ನವದೆಹಲಿ:ಸವಲತ್ತು ಹೊಂದಿದ ಶ್ರೀಮಂತ ಎಲ್‌ಪಿಜಿ ಬಳಕೆದಾರರು ಸ್ವಯಂ ಪ್ರೇರಣೆಯಿಂದ ತಮ್ಮ ಸಬ್ಸಿಡಿ ಬಿಟ್ಟುಕೊಂಡುವಂತೆ ಪ್ರೇರೇಪಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ ‘ಗಿವ್ ಇಟ್ ಅಪ್’ (ಸಬ್ಸಿಡಿ ಸಿಲಿಂಡರ್ ವಾಪಸ್) ಅಭಿಯಾನದ ಯಶಸ್ಸು ಉದಾಹರಣೆ ತೆಗೆದುಕೊಂಡ ವಾಹನ ವಿತರಕರು ಸ್ವಯಂಪ್ರೇರಿತ ಸ್ಕ್ರ್ಯಾಪೇಜ್ ನೀತಿ ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಿದರು.
‘ಸ್ಟಿಕ್’ (ತೋರ್ಪಡೆ) ಮಾಡುವುದಕ್ಕಿಂತ ‘ಕ್ಯಾರೆಟ್’ (ಮನವೊಲಿಕೆ) ಅಗತ್ಯವನ್ನು ಒತ್ತಿ ಹೇಳಿದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (ಎಫ್‌ಎಡಿಎ) ಫೆಬ್ರವರಿ 1ರಂದು ಮಂಡಿಸಲಿರುವ 2021-22ರ ಬಜೆಟ್‌ನಲ್ಲಿ ಒಂದು ಯೋಜನೆ ತರಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದೆ.
ತಮ್ಮ ಹಳೆಯ ವಾಹನಗಳನ್ನು ಹೊಸದರೊಂದಿಗೆ ಬದಲಾಯಿಸುವಂತೆ ಒತ್ತಾಯಿಸುವುದಕ್ಕಿಂತ ಜನರನ್ನು ಪ್ರೋತ್ಸಾಹಿಸುವುದು ಹೆಚ್ಚು ಕಾರ್ಯಸಾಧ್ಯವಾಗಿದೆ. ಗ್ರಾಹಕರು ಅನಿಲ ಸಬ್ಸಿಡಿಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಟ್ಟಿದ್ದರಲ್ಲಿ ನಾವು ಈಗಾಗಲೇ ಇದೇ ರೀತಿಯ ಯಶಸ್ಸು ಕಂಡಿದ್ದೇವೆ ಎಂದು ಫಾಡಾ ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದರು.
2000ರ ಮಾರ್ಚ್ 31ರವರೆಗೆ ನೋಂದಾಯಿತ ಎಲ್ಲ ವಾಹನಗಳಿಗೆ ಈ ನೀತಿ ವಿಸ್ತರಿಸಬೇಕೆಂದು ವಿತರಕರ ಸಂಘವು ಹಣಕಾಸು ಸಚಿವರನ್ನು ಒತ್ತಾಯಿಸಿತು.
2000ರ ಮಾರ್ಚ್ 31ರವರೆಗೆ ನೋಂದಾಯಿಸಲಾದ ಎಲ್ಲ ವಾಹನಗಳು ಆಧುನಿಕ ಫ್ಲೀಟ್ ವಾಹನ ಬದಲಿ ಯೋಜನೆಯಡಿ ಅರ್ಹತೆ ಪಡೆಯಬೇಕು ಎಂದು 'ಈಟಿವಿ ಭಾರತ' ಜತೆ ಮಾತನಾಡುತ್ತಾ ಒತ್ತಾಯಿಸಿದ್ದರು.
ಇದನ್ನೂ ಓದಿ: ಗೂಳಿಯ ಓಟಕ್ಕೆ ಕರಡಿ ಬ್ರೇಕ್: 152 ಅಂಕ ಕುಸಿದ ಸೆನ್ಸೆಕ್ಸ್