ಕರ್ನಾಟಕ

karnataka

ETV Bharat / business

ನೈಸರ್ಗಿಕ ಅನಿಲ ಮಾರುಕಟ್ಟೆ ಸುಧಾರಣೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ - Indian

ಕೇಂದ್ರದ ನೈಸರ್ಗಿಕ ಅನಿಲ ಮಾರುಕಟ್ಟೆ ಸುಧಾರಣೆ ಕ್ರಮವು ಹೂಡಿಕೆದಾರರನ್ನು ಆಕರ್ಷಿಸುತ್ತದೆ ಮತ್ತು ಅನಿಲ ಆಧಾರಿತ ಆರ್ಥಿಕತೆಗೆ ಭಾರತದ ಒತ್ತಡಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆಯಿದೆ. ಪ್ರಸ್ತುತ 80 ಮಿಲಿಯನ್ ಸ್ಟ್ಯಾಂಡರ್ಡ್ ಘನ ಮೀಟರ್​ನಿಂದ (ಎಂಎಂಎಸ್​ಸಿಎಂಡಿ) ದೇಶೀಯ ಅನಿಲ ಉತ್ಪಾದನೆಯನ್ನು ದಿನಕ್ಕೆ ಹೆಚ್ಚುವರಿಯಾಗಿ 40 ಎಂಎಂಸಿಎಂಡಿ ಹೆಚ್ಚಿಸಲು ಈ ನಿರ್ಧಾರ ಸಹಾಯ ಮಾಡುತ್ತದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

Natural Gas
ನೈಸರ್ಗಿಕ ಅನಿಲ

By

Published : Oct 7, 2020, 5:49 PM IST

ನವದೆಹಲಿ: ವಿವಿಧ ಗುತ್ತಿಗೆ ಪದ್ಧತಿಗಳಲ್ಲಿ ಅನಿಲ ಮಾರುಕಟ್ಟೆ ಬೆಲೆ ಕಂಡುಕೊಳ್ಳಲು ಪ್ರಮಾಣಿತ ಕಾರ್ಯವಿಧಾನ ರೂಪಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ನೈಸರ್ಗಿಕ ಅನಿಲ ಮಾರುಕಟ್ಟೆ ಸುಧಾರಣೆಗಳಿಗೆ ಅನುಮೋದನೆ ನೀಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಪ್ರಧಾನ್, ಅನಿಲ ಮಾರುಕಟ್ಟೆ ಬೆಲೆಯ ಪಾರದರ್ಶಕ ಆವಿಷ್ಕಾರಕ್ಕಾಗಿ ಡೈರೆಕ್ಟರೇಟ್ ಜನರಲ್ ಆಫ್ ಹೈಡ್ರೋಕಾರ್ಬನ್​ನಿಂದ (ಡಿಜಿಹೆಚ್) ಪ್ರಮಾಣೀಕೃತ ಇ - ಬಿಡ್ಡಿಂಗ್ ಕಾರ್ಯವಿಧಾನವನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.

ಕೇಂದ್ರದ ಈ ಕ್ರಮವು ಹೂಡಿಕೆದಾರರನ್ನು ಆಕರ್ಷಿಸುತ್ತದೆ ಮತ್ತು ಅನಿಲ ಆಧಾರಿತ ಆರ್ಥಿಕತೆಗೆ ಭಾರತದ ಒತ್ತಡಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆಯಿದೆ. ಪ್ರಸ್ತುತ 80 ಮಿಲಿಯನ್ ಸ್ಟ್ಯಾಂಡರ್ಡ್ ಘನ ಮೀಟರ್​ನಿಂದ (ಎಂಎಂಎಸ್​ಸಿಎಂಡಿ) ದೇಶೀಯ ಅನಿಲ ಉತ್ಪಾದನೆಯನ್ನು ದಿನಕ್ಕೆ ಹೆಚ್ಚುವರಿಯಾಗಿ 40 ಎಂಎಂಸಿಎಂಡಿ ಹೆಚ್ಚಿಸಲು ಈ ನಿರ್ಧಾರ ಸಹಾಯ ಮಾಡುತ್ತದೆ ಎಂದರು.

ಡಿಸ್ಕವರ್ಡ್ ಸ್ಮಾಲ್ ಫೀಲ್ಡ್ ಪಾಲಿಸಿ (ಡಿಎಸ್ಎಫ್), ಹೈಡ್ರೋಕಾರ್ಬನ್ ಎಕ್ಸ್‌ಪ್ಲೋರೇಷನ್ ಆ್ಯಂಡ್ ಲೈಸೆನ್ಸಿಂಗ್ ಪಾಲಿಸಿ (ಹೆಲ್ಪ್) ಮತ್ತು ಕೋಲ್ ಬೆಡ್ ಮೀಥೇನ್ (ಸಿಬಿಎಂ) ಒಪ್ಪಂದಗಳ ಅಡಿ ನೀಡಲಾಗುವ ಬ್ಲಾಕ್‌ಗಳಿಂದ ಅನಿಲದ ಬೆಲೆ ಮತ್ತು ಮಾರುಕಟ್ಟೆ ಸ್ವಾತಂತ್ರ್ಯವನ್ನು ಸರ್ಕಾರ ಈಗಾಗಲೇ ಒದಗಿಸಿದೆ. ಬುಧವಾರದ ನಿರ್ಧಾರವು ಅನಿಲದ ಮಾರುಕಟ್ಟೆ ಬೆಲೆ ಅನ್ವೇಷಣೆಯು ಪ್ರಮಾಣಿತ ಕಾರ್ಯವಿಧಾನದ ಅಡಿ ತರುತ್ತದೆ.

ABOUT THE AUTHOR

...view details