ಕರ್ನಾಟಕ

karnataka

ETV Bharat / business

ಹರಿದುಬಂದ ವಿದೇಶಿ ನೇರ ಬಂಡವಾಳ... 6 ವರ್ಷಗಳಲ್ಲಿ ಶೇ. 15ರಷ್ಟು ಏರಿಕೆ - ಬ್ಯುಸಿನೆಸ್​ 2020

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ 2020-21ರ ಬಜೆಟ್ ಮಂಡಿಸುತ್ತಿದ್ದು, 2014ರಿಂದ 19ರ ವೇಳೆಗೆ ​​ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಏರಿಕೆ ಕಂಡಿದೆ ಎಂದು ಹೇಳಿದ್ದಾರೆ.

Budget
ಬಜೆಟ್​​ 2020-21

By

Published : Feb 1, 2020, 1:23 PM IST

ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ 2014ರಿಂದ 2019ರ ವೇಳೆಗೆ 284 ಡಾಲರ್​​ನಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​​ ಮಂಡನೆ ವೇಳೆ ತಿಳಿಸಿದ್ದಾರೆ.

ಬಜೆಟ್​​ ಮಂಡನ ವೇಳೆ ಈ ಮಾಹಿತಿ ನೀಡಿದ ಅವರು 2009 ರಿಂದ 2014ರವರೆಗೆ ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು 190 ಡಾಲರ್​​ಗಳಷ್ಟಿತ್ತು. ಅದು 2014ರಿಂದ 201919ರ ವೇಳೆಗೆ 284 ಡಾಲರ್​ಗೆ ಏರಿಕೆಯಾಗಿದೆ ಮಾಹಿತಿ ನೀಡಿದರು.

ಬಜೆಟ್​​ 2020

2019ರ ಹಣಕಾಸು ವರ್ಷದ ಮಧ್ಯದ ಅವಧಿ ವೇಳೆಗೆ ವಿದೇಶಿ ಒಳಹರಿವು ಶೇ.15 ರಿಂದ ಶೇ.26 ಕ್ಕೆ ಏರಿಕೆಯಾಗಿದೆ. ಕಂಪ್ಯೂಟರ್​ ಸಾಫ್ಟ್​ವೇರ್​​ ಮತ್ತು ಹಾರ್ಡ್​ವೇರ್​, ಆಟೋಮೊಬೈಲ್​​, ವ್ಯಾಪಾರ, ದೂರಸಂಪರ್ಕ ಸೇವೆಗಳು ಒಳಹರಿವು ಹೆಚ್ಚಾಗಲು ಪ್ರಮುಖ ಅಂಶಗಳಾಗಿದ್ದವು ಎಂದು ಸೀತಾರಾಮನ್​ ಹೇಳಿದ್ದಾರೆ.

ಈ ಹಿಂದಿನ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಸಿಂಗಪುರ ದೇಶವು ಪ್ರಮುಖ ಸ್ಥಾನದಲ್ಲಿದ್ದು, 8 ಬಿಲಿಯನ್​​ ಯುಎಸ್​​ ಡಾಲರ್​ನಷ್ಟು ಭಾರತದಲ್ಲಿ ಹೂಡಿಕೆ ಮಾಡಿತ್ತು. ವಿದೇಶಿ ಬಂಡವಾಳ ಎಂಬುದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ದೇಶದ ಮೂಲ ಸೌಕರ್ಯವನ್ನು ವೃದ್ಧಿಪಡಿಸಲು ಇದು ಸಹಕಾರಿಯಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ABOUT THE AUTHOR

...view details