ನವದೆಹಲಿ: ಕೇಂದ್ರ ಸರ್ಕಾರದ 2020-21ನೇ ಸಾಲಿನ ಬಜೆಟ್ ಅಧಿವೇಶನವು ಜನವರಿ 31ರಂದು ಆರಂಭವಾಗಲಿದ್ದು, ಫೆಬ್ರವರಿ 1ರಂದು ಮುಂಗಡ ಪತ್ರ ಮಂಡನೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಜ.31ಕ್ಕೆ ಬಜೆಟ್ ಅಧಿವೇಶನ ಶುರು, ಫೆ.1ಕ್ಕೆ ನಿರ್ಮಲಾ ಸೀತಾರಾಮನ್ 2ನೇ ಬಜೆಟ್ ಮಂಡನೆ ಸಾಧ್ಯತೆ..! - ಬಜೆಟ್
ಸಂಸತ್ತಿನ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಬಜೆಟ್ ಅಧಿವೇಶನದ ದಿನಾಂಕಗಳನ್ನು ಶಿಫಾರಸು ಮಾಡಿದ ನಂತರ ಅಂತಿಮ ದಿನಾಂಕ ಸರ್ಕಾರವು ತಿಳಿಸುತ್ತದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಿಸಿಪಿಎ ಸಭೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನವು ಜನವರಿ 31ರಂದು ಆರಂಭ ಹಾಗೂ ಫೆಬ್ರವರಿ 1ರಂದು ಬಜೆಟ್ ಮಂಡನೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಬಜೆಟ್
ಸಂಸತ್ತಿನ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಪಿಎ) ಅಧಿವೇಶನದ ದಿನಾಂಕಗಳನ್ನು ಶಿಫಾರಸು ಮಾಡಿದ ನಂತರ ಅಂತಿಮ ದಿನಾಂಕ ಸರ್ಕಾರ ತಿಳಿಸುತ್ತದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಿಸಿಪಿಎ ಸಭೆ ಶೀಘ್ರದಲ್ಲೇ ನಡೆಯುವ ಸಾಧ್ಯತೆ ಇದ್ದು, ನಂತರ ಈ ಬಗ್ಗೆ ಶಿಫಾರಸು ಮಾಡಲಾಗುತ್ತದೆ.
ಸಂಸತ್ತಿನ ಜಂಟಿ ಸಭೆಗೆ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಆರ್ಥಿಕ ಸಮೀಕ್ಷೆಯನ್ನು ಅದೇ ದಿನ ಮಂಡಿಸುವ ಸಾಧ್ಯತೆ ಇದೆ. ಈ ಅಧಿವೇಶನವು ಏಪ್ರಿಲ್ ಅಂತ್ಯದವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಿವೆ.