ಕರ್ನಾಟಕ

karnataka

ETV Bharat / business

ಬಜೆಟ್​ ಮಧ್ಯೆ ಕಾಶ್ಮೀರಿ ಶಾಯರಿ ವಾಚಿಸಿ ಗಮನ ಸೆಳೆದ ನಿರ್ಮಲಾ ಸೀತಾರಾಮಾನ್ - ಬಜೆಟ್​ 2020 ಹೈಲೈಟ್ಸ್

ಕಳೆದ ಸಾಲಿನ ಬಜೆಟ್​ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕಾಯಕಯೋಗಿ ಬಸವಣ್ಣನವರ ವಚನ, ಚಾಣಕ್ಯನ ತಂತ್ರ, ಉರ್ದುವಿನಲ್ಲಿ ಶಾಯರಿ ಉಲ್ಲೇಖಿಸಿದ್ದರು. ಈ ಬಾರಿಯೂ ಅವರು ಅರ್ಥಪೂರ್ಣ ಶಾಯಿರಿ ಓದಿ ಗಮನ ಸೆಳೆದರು.

Budget
ಬಜೆಟ್​

By

Published : Feb 1, 2020, 12:00 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಆಯವ್ಯಯ ಮಂಡನೆ ವೇಳೆಯಲ್ಲಿ ಅರ್ಥಪೂರ್ಣ ಕಾಶ್ಮೀರಿ ಶಾಯರಿ ಓದಿ ಗಮನ ಸೆಳೆದರು.

'ನಮ್ಮ ದೇಶವು ಶಾಲಿಮಾರ್ ಬಾಗ್‌ನಂತೆ ಅರಳಿದೆ,

ನಮ್ಮ ದೇಶ ದಾಲ್ ಸರೋವರದಲ್ಲಿ ಕಮಲದ ಹೂಬಿಡುವಂತಿದೆ,

ನಮ್ಮ ದೇಶವು ಯುವಕರ ಬಿಸಿ ರಕ್ತದಂತಿದೆ,

ನನ್ನ ದೇಶ, ನಿಮ್ಮ ದೇಶ, ವಿಶ್ವದ ಅತ್ಯಂತ ಪ್ರೀತಿಯ ದೇಶ' ಎಂದು ವಾಚಿಸಿದರು.

ಈ ವೇಳೆ ಸಂಸತ್‌ ಸದಸ್ಯರು ಮೇಜು ಕುಟ್ಟಿ ಹರ್ಷ ವ್ಯಕ್ತಪಡಿಸಿದರು.

ABOUT THE AUTHOR

...view details