ನವದೆಹಲಿ: ಆಯವ್ಯಯ ಮಂಡನೆಗೂ ಮುನ್ನ ಕೇಂದ್ರ ಸರ್ಕಾರದ ಆರ್ಥಿಕ ನಡೆಯ ವಿರುದ್ಧ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಟ್ವಿಟ್ಟರ್ನಲ್ಲಿ ಕಿಡಿಕಾರಿದ್ದಾರೆ.
2017-18 ಮತ್ತು 2018-19ರ ಬೆಳವಣಿಗೆ ದರಗಳನ್ನು ಕೆಳಮುಖವಾಗಿ ಪರಿಷ್ಕರಿಸಲಾಗಿದೆ. ಪ್ರಧಾನಿ ಮೋದಿಯ ಮೊದಲ ಅಧಿಕಾರ ಅವಧಿಯಲ್ಲಿ ಆರ್ಥಿಕತೆಯ ಸ್ಥಿತಿ ನಾವು ಇಲ್ಲಿಯವರೆಗೆ ನಂಬಿದ್ದಕ್ಕಿಂತ ಕೆಟ್ಟದಾಗಿತ್ತು ಎಂದು ಟೀಕಿಸಿದ್ದಾರೆ.