ಕರ್ನಾಟಕ

karnataka

ETV Bharat / business

ಅತ್ತ ಪಾಕ್​, ಇತ್ತ ಚೀನಾ: ಇಬ್ಬರು ವೈರಿಗಳ ಮಧ್ಯೆ ನಿರ್ಮಲಾ ಬಜೆಟ್​ನಲ್ಲಿ ರಕ್ಷಣೆಗೆ ಏನೆಲ್ಲಾ ಸಿಗಬಹುದು? - ಬಜೆಟ್​​ನಲ್ಲಿ ರಕ್ಷಣಾ ವೆಚ್ಚ ಏರಿಕೆ

ಪಾಕ್ ಮತ್ತು ಚೀನಾದ ಉಪಟಳದಿಂದ ರಕ್ಷಣಾ ವೆಚ್ಚವು ಹೆಚ್ಚಳ ಕಾಣುತ್ತದೆ ಎಂಬ ನಿರೀಕ್ಷೆಗೆ ಸಾಕಷ್ಟು ಆಧಾರವಿದೆ. ಜಿಡಿಪಿ ಪಾಲಿನಲ್ಲಿ ರಕ್ಷಣೆಯ ಪಾಲು ಕ್ಷೀಣಿಸುತ್ತಿದೆ ಎಂಬ ಅಂಶದಿಂದಾಗಿ ರಕ್ಷಣಾ ವೆಚ್ಚದಲ್ಲಿ ತೀವ್ರ ಏರಿಕೆ ನಿರೀಕ್ಷಿಸಲಾಗಿದೆ. ಆದರೆ, ಕೋವಿಡ್​ 19ರ ಕಾರಣದಿಂದಾಗಿ ಕುಗ್ಗುತ್ತಿರುವ ಆರ್ಥಿಕತೆಯು ದೊಡ್ಡ ಸವಾಲಾಗಿದೆ.

BUDGET 21
BUDGET 21

By

Published : Jan 30, 2021, 8:48 PM IST

ನವದೆಹಲಿ: ನಿಸ್ಸಂದೇಹವಾಗಿ 2021ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರವು ಆದ್ಯತೆಯಾಗಿರುತ್ತದೆ. ನೆರೆಹೊರೆಯಲ್ಲಿನ ವಿಲಕ್ಷಣ ಸನ್ನಿವೇಶಗಳಿಂದಾಗಿ ಹೆಚ್ಚಿನ ಅನುದಾನ ಮೀಸಲಿಡಬೇಕಿದೆ.

ಪಾಕಿಸ್ತಾನವು ತನ್ನ ನರಿ ಬುದ್ಧಿಯ ಭಯೋತ್ಪಾದನಾ ಯುದ್ಧವನ್ನು ಹುಮ್ಮಸ್ಸಿನಿಂದ ಮುಂದುವರೆಸುತ್ತಿದ್ದರೆ, ಚೀನಾದ ಕಡಿವಾಣವಿಲ್ಲದ ಗಡಿ ಆಕ್ರಮಣವು ಎರಡು ಕಡೆಯಿಂದಲೂ ಯುದ್ಧದ ಭೀತಿ ಹೆಚ್ಚಿಸಿದೆ. ಈಗ ದೇಶದ ರಕ್ಷಣಾ ವಲಯದಲ್ಲಿ ಸಾಮಾನ್ಯಕ್ಕಿಂತ ತುಸು ಹೆಚ್ಚಿನ ಗಮನ ನೀಡಬೇಕಿದೆ.

ಪಾಕ್ ಮತ್ತು ಚೀನಾದ ಉಪಟಳದಿಂದ ರಕ್ಷಣಾ ವೆಚ್ಚವು ಹೆಚ್ಚಳ ಕಾಣುತ್ತದೆ ಎಂಬ ನಿರೀಕ್ಷೆಗೆ ಸಾಕಷ್ಟು ಆಧಾರವಿದೆ. ಜಿಡಿಪಿ ಪಾಲಿನಲ್ಲಿ ರಕ್ಷಣೆಯ ಪಾಲು ಕ್ಷೀಣಿಸುತ್ತಿದೆ ಎಂಬ ಅಂಶದಿಂದಾಗಿ ರಕ್ಷಣಾ ವೆಚ್ಚದಲ್ಲಿ ತೀವ್ರ ಏರಿಕೆ ನಿರೀಕ್ಷಿಸಲಾಗಿದೆ. ಆದರೆ, ಕೋವಿಡ್​ 19 ರ ಕಾರಣದಿಂದಾಗಿ ಕುಗ್ಗುತ್ತಿರುವ ಆರ್ಥಿಕತೆಯು ದೊಡ್ಡ ಸವಾಲಾಗಿದೆ.

2020ರ ಬಜೆಟ್‌ನಲ್ಲಿ ರಕ್ಷಣಾ ಕಾರ್ಯಕ್ಕಾಗಿ ಶೇ. 6ರಷ್ಟು ಹೆಚ್ಚಳವಾಗಿದ್ದು, 4.71 ಲಕ್ಷ ಕೋಟಿ ರೂ.ಗೆ ತಲುಪಿತ್ತು. ಜಾಗತಿಕ ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮಗಳಿಂದ 2021ರ ಬಜೆಟ್​ನಲ್ಲಿ ಬಹುಶಃ ಇದಕ್ಕಿಂತ ಹೆಚ್ಚಳ ಕಾಣಬಹುದು. ಏಕೆಂದರೆ ರೋಗದ ಮಧ್ಯೆ ನೆರೆಯ ಚೀನಾ ಗಡಿಯಲ್ಲಿ ತಗಾದೆ ತೆಗೆದು ಯುದ್ಧ ಭೀತಿಯನ್ನೇ ಸೃಷ್ಟಿಸಿತ್ತು.

ಸಾಂಪ್ರದಾಯಿಕ ರಕ್ಷಣಾ ಖರ್ಚಿನ ಬಂಡವಾಳದ ವೆಚ್ಚ (ಆಧುನೀಕರಣ ಮತ್ತು ಹೊಸ ಶಸ್ತ್ರಾಸ್ತ್ರಗಳ ಖರೀದಿ) ಮತ್ತು ಆದಾಯ ವೆಚ್ಚ (ಸೈನಿಕರ ಮತ್ತು ಯುದ್ಧ ಸಾಮಗ್ರಿಗಳ ನಿಯೋಜನೆ, ಸಂಬಳ, ಪಿಂಚಣಿ, ಸಂಸ್ಥೆಗಳ ನಿರ್ವಹಣೆ, ಸಾಗಾಣೆ) ಸೇರಿದಂತೆ ಹಲವು ಹೊಸ ಆದ್ಯತೆ ನೀಡಬಹುದು. ಸೋಮವಾರ ಮಂಡನೆ ಆಗಲಿರುವ ವಿತ್ತ ಸಚಿವೆ ನಿರ್ಮಲಾ ಬಜೆಟ್​ನಲ್ಲಿ ಕುತೂಹಲಕ್ಕೆ ತೆರೆ ಬೀಳಲಿದೆ.

ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಅಗತ್ಯತೆ, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ, ರಫ್ತು ಆಧಾರಿತ ಉತ್ಪಾದನಾ ನೆಲೆಗಳ ಅಭಿವೃದ್ಧಿಗೆ ಗಮನ ಹರಿಸುವುದು, ಸಾಂಸ್ಥಿಕ ಬದಲಾವಣೆಯಂತಹ ಕ್ರಮಗಳು ಇದರಲ್ಲಿವೆ.

ಬದಲಾದ ಭದ್ರತಾ ವಾತಾವರಣದಲ್ಲಿ ಚೀನಾದ ಗಡಿಯಲ್ಲಿ ಪಡೆಗಳನ್ನು ಶಾಶ್ವತವಾಗಿ ನಿಯೋಜಿಸುವ ಅಗತ್ಯವು ಆದಾಯ ಮತ್ತು ಬಂಡವಾಳ ವೆಚ್ಚಗಳೆರಡರ ವೆಚ್ಚದ ಮೇಲೆ ಪರಿಣಾಮ ಬೀರಲಿದೆ. ಭೂಸೇನೆ ಐಎಎಫ್ ಮತ್ತು ನೌಕಾಪಡೆ ಯುದ್ಧ ಸಿದ್ಧತೆ, ನಿರಂತರ ಲಾಜಿಸ್ಟಿಕ್ಸ್ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇವೆಲ್ಲದಕ್ಕೂ ಹೆಚ್ಚಿನ ಹಣವನ್ನು ಮೀಸಲಿಡಬೇಕಾಗುತ್ತದೆ.

ರಕ್ಷಣಾ ವಲಯದಲ್ಲಿ ಅಮೂಲಾಗ್ರ ಬದಲಾವಣೆ ತರಲು ಅತ್ಯಾಧುನಿಕ ಸ್ಥಾಪಿತ ತಂತ್ರಜ್ಞಾನಗಳ ಮೇಲೆ ಹೆಚ್ಚು ಗಮನ ಹರಿಸಬೇಕಿದೆ. ಹೈಪರ್​ಸಾನಿಕ್ಸ್, ವಿದ್ಯುತ್ಕಾಂತೀಯ ಶಸ್ತ್ರಾಸ್ತ್ರಗಳು, ಕೃತಕ ಬುದ್ಧಿಮತ್ತೆ, ಡ್ರೋನ್ ದಂಡು, ರೊಬೊಟಿಕ್ಸ್, ಲೇಸರ್‌, ಲೋಟರ್ ಯುದ್ಧ ಸಾಮಗ್ರಿಗಳು, ದೊಡ್ಡ ದತ್ತಾಂಶ ವಿಶ್ಲೇಷಣೆ ಮತ್ತು ಅಲ್ಗಾರಿದಮಿಕ್ ಯುದ್ಧೋಪಕರಣಗಳು ಇದರಲ್ಲಿ ಸೇರಿವೆ.

ಡಿಆರ್‌ಡಿಒ ‘ಯುವ ವಿಜ್ಞಾನಿಗಳು’ ಯೋಜನೆಯಡಿ ಕೇಂದ್ರೀಕೃತ ವಿಧಾನಕ್ಕಾಗಿ ಈಗಾಗಲೇ ಐದು ಪ್ರಮುಖ ವಲಯಗಳನ್ನು ಗುರುತಿಸಲಾಗಿದೆ. ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ತಂತ್ರಜ್ಞಾನ, ಅರಿವಿನ ತಂತ್ರಜ್ಞಾನ, ಅಸಮ್ಮಿತ ತಂತ್ರಜ್ಞಾನಗಳು ಮತ್ತು ಸ್ಮಾರಕ ವಸ್ತುಗಳ ಕೇಂದ್ರಗಳನ್ನು ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ ಸ್ಥಾಪಿಸಲಾಗುತ್ತದೆ.

ABOUT THE AUTHOR

...view details