ಕರ್ನಾಟಕ

karnataka

ETV Bharat / business

ಬೆಟ್ಟದಷ್ಟು ನಿರೀಕ್ಷೆಯ ನಿರ್ಮಲಾ ಬಜೆಟ್:​ 'ಮಾಡು ಇಲ್ಲವೇ ಮಡಿ ಬಜೆಟ್​'ಗೆ ಇಂಡಿಯಾ ರೇಟಿಂಗ್ಸ್​ ಟಿಪ್ಸ್​ಗಳಿವು! - ಬೇಡಿಕೆ ಸಮಸ್ಯೆಗಳತ್ತ ಬಜೆಟ್​

ರಾಜ್ಯಗಳಿಗೆ ಸಾಕಷ್ಟು ಹಣ ನೀಡಿ, ಅಗತ್ಯವಿದ್ದಾಗ ಕೇಂದ್ರ ಬೆಂಬಲದ ಭರವಸೆ ನೀಡಬೇಕು. ಇವುಗಳಲ್ಲಿ ಕೆಲವನ್ನಾದರೂ ಸರ್ಕಾರ ಒಪ್ಪಿಕೊಂಡರೆ, ನಾಮಮಾತ್ರ ಜಿಡಿಪಿ ಕ್ಲಿಪಿಂಗ್ ಅನ್ನು ನಾವು ಶೇ 14ಕ್ಕೆ ನೋಡಲು ಸಿಗುತ್ತದೆ. ನೈಜ ಜಿಡಿಪಿ 2022ರ ಹಣಕಾಸು ವರ್ಷದಲ್ಲಿ ಶೇ 9.5-10 ಮತ್ತು ಹಣಕಾಸಿನ ಕೊರತೆ ಜಿಡಿಪಿಯ ಶೇ 6.2ರಷ್ಟು ಎಂದು ಇಂಡಿಯಾ ರೇಟಿಂಗ್ಸ್ ಸಲಹೆ ನೀಡಿದೆ.

Budget
Budget

By

Published : Jan 22, 2021, 2:22 PM IST

ಮುಂಬೈ:ಮಾರ್ಚ್‌ನಿಂದ ಸಾಂಕ್ರಾಮಿಕ ರೋಗವು ಆರ್ಥಿಕತೆ ಕುಗ್ಗಿಸಲು ಪ್ರಾರಂಭಿಸಿದಾಗ ಕೇಂದ್ರೀಕೃತವಾಗಿರುವ ಪೂರೈಕೆ ಬದಿಯ ಸವಾಲುಗಳನ್ನು ಬಗೆಹರಿಸುವ ಮೂಲಕ ಬೇಡಿಕೆಯ ಕುರಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್​ನ ಗಮನವನ್ನು ಮರು ನಿರ್ದೇಶಿಸಬೇಕಿದೆ ಎಂದು ವರದಿಯೊಂದು ತಿಳಿಸಿದೆ.

ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್​ನಿಂದಾಗಿ ಜೂನ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ 23.9ರಷ್ಟು ಕುಸಿದಿತ್ತು. ಈ ಸಂಕೋಚನ ನಾಟಕೀಯ ಚೇತರಿಕೆ ಕಂಡಿದ್ದು, 2ನೇ ತ್ರೈಮಾಸಿಕದಲ್ಲಿ ಕೇವಲ ಶೇ 7.5ರಷ್ಟು ಸಂಕೋಚನಕ್ಕೆ ಸುಧಾರಿಸಿತು. ದ್ವಿತೀಯಾರ್ಧದಲ್ಲಿ ಗ್ರೀನ್​ ಝೋನ್​ ಅನ್ನು ಮತ್ತೆ ಪ್ರವೇಶಿಸುವ ಸಾಧ್ಯತೆಯಿದೆ. ಜಿಡಿಪಿಯು 2021ರ ಹಣಕಾಸು ವರ್ಷದಲ್ಲಿ ಶೇ 7.5-8ರಷ್ಟು ಸಂಕೋಚನದೊಂದಿಗೆ ಕೊನೆಗೊಳ್ಳುವ ನಿರೀಕ್ಷೆ ಇದೆ.

ಸರ್ಕಾರನ ತನ್ನ ಗೇರುಗಳನ್ನು ಬದಲಾಯಿಸಲು ಮತ್ತು ಬೇಡಿಕೆಯತ್ತ ಗಮನಹರಿಸಲು ಇದುವೇ ಹೆಚ್ಚು ಸೂಕ್ತವಾದ ಸಮಯ. ಪೂರೈಕೆ ಬದಿಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯಾವುದೇ ವಿಧದ ತಪ್ಪಿಲ್ಲ. ಏಕೆಂದರೆ, ಮುರಿದ ಬಿದ್ದ ಪೂರೈಕೆ ಸರಪಳಿ ಪುನಃಸ್ಥಾಪಿಸಲು ಅಥವಾ ಬೆಳವಣಿಗೆ ಸಾಧಿಸುವುದು ಅಗತ್ಯವಾಗಿತ್ತು. ಆದರೆ, ಸಾಕಷ್ಟು ಬೇಡಿಕೆಯ ಕೊರತೆಯು ಚೇತರಿಕೆಗೆ ಅಪಾಯವನ್ನು ಉಂಟುಮಾಡಬಹುದು. ಮತ್ತೊಂದು ಸುತ್ತಿನ ಪರಿಣಾಮಕ್ಕೆ ಕಾರಣವಾಗಬಹುದು ಎಂದು ಇಂಡಿಯಾ ರೇಟಿಂಗ್ಸ್‌ನ ಸುನೀಲ್ ಕುಮಾರ್ ಸಿನ್ಹಾ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಬಿಲಿಯನೇರ್​ ಎಲಾನ್​ ಮಸ್ಕ್​ ಮನಕದ್ದ ಈ ಐಡಿಯಾ ಸಾಧಿಸಿದರೆ ಸಿಗುತ್ತೆ 730 ಕೋಟಿ ರೂ. ಪ್ರೈಸ್​!

2012 ರಿಂದ, 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರದ ಭಾರೀ ಪ್ರಚೋದನೆಯ ಪ್ರಮಾಣಗಳ ನಂತರವೂ ಆರ್ಥಿಕತೆಯಲ್ಲಿ ಒಂದಿಷ್ಟು ಏರುಪೇರು ಕಂಡುಬಂದು ಬಳಕೆಯ ಬೇಡಿಕೆಯ ಸಂಪರ್ಕಗಳಲ್ಲಿ ವ್ಯತ್ಯಾಸ ಕಂಡುಬಂದಿತ್ತು ಎಂಬುದನ್ನು ನಾವು ಗಮನಿಸಬಹುದು. ಇದರಿಂದಾಗಿ ಕಂಪನಿಗಳು ಹೂಡಿಕೆಗಳನ್ನು ತ್ಯಜಿಸುತ್ತವೆ ಮತ್ತು ವಿಸ್ತರಣೆಗಳನ್ನು ನಿಲ್ಲಿಸುತ್ತವೆ. ಪರಿಣಾಮವಾಗಿ ಕಡಿಮೆ ವೇತನ ಹೆಚ್ಚಳ ಮತ್ತು ಉದ್ಯೋಗ ಸೃಷ್ಟಿ ಬಳಕೆಯ ಬೇಡಿಕೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಗುತ್ತದೆ.

ವಿವಿಧ ಸರ್ಕಾರಿ ಅಥವಾ ಆರ್‌ಬಿಐ ಕ್ರಮಗಳ ಕಾರಣದಿಂದಾಗಿ ಸರಬರಾಜು ಬದಿಯ ಸಮಸ್ಯೆಗಳನ್ನು ಪುನಃಸ್ಥಾಪಿಸಿದ ಬಳಿಕವೂ ಸರಕು ಮತ್ತು ಸೇವೆಗಳಿಗೆ ಸಮರ್ಪಕ ಬೇಡಿಕೆ ಇಲ್ಲದ ಕಾರಣ ಶೀಘ್ರದಲ್ಲೇ ತೊಂದರೆಗಳಿಗೆ ಸಿಲುಕಬಹುದು ಎಂದು ಸಿನ್ಹಾ ಎಚ್ಚರಿಸಿದ್ದಾರೆ.

ಆರ್ಥಿಕತೆಯು ಕೆಲವು ಹಸಿರು ಚಿಗುರಿನ ಹೆಚ್ಚಿನ ಸೂಚಕಗಳೊಂದಿಗೆ ಉತ್ಪಾದನೆಯ ಸಾಂಕ್ರಾಮಿಕ ಪೂರ್ವದ ಮಟ್ಟ ತಲುಪಿದೆ. ಇದು ಹಬ್ಬದ ಅಥವಾ ಪೆಂಟ್-ಅಪ್ (ಬಂಧಿತ ಡಿಮ್ಯಾಂಡ್​) ಬೇಡಿಕೆಯ ಸಂಯೋಜನೆಯಿಂದ ಉತ್ತೇಜಿತವಾಗಿತ್ತು. ಆದರೆ, ಸತತ ಎರಡು ತಿಂಗಳ ಸಕಾರಾತ್ಮಕ ಬೆಳವಣಿಗೆಯ ನಂತರ, ಕಾರ್ಖಾನೆಯ ಉತ್ಪಾದನೆಯು ನವೆಂಬರ್‌ನಲ್ಲಿ ಸಂಕುಚಿತಗೊಂಡಿತು. ಇದು ಚೇತರಿಕೆಯ ದುರ್ಬಲತೆ ತೋರಿಸುತ್ತದೆ. ಆದ್ದರಿಂದ ಸೂಕ್ತವಾದ ಬೇಡಿಕೆಯ ಬದಿಯ ಪೂರೈಕೆ ಸುತ್ತಲಿನ ಕ್ರಮಗಳಷ್ಟೇ ಮುಖ್ಯವಾಗಿದೆ ಎಂದು ವಿಶ್ಲೇಷಿಸಿದರು.

ಒಟ್ಟಾರೆ ಬೇಡಿಕೆ, ಖರ್ಚು ಮರುಹಂಚಿಕೆ ಮತ್ತು ಹೆಚ್ಚಿನ ತೆರಿಗೆ ರಹಿತ ಆದಾಯ ಸಜ್ಜುಗೊಳಿಸುವತ್ತ ಗಮನಹರಿಸಲು ಫೆಬ್ರವರಿ 1ರಂದು ಮಂಡಿಸಲಿರುವ ಬಜೆಟ್ ಮೇಲೆ ನಿರೀಕ್ಷೆ ಇರಿಸಿಕೊಂಡು ಸಿನ್ಹಾ ಅವರು ಈ ಕೆಳಗಿನ ಆದ್ಯತೆಗಳನ್ನು ಪಟ್ಟಿಮಾಡಿದ್ದಾರೆ.

ಮೂಲಸೌಕರ್ಯ ಖರ್ಚು ಹೆಚ್ಚಿಸಿ. ಕಡಿಮೆ ಸಮಯದಲ್ಲಿ ಉದ್ಯೋಗದ ತೀವ್ರತೆ ಹೆಚ್ಚಿಸುತ್ತದೆ. ಹಿಂದಿನ ಐಸಿಐಸಿಐ, ಐಡಿಬಿಐ ಮತ್ತು ಐಎಫ್‌ಸಿಐ ಮಾದರಿಯಲ್ಲಿ ಅಭಿವೃದ್ಧಿ ಹಣಕಾಸು ಸಂಸ್ಥೆ ಸ್ಥಾಪಿಸಿ. ಅದು ಬಂಡವಾಳ ಹೊಂದಬಹುದು ಅಥವಾ ಅದೇ ತರಬಹುದು. ಬಡ ಕುಟುಂಬಗಳಿಗೆ ನೀಡುತ್ತಿರುವ ಪರಿಹಾರ / ಆದಾಯ ಬೆಂಬಲ ಮುಂದುವರಿಸಿರಿ. ಎಂಜಿಎನ್‌ಆರ್‌ಇಜಿಎಗೆ ಹೆಚ್ಚಿನ ಹಣ ನಿಗದಿಪಡಿಸಿ. ಏಕೆಂದರೆ ಇದು ಗ್ರಾಮೀಣ ಕುಟುಂಬಗಳಿಗೆ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೆ ವಲಸೆ ಬಂದ ಕಾರ್ಮಿಕರಿಗೂ ಸುರಕ್ಷತಾ ಜಾಲ ಒದಗಿಸುತ್ತದೆ.

ರಿಯಲ್ ಎಸ್ಟೇಟ್, ವಿಶೇಷವಾಗಿ ಕೈಗೆಟುಕುವ ವಸತಿ ವಿಭಾಗಕ್ಕೆ ಹೆಚ್ಚಿನ ಬೆಂಬಲ ನೀಡಿ. ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳು ಈಗಲೂ ಹಣಕಾಸಿನ ಭದ್ರತೆಗಾಗಿ ತಲೆಕೆಡಿಸಿಕೊಳ್ಳುತ್ತಿರುವುದರಿಂದ 2022ರ ಹಣಕಾಸು ವರ್ಷದಲ್ಲಿ ಈಗಿನ ಪ್ರೋತ್ಸಾಹ ಕಾಪಾಡಿಕೊಳ್ಳಿ. ಸಾಮೂಹಿಕ ವ್ಯಾಕ್ಸಿನೇಷನ್ / ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಮೂಲಕ ಆದಾಯ ಮತ್ತು ಬಂಡವಾಳ ವೆಚ್ಚ ಎರಡನ್ನೂ ಅಗತ್ಯಗಳಿಗೆ ಮರುಹಂಚಿಕೊಳ್ಳುವುದು ಮತ್ತೊಂದು ಕ್ಷೇತ್ರವಾಗಿದೆ. ಅದೇ ರೀತಿ ಬಜೆಟ್ ಅಲ್ಪ ಸಂಪನ್ಮೂಲ ಹಂಚಿಕೆ ಹೊಂದಿರುವ ಯೋಜನೆಗಳು ಅಥವಾ ಉಪ-ಯೋಜನೆಗಳನ್ನು ಸಂಯೋಜಿಸಿ ಇಲ್ಲವೇ ನಿಲ್ಲಿಸಬೇಕು.

ತೆರಿಗೆಯೇತರ ಆದಾಯವನ್ನು ನಿಧಿಯ ಖರ್ಚಿಗೆ ಸಜ್ಜುಗೊಳಿಸಲು ಬಜೆಟ್​ನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜ್ಯಗಳಿಗೆ ಸಾಕಷ್ಟು ಹಣ ನೀಡಿ, ಅಗತ್ಯವಿದ್ದಾಗ ಕೇಂದ್ರ ಬೆಂಬಲದ ಭರವಸೆ ನೀಡಬೇಕು. ಇವುಗಳಲ್ಲವಲ್ಲಿ ಕೆಲವನ್ನಾದರೂ ಸರ್ಕಾರ ಒಪ್ಪಿಕೊಂಡರೆ, ನಾಮಮಾತ್ರ ಜಿಡಿಪಿ ಕ್ಲಿಪಿಂಗ್ ಅನ್ನು ನಾವು ಶೇ 14ಕ್ಕೆ ನೋಡಲು ಸಿಗುತ್ತದೆ. ನೈಜ ಜಿಡಿಪಿ 2022ರ ಹಣಕಾಸು ವರ್ಷದಲ್ಲಿ ಶೇ 9.5-10 ಮತ್ತು ಹಣಕಾಸಿನ ಕೊರತೆ ಜಿಡಿಪಿಯ ಶೇ 6.2ರಷ್ಟು ಎಂದು ಸಿನ್ಹಾ ಹೇಳಿದರು.

ABOUT THE AUTHOR

...view details