ ಅಮಾನವೀಯ ದಾಳಿ ನಡೆಸಿದೆ. ದೇಶದ 20 ಧೈರ್ಯಶಾಲಿ ಪುತ್ರರನ್ನು ಕ್ರೂರವಾಗಿ ಹತ್ಯೆ ಮಾಡಿದೆ. ಪ್ರತಿ ಭಾರತೀಯನೂ ಚೀನಿಯರ ದೌರ್ಜನ್ಯದ ವಿರುದ್ಧ ತೀವ್ರ ದುಃಖ, ಅಸಮಾಧಾನ ಮತ್ತು ಅಸಹ್ಯ ತುಂಬಿಕೊಂಡಿದ್ದಾರೆ. ಭಾರತದ ಬಗೆಗಿನ ಅವರ ವೈರತ್ವದ ನಿರಂತರ ವರ್ತನೆಯಾಗಿದೆ ಎಂದು ಅಂಬಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ನೀವು ಮತ್ತು ನಿಮ್ಮ ಸಂಸ್ಥೆ ಯಾವಾಗಲೂ ರಾಷ್ಟ್ರದ ಒಗ್ಗಟ್ಟು ಮತ್ತು ಬೆಂಬಲದಲ್ಲಿ ದೃಢವಾಗಿ ನಿಂತಿದೆ. ರಾಷ್ಟ್ರದ ಮುಂದೆ ಏನೂ ಬರುವುದಿಲ್ಲ ಎಂದು ತೋರಿಸಲು ಇದು ನಿಮಗೆ ಉತ್ತಮ ಅವಕಾಶವಾಗಿದೆ. ನಿಮ್ಮ ಬೆಂಬಲ ಮತ್ತು ಉಪಕ್ರಮವು ಖಂಡಿತವಾಗಿಯೂ ದೇಶದ ಇತರ ಕೈಗಾರಿಕೋದ್ಯಮಿಗಳನ್ನು ಅನುಸರಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಭಾರತವನ್ನು ಸ್ವ-ಅವಲಂಬಿತ ದೇಶವನ್ನಾಗಿ ಮಾಡಿ ಎಂದು ಸಿಎಐಟಿ ಅಂಬಾನಿಗೆ ಹೇಳಿದೆ.

ABOUT THE AUTHOR

...view details