ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2020-21ನೇ ಸಾಲಿನ ಆಯವ್ಯಯದಲ್ಲಿ ವೈಯಕ್ತಿಕ ಆದಾಯ ತೆರಿಗೆದಾರರಿಗೆ ಭರ್ಜರಿ ಕೊಡುಗೆ ನೀಡಿದೆ.
ವಾರ್ಷಿಕ ಆದಾಯ 2.5 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಇಲ್ಲ. 2.5 ಲಕ್ಷ- 5 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ 5ರಷ್ಟು ತೆರಿಗೆ. 5 ರಿಂದ 7.5 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ಶೇ 10ರಷ್ಟು ತೆರಿಗೆ, 7.5 ಲಕ್ಷದಿಂದ 10 ಲಕ್ಷದವರೆಗೆ ಆದಾಯ ಇರುವವರು ಶೇ 15ರಷ್ಟು, 10 ಲಕ್ಷದಿಂದ 12.5 ಲಕ್ಷ ರೂ. ಆದಾಯ ಪಡೆಯುವವರಿಗೆ ಶೇ 20ರಷ್ಟು ತೆರಿಗೆ, 12.5 ಲಕ್ಷದಿಂದ 25 ಲಕ್ಷದವರೆಗಿನ ಆದಾಯ ಪಡೆಯುವವರಿಗೆ ಶೇ 25ರಷ್ಟು ತೆರಿಗೆ ಹಾಗೂ 15 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.
ತೆರಿಗೆ ಆದಾಯದ ಹಂಚಿಕೆ
2.5 ಲಕ್ಷ ರೂ.ವರೆಗೂ ಯಾವುದೇ ತೆರಿಗೆ ಇಲ್ಲ
2.5- 5 ಲಕ್ಷ ರೂ. ಗಳಿಸುವ ಎಲ್ಲರಿಗೂ ಶೇ 5ರಷ್ಟ ತೆರಿಗೆ