ನವದೆಹಲಿ: ಹೊಸದಾಗಿ ಜಿಎಸ್‌ಟಿ ನೋಂದಣಿ ಮಾಡುವವರಿಗೆ ಜಿಎಸ್‌ಟಿ ಸಮಿತಿ ಬಹುಮುಖ್ಯ ಮಾಹಿತಿಯೊಂದನ್ನು ಈ ಹಿಂದೆ ನೀಡಿತ್ತು. ಜಿಎಸ್‌ಟಿ ನೋಂದಣಿಗೆ ಇನ್ಮುಂದೆ ಆಧಾರ್ ಸಂಖ್ಯೆ ಕಡ್ಡಾಯವಾಗಿ ನೀಡಬೇಕೆಂದು ಸೂಚಿಸಿತ್ತು.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ರಾಷ್ಟ್ರಾದ್ಯಂತ ವಿಧಿಸಲಾಗಿದ್ದ ಲಾಕ್ಡೌನ್ನಿಂದ ಅದರ ಅನುಷ್ಠಾನವನ್ನು ಮುಂದೂಡಲಾಯಿತು. ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಕಳೆದ ವಾರ ಜಿಎಸ್‌ಟಿ ನೋಂದಣಿಗೆ ಆಧಾರ್ ದೃಢೀಕರಣವನ್ನು 2020ರ ಆಗಸ್ಟ್ 21ರಿಂದ ಜಾರಿಗೆ ತಂದಿತು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಂದಣಿಗೆ ಅರ್ಜಿ ಸಲ್ಲಿಸುವ ಆಧಾರ್ ಸಂಖ್ಯೆ ನೀಡುವ ವ್ಯವಹಾರಗಳಿಗೆ ಮೂರು ಕೆಲಸದ ದಿನಗಳಲ್ಲಿ ಅನುಮೋದನೆ ಸಿಗಲಿದೆ. ವ್ಯವಹಾರಗಳಿಗೆ ಆಧಾರ್ ಸಂಖ್ಯೆ ಒದಗಿಸದಿದ್ದಲ್ಲಿ ವ್ಯವಹಾರಿಕ ಸ್ಥಳದ ಭೌತಿಕದ ಪರಿಶೀಲನೆಯ ನಂತರವೇ ಜಿಎಸ್‌ಟಿ ನೋಂದಣಿ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಿದೆ.