ನವದೆಹಲಿ:2021ರ ಕೇಂದ್ರ ಬಜೆಟ್ಗೆ ಕ್ಷಣಗಣನೆ ಆರಂಭವಾಗಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ 'ಬಹಿ ಖಾತಾ' ಚೀಲ ಬಿಟ್ಟು ಟ್ಯಾಬ್ ಹಿಡಿದು ತಮ್ಮ ಮೂರನೇ ಬಜೆಟ್ ಮಂಡಿಸಲಿದ್ದಾರೆ.
ಸಾಂಪ್ರದಾಯಿಕ ಕೆಂಪು ಬಟ್ಟೆ 'ಬಹಿ-ಖತಾ'ಯೊಂದಿಗೆ ಕಳೆದ ವರ್ಷದ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಅವರು ಡಿಸೆಂಬರ್ನ ಪೂರ್ವಸಿದ್ಧತೆ ವೇಳೆ ನೀಡಿದ್ದ ಆಶ್ವಾಸನೆಯಂತೆ 'ಹಿಂದೆಂದೂ ಇಲ್ಲದಂತೆ ಇರಲಿದೆ' ಎಂಬ ಲೆಕ್ಕಪತ್ರ ದೇಶದ ಮುಂದೆ ಇರಿಸಲಿದ್ದಾರೆ.
ಸಚಿವರ ಜೊತೆಗೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ರಾಷ್ಟ್ರಪತಿಗಳ ಭವನಕ್ಕೆ ತೆರಳಿ ಸಂಸತ್ತಿನಲ್ಲಿ ಬಜೆಟ್ ಮಂಡನೆಗೆ ರಾಮ್ನಾಥ್ ಕೋವಿಂದ್ ಅವರಿಂದ ಒಪ್ಪಿಗೆ ಪಡೆದರು.
ಇದನ್ನೂ ಓದಿ: ಬಜೆಟ್ ಮಂಡನೆ ಹೊಸ್ತಿಲಲ್ಲಿ 350 ಅಂಕ ಜಿಗಿದ ಸೆನ್ಸೆಕ್ಸ್: 6 ದಿನಗಳ ಕುಸಿತಕ್ಕೆ ಬ್ರೇಕ್
ಬೆಳಗ್ಗೆ 10:15ಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ನಡೆಸಲಾಗುತ್ತದೆ. ಸಾಮಾನ್ಯವಾಗಿ, ಬಜೆಟ್ ಪ್ರಸ್ತುತಿಯ ಅವಧಿ 90 ರಿಂದ 120 ನಿಮಿಷಗಳವರೆಗೆ ಇರುತ್ತದೆ. ಈ ವರ್ಷ ಕೇಂದ್ರ ಬಜೆಟ್ ಅನ್ನು ಮೊದಲ ಬಾರಿಗೆ ಕಾಗದರಹಿತ ರೂಪದಲ್ಲಿ ತರಲಾಗುತ್ತಿದೆ.
ಸಂಸತ್ತಿನ ಸದಸ್ಯರು (ಸಂಸದರು) ಮತ್ತು ಸಾರ್ವಜನಿಕರಿಂದ ಸರಳವಾದ ಡಿಜಿಟಲ್ ಅನುಕೂಲಕ್ಕಾಗಿ ಬಜೆಟ್ ದಾಖಲೆಗಳ ತೊಂದರೆಯಿಲ್ಲದೆ ಪಡೆಯಲು ಹಣಕಾಸು ಸಚಿವರು 'ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಷನ್' ಅನ್ನು ಪ್ರಾರಂಭಿಸಿದ್ದರು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಬಜೆಟ್ ಬ್ರೀಫ್ ಕೇಸ್ ಹಿಂದಿನ ಮಹತ್ವದ ಸಂಗತಿಗಳು
* 1956-1958 ಮತ್ತು 1964-1966 ಅವಧಿಯಲ್ಲಿ ಅಂದಿನ ವಿತ್ತ ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರು ಬಜೆಟ್ ಫೈಲ್ ಬ್ಯಾಗ್ ಹಿಡಿದು ಸಂಸತ್ ಪ್ರವೇಶಿಸಿದ್ದರು.