ನವದೆಹಲಿ:ಫೆಬ್ರುವರಿ 1ರಂದು ಮಂಡನೆ ಆಗಲಿರುವ ಕೇಂದ್ರ ಬಜೆಟ್ ಆರ್ಥಿಕತೆಯನ್ನು ಮೇಲೆತ್ತುವ 'ಕ್ರಿಯಾ ಯೋಜನೆ'ಗಳನ್ನು ಒಳಗೊಂಡಿರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುಳಿವು ನೀಡಿದ್ದಾರೆ.
ಆರ್ಥಿಕತೆ ಮೇಲೆತ್ತುವ ಕ್ರಿಯಾ ಯೋಜನೆಯ ಬಜೆಟ್ ಮಂಡಿಸುತ್ತೇವೆ: ಜಾವಡೇಕರ್ - 2020 ಬಜೆಟ್
ಅಂತಾರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಭಾರತದ ಬೆಳವಣಿಗೆಯ ದರವನ್ನು ಕೆಳಮಟ್ಟಕ್ಕೆ ಪರಿಷ್ಕರಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಆರ್ಥಿಕತೆಯು 'ಪುನರುಜ್ಜೀವನದ' ಹಾದಿಯಲ್ಲಿದೆ. ಅದರ ಬಗ್ಗೆ ಯಾರೂ ನಿರಾಶಾವಾದದ ದೃಷ್ಟಿಕೋನವನ್ನು ಹೊಂದಿರಬಾರದು ಎಂದು ಸಚಿವ ಸಂಪುಟ ಸಭೆಯ ಬಳಿಕ ಹೇಳಿದ್ರು.
ಜಾವಡೇಕರ್
ಇಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಭಾರತದ ಬೆಳವಣಿಗೆಯ ದರವನ್ನು ಕೆಳಮಟ್ಟಕ್ಕೆ ಪರಿಷ್ಕರಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆರ್ಥಿಕತೆಯು 'ಪುನರುಜ್ಜೀವನದ' ಹಾದಿಯಲ್ಲಿದೆ. ಅದರ ಬಗ್ಗೆ ಯಾರೂ ನಿರಾಶಾವಾದದ ದೃಷ್ಟಿಕೋನವನ್ನು ಹೊಂದಿರಬಾರದು ಎಂದು ಸಚಿವ ಸಂಪುಟ ಸಭೆಯ ಬಳಿಕ ಹೇಳಿದರು.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್
ಇದೇ ವೇಳೆ ಎನ್ಪಿಆರ್ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗಲೇ ಜಾರಿಗೆ ತರಲಾಗಿತ್ತು. ಆಗ ಉತ್ತಮವೆಂದು ಹೇಳಿಕೊಂಡಿದ್ದ ಕಾಂಗ್ರೆಸ್, ಈಗ ಕೆಟ್ಟದಾಗಿ ಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದ್ರು.