ನವದೆಹಲಿ : ತ್ವರಿತವಾಗಿ ಪರವಾನಗಿ ನೀಡಲು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರ ಒಂದೇ ಹೂಡಿಕೆ ಕೋಶವನ್ನು (single investment cell) ರಚಿಸಲು ಯೋಜನೆ ರೂಪಿಸಿದೆ. ಈ ಕ್ರಮವು ಸುಲಭವಾಗಿ ಮತ್ತು ತ್ವರಿತವಾಗಿ ವ್ಯಾಪಾರ ಮಾಡುವ ಸಲುವಾಗಿ ಭಾರತದಲ್ಲಿ ವ್ಯವಹಾರವನ್ನು ಸ್ಥಾಪಿಸಲು ಬೇಕಾದ ಎಲ್ಲಾ ಪರವಾನಗಿಗಳನ್ನು ಒಂದೇ ಕೇಂದ್ರದಲ್ಲಿ ವಿಲೀನಗೊಳಿಸುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
ಉದ್ಯಮಶೀಲತೆ ಉತ್ತೇಜಿಸಲು 5 ಹೊಸ ಸ್ಮಾರ್ಟ್ ಸಿಟಿಗಳ ನಿರ್ಮಾಣ - ಬಜೆಟ್ 2020 ಹೈಲೈಟ್ಸ್
ಉದ್ಯಮಶೀಲತೆಯನ್ನು ಉತ್ತೇಜಿಸಲು 5 ಹೊಸ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುವುದು. PPP ಅಂದರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯ ಮೂಲಕ ಸ್ಮಾರ್ಟ್ ಸಿಟಿಗಳನ್ನು ರಚಿಸಲಾಗುವುದು ಎಂದು ಘೋಷಿಸಿದರು.
5 ಹೊಸ ಸ್ಮಾರ್ಟ್ ಸಿಟಿಗಳ ನಿರ್ಮಾಣ
ಉದ್ಯಮಶೀಲತೆಯನ್ನು ಉತ್ತೇಜಿಸಲು 5 ಹೊಸ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುವುದು. PPP ಅಂದರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯ ಮೂಲಕ ಸ್ಮಾರ್ಟ್ ಸಿಟಿಗಳನ್ನು ರಚಿಸಲಾಗುವುದು ಎಂದು ಘೋಷಿಸಿದರು.
ಭಾರತವು ವಿಶ್ವ ಬ್ಯಾಂಕಿನ ‘ಡೂಯಿಂಗ್ ಬ್ಯುಸಿನೆಸ್’ ಸಮೀಕ್ಷೆಯಲ್ಲಿ 2014 ರಲ್ಲಿ 142 ನೇ ಸ್ಥಾನದಲ್ಲಿದ್ದ ಭಾರತದ ಶ್ರೇಯಾಂಕವು 2019 ರಲ್ಲಿ 63 ಕ್ಕೆ ಏರಿದೆ ಎಂದು ಹೇಳಿದರು.