ಕರ್ನಾಟಕ

karnataka

ETV Bharat / business

ತಾಯಿಯ ಬಜೆಟ್​ ಮಂಡನೆ ಕಣ್ತುಂಬಿಕೊಳ್ಳಲು ಸಂಸತ್ತಿಗೆ ಬಂದ ನಿರ್ಮಲಾ ಪುತ್ರಿ - ಭಾರತದ ವಾರ್ಷಿಕ ಬಜೆಟ್​

ಕಳೆದ ವರ್ಷ ಮಗಳ ಬಜೆಟ್​ ಮಂಡನೆ ನೋಡಲೆಂದು ಸೀತಾರಾಮನ್ ತಾಯಿ ಸಾವಿತ್ರಿ ಹಾಗೂ ನಾರಾಯಣನ್ ಸೀತಾರಾಮನ್ ಅವರು ತಮಿಳುನಾಡಿನಿಂದ ದಿಲ್ಲಿಗೆ ಬಂದಿದ್ದರು. ಈ ಬಾರಿ ಅವರ ಪುತ್ರಿ ಪರಕಲಾ ವಾಂಗ್ಮಯಿ ಆಗಮಿಸಿದ್ದಾರೆ.

Budget 2020
ಬಜೆಟ್​

By

Published : Feb 1, 2020, 11:02 AM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ 2020-21ನೇ ಸಾಲಿನ ಆಯವ್ಯಯ ಮಂಡನೆ ಕಣ್ತುಂಬಿಕೊಳ್ಳಲು ಕುಟುಂಬಸ್ಥರು ಸಂಸತ್ತಿಗೆ ಬಂದಿದ್ದಾರೆ.

ಕಳೆದ ವರ್ಷ ಮಗಳ ಬಜೆಟ್​ ಮಂಡನೆ ನೋಡಲೆಂದು ಸೀತಾರಾಮನ್ ತಾಯಿ ಸಾವಿತ್ರಿ ಹಾಗೂ ನಾರಾಯಣನ್ ಸೀತಾರಾಮನ್ ಅವರು ತಮಿಳುನಾಡಿನಿಂದ ದಿಲ್ಲಿಗೆ ಬಂದಿದ್ದರು. ಈ ಬಾರಿ ಅವರ ಪುತ್ರಿ ಪರಕಲಾ ವಾಂಗ್ಮಯಿ ಆಗಮಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಳಿಕದ ಮೊದಲ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಕಾರಣವಾಗಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವುದನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಅವರ ಕುಟುಂಬಸ್ಥರು ಸಂಸತ್ತಿಗೆ ಆಗಮಿಸಿ ಗಮನ ಸೆಳೆದರು.

ABOUT THE AUTHOR

...view details