ಬಜೆಟ್ 2022 : ಸರ್ಕಾರದ ಬೊಕ್ಕಸಕ್ಕೆ ಬರುವ ಪ್ರತಿ ರೂಪಾಯಿಯಲ್ಲಿ ತೆರಿಗೆಯ ಪಾಲೇ 58 ಪೈಸೆ!
Budget 2022 : ಸರ್ಕಾರದ ಬೊಕ್ಕಸಕ್ಕೆ ಪ್ರತಿ ರೂಪಾಯಿಯಲ್ಲಿ ತೆರಿಗೆಯಿಂದಲೇ 58 ಪೈಸೆ ಬಂದರೆ ಜಿಎಸ್‌ಟಿಯ ಪಾಲು 16 ಪೈಸೆ ಇದೆ. ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ನೂರು ರೂಪಾಯಿಯಲ್ಲಿ 8 ಪೈಸೆಯನ್ನು ಹಂಚಿಕೆ ಮಾಡಲಾಗಿದೆ..
ಬಜೆಟ್ 2022: ಸರ್ಕಾರದ ಬೊಕ್ಕಸಕ್ಕೆ ಬರುವ ಪ್ರತಿ ರೂಪಾಯಿಯಲ್ಲಿ ತೆರಿಗೆಯ ಪಾಲೇ 58 ಪೈಸೆ..!
By
Published : Feb 1, 2022, 5:07 PM IST
|
Updated : Feb 1, 2022, 5:26 PM IST
ನವದೆಹಲಿ :ಸರ್ಕಾರದ ಬೊಕ್ಕಸಕ್ಕೆ ಬರುವ ಪ್ರತಿ ರೂಪಾಯಿಯಲ್ಲಿ 58 ಪೈಸೆ ನೇರ ಮತ್ತು ಪರೋಕ್ಷ ತೆರಿಗೆಗಳಿಂದಲೇ ಬರುತ್ತದೆ. 35 ಪೈಸೆ ಸಾಲ ಮತ್ತು ಇತರ ಹೊಣೆಗಾರಿಕೆಗಳಿಂದ, ಹೂಡಿಕೆ ಹಿಂತೆಗೆದುಕೊಳ್ಳುವಿಕೆಯಂತಹ ತೆರಿಗೆಯೇತರ ಆದಾಯದಿಂದ 5 ಪೈಸೆ, ಸಾಲೇತರ ಬಂಡವಾಳದ ಆದಾಯದಿಂದ 2 ಪೈಸೆ ಬರುತ್ತದೆ.
2022-23ರ ಬಜೆಟ್ ಪ್ರಕಾರ, ಖಜಾನೆಯ ಪ್ರತಿ ರೂಪಾಯಿಯಲ್ಲಿ ಜಿಎಸ್‌ಟಿಯ ಪಾಲು 16 ಪೈಸೆ ಇದೆ. ಕಾರ್ಪೊರೇಷನ್ ತೆರಿಗೆಯು ಗಳಿಸಿದ ಪ್ರತಿ ರೂಪಾಯಿಗೆ 15 ಪೈಸೆ ಕೊಡುಗೆ ನೀಡುತ್ತಿದೆ. ಕೇಂದ್ರ ಅಬಕಾರಿ ಇಲಾಖೆಯಿಂದ 7 ಪೈಸೆ, ಕಸ್ಟಮ್ಸ್ ಸುಂಕದಿಂದ 5 ಪೈಸೆ, ಆದಾಯ ತೆರಿಗೆಯಿಂದ 15 ಪೈಸೆ ಸರ್ಕಾರದ ಖಜಾನೆಗೆ ಸೇರುತ್ತಿದೆ.
ಯಾವ ವಲಯದಿಂದ ಎಷ್ಟು ಪೈಸೆ ಬರುತ್ತೆ..?
ರೂಪಾಯಿ ಆದಾಯ ಹೇಗೆ ಬರುತ್ತದೆ?
ರೂಪಾಯಿ ಹೇಗೆ ವೆಚ್ಚವಾಗುತ್ತದೆ?
ಸಾಲ ಮತ್ತು ಇತರ ಋುಣಗಳು 35 ಪೈಸೆ
ಆದಾಯ ತೆರಿಗೆ 15 ಪೈಸೆ
ಅಬಕಾರಿ ಸುಂಕ 7 ಪೈಸೆ
ಕಾರ್ಪೊರೇಟ್ ತೆರಿಗೆ 15 ಪೈಸೆ
ಜಿಎಸ್‌ಟಿ 16 ಪೈಸೆ
ಆಮದು ಸುಂಕ 5 ಪೈಸೆ
ತೆರಿಗೆಯೇತರ ಆದಾಯ 5 ಪೈಸೆ
ಸಾಲವಲ್ಲದ ಬಂಡವಾಳ ಸ್ವೀಕೃತಿ 2 ಪೈಸೆ
ಕೇಂದ್ರ ಪ್ರಾಯೋಜಿತ ಯೋಜನೆಗಳು 9 ಪೈಸೆ
ಪಿಂಚಣಿ 4 ಪೈಸೆ
ಇತರೆ ವೆಚ್ಚ 9 ಪೈಸೆ
ಕೇಂದ್ರ ವಲಯದ ಯೋಜನೆಗಳು 15 ಪೈಸೆ
ಹಣಕಾಸು ಆಯೋಗ ಮತ್ತುಇತರ ವರ್ಗಾವಣೆ 10 ಪೈಸೆ
ರಾಜ್ಯಗಳ ಪಾಲು 17 ಪೈಸೆ
ಬಡ್ಡಿ ಪಾವತಿ 20 ಪೈಸೆ
ರಕ್ಷಣೆ 8 ಪೈಸೆ
ಸಬ್ಸಿಡಿ 9 ಪೈಸೆ
ಸಾಲಗಳು ಮತ್ತು ಇತರ ಹೊಣೆಗಾರಿಕೆಗಳಿಂದ 35 ಪೈಸೆ ಬರುತ್ತದೆ ಎಂದು ಬಜೆಟ್‌ನಲ್ಲಿ ವಿವರಿಸಲಾಗಿದೆ. ವೆಚ್ಚದ ಭಾಗದಲ್ಲಿ ಪ್ರತಿ ರೂಪಾಯಿಗೆ 20 ಪೈಸೆಯ ಬಡ್ಡಿ ಪಾವತಿಗಳು, ನಂತರ ತೆರಿಗೆಗಳು ಮತ್ತು ಸುಂಕಗಳ ರಾಜ್ಯಗಳ ಪಾಲು 17 ಪೈಸೆಗಳಲ್ಲಿ ದೊಡ್ಡ ವೆಚ್ಚದ ಅಂಶವಾಗಿದೆ.
ಯಾವ ವಲಯಕ್ಕೆ ಎಷ್ಟು ಪೈಸೆ ಹೋಗುತ್ತೆ..?
ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ 8 ಪೈಸೆ ಹಂಚಿಕೆಯಾಗಿದೆ. ಕೇಂದ್ರ ವಲಯದ ಯೋಜನೆಗಳ ವೆಚ್ಚವು 15 ಪೈಸೆಯಾಗಿದೆ. ಆದರೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 9 ಪೈಸೆ ಹಂಚಿಕೆ ಮಾಡಲಾಗಿದೆ.
ಹಣಕಾಸು ಆಯೋಗ ಮತ್ತು ಇತರ ವರ್ಗಾವಣೆಗಳ ವೆಚ್ಚವನ್ನು 10 ಪೈಸೆಗೆ ನಿಗದಿಪಡಿಸಲಾಗಿದೆ. ಪ್ರತಿ ರೂಪಾಯಿ ವೆಚ್ಚದಲ್ಲಿ ಸಬ್ಸಿಡಿಗಳು ಮತ್ತು ಪಿಂಚಣಿಗಳು ಕ್ರಮವಾಗಿ 8 ಪೈಸೆ ಮತ್ತು 4 ಪೈಸೆ ಇದೆ. ಸರ್ಕಾರವು ಪ್ರತಿ ರೂಪಾಯಿಯಲ್ಲಿ 9 ಪೈಸೆಯನ್ನು ಇತರ ವೆಚ್ಚಗಳಿಗೆ ಖರ್ಚು ಮಾಡುತ್ತದೆ.