ಕರ್ನಾಟಕ

karnataka

ETV Bharat / business

ವಿದ್ಯುತ್ & ಪರಸ್ಪರ ಹಿತಾಸಕ್ತಿ ವಲಯಗಳಲ್ಲಿ ಮಾಹಿತಿ ವಿನಿಮಯಕ್ಕೆ ಕೈಜೋಡಿಸಿದ ಭಾರತ - ಅಮೆರಿಕ

ಭಾರತದ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್​ಸಿ) ಮತ್ತು ಅಮೆರಿಕದ ಫೆಡರಲ್ ಇಂಧನ ನಿಯಂತ್ರಣ ಆಯೋಗ ನಡುವೆ ವಿದ್ಯುತ್ ವಲಯ ಮತ್ತು ಇತರ ಹಿತಾಸಕ್ತಿಯ ಕ್ಷೇತ್ರಗಳಲ್ಲಿನ ಮಾಹಿತಿ ಮತ್ತು ಅನುಭವಗಳ ವಿನಿಮಯದ ತಿಳಿವಳಿಕೆ ಒಪ್ಪಂದಕ್ಕೆ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ ಪ್ರಸ್ತಾವನೆಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

Indo US
ಇಂಡೋ ಯುಎಸ್​

By

Published : Dec 16, 2020, 6:54 PM IST

ನವದೆಹಲಿ:ವಿದ್ಯುತ್ ವಲಯ ಸೇರಿದಂತೆ ಪರಸ್ಪರ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಮಾಹಿತಿ ವಿನಿಮಯಕ್ಕೆ ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗದ (ಸಿಇಆರ್​​ಸಿ) ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಮಾಹಿತಿ ಮತ್ತು ಅನುಭವ ಹಂಚಿಕೊಳ್ಳಲು ಯುನೈಟೆಡ್ ಸ್ಟೇಟ್ಸ್ ಆಫ್ ಫೆಡರಲ್ ಎನರ್ಜಿ ರೆಗ್ಯುಲೇಟರಿ ಕಮಿಷನ್​ಗೂ ಅಂಗೀಕಾರ ನೀಡಿದೆ.

ಭಾರತದ ಜಿಡಿಪಿ ಮೈನಸ್​ ಶೇ 10 ರಿಂದ ಮೈನಸ್​ ಶೇ 7.4ಕ್ಕೆ ಸುಧಾರಿಸುತ್ತೆ: SBI ವರದಿ

ಭಾರತದ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್​ಸಿ) ಮತ್ತು ಅಮೆರಿಕದ ಫೆಡರಲ್ ಇಂಧನ ನಿಯಂತ್ರಣ ಆಯೋಗ ನಡುವೆ ವಿದ್ಯುತ್ ವಲಯ ಮತ್ತು ಇತರ ಹಿತಾಸಕ್ತಿಯ ಕ್ಷೇತ್ರಗಳಲ್ಲಿನ ಮಾಹಿತಿ ಮತ್ತು ಅನುಭವಗಳ ವಿನಿಮಯದ ತಿಳಿವಳಿಕೆ ಒಪ್ಪಂದಕ್ಕೆ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ ಪ್ರಸ್ತಾವನೆಗೆ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.

  • ಇಂಧನ - ಸಂಬಂಧಿತ ಸಮಸ್ಯೆಗಳನ್ನು ಗುರುತಿಸಿ ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಮಾಹಿತಿ ಮತ್ತು ನಿಯಂತ್ರಕ ರೂಢಿಗಳ ವಿನಿಮಯಕ್ಕಾಗಿ ವಿಷಯಗಳು ಮತ್ತು ಸಂಭವನೀಯ ಕಾರ್ಯಸೂಚಿಗಳನ್ನು ಅಭಿವೃದ್ಧಿಪಡಿಸಲು
  • ಪರಸ್ಪರರ ಸೌಲಭ್ಯಗಳ ಚಟುವಟಿಕೆಗಳಲ್ಲಿ ಭಾಗವಹಿಸಲು ಆಯುಕ್ತರು ಮತ್ತು ಸಿಬ್ಬಂದಿ ಭೇಟಿ ಆಯೋಜಿಸಲು
  • ವಿಚಾರ ಗೋಷ್ಠಿಗಳು, ಭೇಟಿ ಮತ್ತು ವಿನಿಮಯಗಳಲ್ಲಿ ಭಾಗವಹಿಸಲು
  • ಪರಸ್ಪರ ಹಿತಾಸಕ್ತಿಗಳ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಿ ಮತ್ತು ಭಾಗವಹಿಸುವಿಕೆ ಹೆಚ್ಚಿಸಲು
  • ಪ್ರಾಯೋಗಿಕ ಮತ್ತು ಪರಸ್ಪರ ಆಸಕ್ತಿಯಿರುವ ಇಂಧನ ಸಮಸ್ಯೆಗಳು ಮತ್ತು ಇತರ ಸಿಬ್ಬಂದಿಗಳ (ನಿರ್ವಹಣೆ ಅಥವಾ ತಾಂತ್ರಿಕ) ಕುರಿತು ವಾಗ್ಮಿಗಳನ್ನು ಒದಗಿಸಲು

ABOUT THE AUTHOR

...view details