ಕರ್ನಾಟಕ

karnataka

By

Published : Dec 4, 2019, 5:08 PM IST

ETV Bharat / business

'ವೈಯಕ್ತಿಕ ಡೇಟಾ ಭದ್ರತಾ ಮಸೂದೆ'ಗೆ ಕ್ಯಾಬಿನೆಟ್​ ಅಸ್ತು... FB, Twitter ಡೇಟಾ ಕದ್ದರೆ ಶಿಕ್ಷೆ ಗ್ಯಾರಂಟಿ

ವೈಯಕ್ತಿಕ ಡೇಟಾ ಭದ್ರತೆ ಮಸೂದೆ 2018ಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಎನ್‌. ಶ್ರೀಕೃಷ್ಣ ನೇತೃತ್ವದ ಉನ್ನತ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿ, ಅವರಿಂದ ವರದಿಯನ್ನು ಸ್ವೀಕರಿಸಿತ್ತು. ವ್ಯಕ್ತಿಯ ವೈಯಕ್ತಿಕ ಮಾಹಿತಿ ಮೇಲೆ ಆತನಿಗೇ ಸಂಪೂರ್ಣ ನಿಯಂತ್ರಣ ಇರಬೇಕು ಎಂಬುದು ಮಸೂದೆಯ ಪ್ರಮುಖ ಅಂಶವಾಗಿರಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ದೊರೆತಿದ್ದು, ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಮಂಡನೆ ಆಗಲಿದೆ.

Personal Data Protection Bill
ವೈಯಕ್ತಿಕ ಡೇಟಾ ಭದ್ರತಾ ಮಸೂದೆ

ನವದೆಹಲಿ: ಭಾರಿ ಚರ್ಚೆಗೆ ಕಾರಣವಾಗಿದ್ದ 'ವೈಯಕ್ತಿಕ ಡೇಟಾ ಭದ್ರತೆ ಮಸೂದೆ'ಗೆ ಕೇಂದ್ರ ಸಚಿವ ಸಂಪುಟವು ಗ್ರೀನ್​ ಸಿಗ್ನಲ್​ ನೀಡಿದ್ದು, ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಮಂಡನೆಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ವೈಯಕ್ತಿಕ ದತ್ತಾಂಶಗಳ ಸಂಗ್ರಹಣೆ, ಸಂಸ್ಕರಣೆ, ವ್ಯಕ್ತಿಗಳ ಒಪ್ಪಿಗೆ, ದಂಡ ಮತ್ತು ಪರಿಹಾರ, ನೀತಿ ಸಂಹಿತೆ ಮತ್ತು ಜಾರಿಗೊಳಿಸುವ ಮಾದರಿಯ ಕುರಿತು ಈ ಮಸೂದೆಯು ವಿಶಾಲವಾದ ಮಾರ್ಗಸೂಚಿಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ವೈಯಕ್ತಿಕ ಡೇಟಾ ಭದ್ರತೆ ಮಸೂದೆ 2018ಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ. ಎನ್‌. ಶ್ರೀಕೃಷ್ಣ ನೇತೃತ್ವದ ಉನ್ನತ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿ, ಅವರಿಂದ ವರದಿಯನ್ನು ಸ್ವೀಕರಿಸಿತ್ತು. ವ್ಯಕ್ತಿಯ ವೈಯಕ್ತಿಕ ಮಾಹಿತಿಯ ಮೇಲೆ ಆತನಿಗೇ ಸಂಪೂರ್ಣ ನಿಯಂತ್ರಣ ಇರಬೇಕು ಎಂಬುದು ಮಸೂದೆಯ ಪ್ರಮುಖ ಅಂಶವಾಗಿರಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.

ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಪ್ರಕಾಶ್ ಜಾವಡೇಕರ್​

ವ್ಯಕ್ತಿಯೊಬ್ಬರ ವೈಯಕ್ತಿಕ/ಖಾಸಗಿ ಮಾಹಿತಿ ಎಂದು ಅರ್ಥೈಸಲಾಗಿದೆ. ವ್ಯಕ್ತಿಯ ವೈಯಕ್ತಿಕ ವಿವರ, ಲಿಂಗ, ಜೈವಿಕ ಮಾಹಿತಿ, ಆರೋಗ್ಯ, ಕೆಲಸ, ಬ್ಯಾಂಕಿಂಗ್‌, ಹವ್ಯಾಸ, ಜಾತಿ-ಧರ್ಮ, ರಹಸ್ಯ ಪಾಸ್‌ವರ್ಡ್‌, ರಾಜಕೀಯ ನಿಲುವುಗಳನ್ನು ಖಾಸಗಿ ಮಾಹಿತಿ/ದತ್ತಾಂಶ/ಡೇಟಾ ಎಂದು ಪರಿಗಣಿಸಲಾಗುತ್ತದೆ.

ಸರ್ಕಾರಿ ಅಥವಾ ಖಾಸಗಿ ಎಜೆನ್ಸಿಯು ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮುನ್ನ ಆ ವ್ಯಕ್ತಿಯಿಂದ ಒಪ್ಪಿಗೆ ಪಡೆದುಕೊಳ್ಳಬೇಕಾಗುತ್ತದೆ. ಈ ಮಾಹಿತಿಗಳನ್ನು ಬಹಿರಂಗಪಡಿಸುವ, ಅವುಗಳ ಬಳಕೆಯನ್ನು ನಿರ್ಬಂಧಿಸುವ, ಪರಿಷ್ಕರಿಸುವ ಮತ್ತು ಅಳಿಸಿ ಹಾಕುವ ಎಲ್ಲಾ ಹಕ್ಕೂ ವ್ಯಕ್ತಿಗೆ ಇರುತ್ತದೆ. ತನ್ನ ವೈಯಕ್ತಿಕ ಡೇಟಾ ಮೇಲೆ ವ್ಯಕ್ತಿಗೆ ಸಂಪೂರ್ಣ ನಿಯಂತ್ರಣವಿರುತ್ತದೆ.

ABOUT THE AUTHOR

...view details