ನವದೆಹಲಿ:ದೇಶದ 2022-23ನೇ ಸಾಲಿನ ಬಜೆಟ್ ಬಂಡವಾಳ ಹಿಂತೆಗೆಯುವ ಗುರಿಯಲ್ಲಿ ಕಳೆದ ವರ್ಷದ ಬಜೆಟ್‌ಗಿಂತ ಹೆಚ್ಚು ಸಾಧಿಸಬಹುದಾಗಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ. ಕೇಂದ್ರ ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ 65,000 ಕೋಟಿ ರೂ.ಗೆ ಬಂಡವಾಳ ಹಿಂತೆಗೆತದ ಗುರಿ ಇರಿಸಿದೆ. ಬಜೆಟ್ ಆದಾಯ ದಾಖಲೆಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಗುರಿಯ 1.75 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅಂದಾಜುಗಳಿಂದ 78,000 ಕೋಟಿ ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ.
ಫಿಚ್ ರೇಟಿಂಗ್ಸ್‌ನ ನಿರ್ದೇಶಕ ಹಾಗೂ ವಿಶ್ಲೇಷಕ ಜೆರೆಮಿ ಝೂಕ್, ಬಜೆಟ್‌ನ ಆಧಾರವಾಗಿರುವ ಆರ್ಥಿಕ ಮತ್ತು ಆದಾಯದ ನಿರೀಕ್ಷೆಗಳು ಹೆಚ್ಚಾಗಿ ವಿಶ್ವಾಸಾರ್ಹವಾಗಿವೆ. ಜೊತೆಗೆ ಕಳೆದ ವರ್ಷದ ಬಜೆಟ್‌ಗಿಂತ ಹೆಚ್ಚು ಸಾಧಿಸಬಹುದಾದ ಹೂಡಿಕೆಯ ಗುರಿಯಾಗಿದೆ ಎಂದು ಹೇಳಿದ್ದಾರೆ.
ಬಜೆಟ್ ಪಾರದರ್ಶಕತೆ ಸುಧಾರಿಸಲು ಸರ್ಕಾರವು ತನ್ನ ಪ್ರಯತ್ನಗಳನ್ನು ಅನುಸರಿಸುತ್ತಿದೆ. 2022-23ರ ಬಜೆಟ್ ಪ್ರಮುಖವಾಗಿ ಬೆಳವಣಿಗೆಯನ್ನು ಹೆಚ್ಚಿಸುವ ರಚನಾತ್ಮಕ ಸುಧಾರಣಾ ಘೋಷಣೆಗಳು ಚಿಕ್ಕದಾಗಿದೆ ಎಂದು ಝೂಕ್ ಹೇಳಿದ್ದಾರೆ.