ಕರ್ನಾಟಕ

karnataka

ETV Bharat / business

ಅತಿ ಹೆಚ್ಚು ಕೇಂದ್ರ ಬಜೆಟ್​ ಮಂಡಿಸಿದ ಹಣಕಾಸು ಸಚಿವರು ಯಾರು ಗೊತ್ತೇ? - ಬಜೆಟ್

ಮಾಜಿ ಪ್ರಧಾನಿ ಹಾಗೂ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಒಟ್ಟು 10 ಬಾರಿ ಬಜೆಟ್​ ಮಂಡನೆ ಮಾಡಿದ್ದಾರೆ. ಹಣಕಾಸು ಸಚಿವ ಸ್ಥಾನದ ಜೊತೆ - ಜೊತೆಗೆ ಕೇಂದ್ರ ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

most number of Budgets
ಬಜೆಟ್​ ಮಂಡಿಸಿದ ಸಚಿವರ

By

Published : Jan 30, 2020, 7:46 PM IST

Updated : Jan 30, 2020, 8:34 PM IST

ನವದೆಹಲಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮುಂಗಡ ಪತ್ರ ಮಂಡನೆಗೆ ಸಜ್ಜಾಗುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಅತಿಹೆಚ್ಚು ಬಜೆಟ್​ ಮಂಡಿಸಿದ ವಿತ್ತ ಸಚಿವರು ಯಾರು ಗೊತ್ತೇ?

ಮಾಜಿ ಪ್ರಧಾನಿ ಹಾಗೂ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಒಟ್ಟು 10 ಬಾರಿ ಬಜೆಟ್​ ಮಂಡನೆ ಮಾಡಿದ್ದಾರೆ. ಹಣಕಾಸು ಸಚಿವ ಸ್ಥಾನದ ಜೊತೆ-ಜೊತೆಗೆ ಕೇಂದ್ರ ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅತ್ಯಧಿಕ ಆಯವ್ಯಯ ಮಂಡನೆ ಮಾಡಿದ್ದ ಹಣಕಾಸು ಸಚಿವರಲ್ಲಿ ಪಿ. ಚಿದಂಬರಂ ಅವರಿಗೆ ಎರಡನೇ ಸ್ಥಾನವಿದ್ದು, ಅವರು ಒಟ್ಟು 9 ಬಾರಿ ಬಜೆಟ್​ ಮಂಡನೆ ಮಾಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ 2004ರಲ್ಲಿ ಸಚಿವರಾಗಿ ಮುಂದೆ 2008ರವರೆಗೆ ಗೃಹ ಸಚಿವರಾಗಿದ್ದರು. 2012ರಲ್ಲಿ ಮತ್ತೆ ಹಣಕಾಸು ಖಾತೆಗೆ ಬಂದರು.

ಅತ್ಯಧಿಕ ಬಜೆಟ್ ಮಂಡಿಸಿದ್ದ ಇತರ ಸಚಿವರುಗಳು

:

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ 8 ಬಾರಿ, ಯಶವಂತರಾವ್ ಹಾಗೂ ಸಿ.ಡಿ ದೇಶಮುಖ್ ಅವರು ತಲಾ ಏಳು ಬಾರಿ ಬಜೆಟ್​ ಮಂಡಿಸಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು 6 ಬಾರಿ ಮುಂಗಡ ಪತ್ರ ಮಂಡಿಸಿದ್ದಾರೆ.

Last Updated : Jan 30, 2020, 8:34 PM IST

ABOUT THE AUTHOR

...view details