ಕರ್ನಾಟಕ

karnataka

ETV Bharat / business

ಲುಹ್ರಿ ಜಲವಿದ್ಯುತ್​ಗೆ 1,810 ಕೋಟಿ ರೂ. ಹೂಡಿಕೆ ಪ್ರಸ್ತಾವನೆಗೆ ಮೋದಿ ಕ್ಯಾಬಿನೆಟ್​ ಅಸ್ತು - Luhri Stage-I Hydro Power Project Union

ಸಟ್ಲೆಜ್ ನದಿಯಲ್ಲಿ 210 ಮೆಗಾವ್ಯಾಟ್ ಲುಹ್ರಿ ಹಂತ -1 ಜಲ ವಿದ್ಯುತ್ ಯೋಜನೆಯ ಹೂಡಿಕೆ ಪ್ರಸ್ತಾಪವನ್ನು ಸಹ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. 1,810 ಕೋಟಿ ರೂ. ಯೋಜನಾ ವೆಚ್ಚವು 62 ತಿಂಗಳ ಅವಧಿಯಲ್ಲಿ ಕಾರ್ಯಾರಂಭ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ಈ ಯೋಜನೆಗೆ ಮೋದಿ ಸಂಪುಟವು 1,810 ಕೋಟಿ ರೂ. ಹೂಡಿಕೆ ಮಾಡಲು ಅನುಮೋದನೆ ನೀಡಿದೆ.

Luhri Hydro Power Project
ಲುಹ್ರಿ ಜಲವಿದ್ಯುತ್​

By

Published : Nov 4, 2020, 4:00 PM IST

ನವದೆಹಲಿ:ದೂರಸಂಪರ್ಕ / ಐಸಿಟಿ ಕ್ಷೇತ್ರದಲ್ಲಿ ಸಹಕಾರದ ಕುರಿತು ಭಾರತ ಮತ್ತು ಬ್ರಿಟನ್​ ನಡುವೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಆರೋಗ್ಯ ಮತ್ತು ಔಷಧ ಕ್ಷೇತ್ರದಲ್ಲಿ ಸಹಕಾರ ಕುರಿತು ಭಾರತ ಮತ್ತು ಇಸ್ರೇಲ್ ನಡುವಿನ ತಿಳಿವಳಿಕೆ ಪತ್ರದ ಒಪ್ಪಂದವನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.

ಸಟ್ಲೆಜ್ ನದಿಯಲ್ಲಿ 210 ಮೆಗಾವ್ಯಾಟ್ ಲುಹ್ರಿ ಹಂತ -1 ಜಲ ವಿದ್ಯುತ್ ಯೋಜನೆಯ ಹೂಡಿಕೆ ಪ್ರಸ್ತಾಪವನ್ನು ಸಹ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. 1,810 ಕೋಟಿ ರೂ. ಯೋಜನಾ ವೆಚ್ಚವು 62 ತಿಂಗಳ ಅವಧಿಯಲ್ಲಿ ಕಾರ್ಯಾರಂಭ ಮಾಡುವ ಗುರಿ ಇರಿಸಿಕೊಳ್ಳಲಾಗಿದೆ. ವಾರ್ಷಿಕವಾಗಿ 6.1 ಲಕ್ಷ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಕಡಿಮೆ ಮಾಡಲು ಇದು ನೆರವಾಗಲಿದೆ.

ABOUT THE AUTHOR

...view details