ಕರ್ನಾಟಕ

karnataka

ETV Bharat / business

2021-22 ಬಜೆಟ್ ತಯಾರಿ: ವಿತ್ತ & ಉದ್ಯಮಿ ತಜ್ಞರ ಜತೆ ಪ್ರಧಾನಿ ಮೋದಿ ಇಂದು ಮಹತ್ವದ ಚರ್ಚೆ - ಮೋದಿ ಬಜೆಟ್ ಸಭೆ

ಉತ್ಪಾದನೆಯಲ್ಲಿನ ಏರಿಕೆಯು ಜಿಡಿಪಿಯ ಶೇ.7.5ರಷ್ಟು ಕಡಿಮೆ ಸಂಕೋಚನಕ್ಕೆ ನೆರವಾಗಲಿದೆ. ಗ್ರಾಹಕರ ಉತ್ತಮ ಬೇಡಿಕೆಯ ಸುಧಾರಣೆಯು ಚೇತರಿಕೆಯಲ್ಲಿ ಭರವಸೆ ತಂದಿದೆ. ಭಾರತದ ಆರ್ಥಿಕ ಬೆಳವಣಿಗೆ 2019-20ರಲ್ಲಿ ಶೇ 4.2 ರಷ್ಟಿತ್ತು. ಮುಂಬರುವ ಕೇಂದ್ರ ಬಜೆಟ್‌ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಫೆಬ್ರವರಿ 1ರಂದು ಮಂಡಿಸುವ ಸಾಧ್ಯತೆಯಿದೆ.

PM Narendra
ಮೋದಿ

By

Published : Jan 8, 2021, 1:16 PM IST

ನವದೆಹಲಿ:ಕೋವಿಡ್​-19 ಸೋಂಕಿನಿಂದ ಉಂಟಾದ ಬಹು ವಲಯಗಳ ಅನಿಶ್ಚಿತತೆಯ ಬೆಳವಣಿಗೆ, ಹಾನಿಗೀಡಾದ ಕ್ಷೇತ್ರಗಳ ಉತ್ತೇಜನೆಗೆ ಮುಂಬರುವ ಬಜೆಟ್‌ನಲ್ಲಿ ಸೇರಿಸಬಹುದಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿತ್ತ ತಜ್ಞರು ಮತ್ತು ಉದ್ಯಮಿ ವಲಯ ತಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ.

ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗ ಆಯೋಜಿಸಿರುವ ವರ್ಚ್ಯುಯಲ್​​ ಸಭೆಯಲ್ಲಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಸಿಇಒ ಅಮಿತಾಭ್ ಕಾಂತ್ ಭಾಗವಹಿಸಲಿದ್ದಾರೆ. ಮುಂದಿನ ಬಜೆಟ್​ಗೆ ಅರ್ಥಶಾಸ್ತ್ರಜ್ಞರ ಆಲೋಚನೆ ಹಾಗೂ ಸಲಹೆಗಳನ್ನು ಪಡೆಯಲು ಪ್ರಧಾನಿ ಮೋದಿ ಅವರು ಭೇಟಿಯಾಗಲಿದ್ದಾರೆ.

ಉತ್ಪಾದನೆಯಲ್ಲಿನ ಏರಿಕೆಯು ಜಿಡಿಪಿಯ ಶೇ.7.5ರಷ್ಟು ಕಡಿಮೆ ಸಂಕೋಚನಕ್ಕೆ ನೆರವಾಗಲಿದೆ. ಗ್ರಾಹಕರ ಉತ್ತಮ ಬೇಡಿಕೆಯ ಸುಧಾರಣೆಯು ಚೇತರಿಕೆಯಲ್ಲಿ ಭರವಸೆ ತಂದಿದೆ. ಭಾರತದ ಆರ್ಥಿಕ ಬೆಳವಣಿಗೆ 2019-20ರಲ್ಲಿ ಶೇ 4.2 ರಷ್ಟಿತ್ತು. ಮುಂಬರುವ ಕೇಂದ್ರ ಬಜೆಟ್‌ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ರ ಫೆಬ್ರವರಿ 1ರಂದು ಮಂಡಿಸುವ ಸಾಧ್ಯತೆಯಿದೆ.

ABOUT THE AUTHOR

...view details