ಹೈದರಾಬಾದ್: ಕಳೆದ 20 ದಿನಗಳಿಂದ ಇಂಧನದ ಚಿಲ್ಲರ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಸಬ್ಸಿಡಿ ರಹಿತ ಸಿಲಿಂಡರ್ ದರದ ಮೇಲೆ 50 ರೂ. ಹೆಚ್ಚಳ ಮಾಡಲಾಗಿದೆ. ಇದರ ಮಧ್ಯೆ ಚಿಲ್ಲರ ಹಣದುಬ್ಬರ ಬೆಲೆ ಏರಿಕೆಯು ಮುಂದುವರಿಯಲಿದೆ ಎಂದು ಕೇಂದ್ರೀಯ ಬ್ಯಾಂಕ್ ಒಪ್ಪಿಕೊಂಡಿದೆ.
ಚಿಲ್ಲರೆ ಬೆಲೆ ಏರಿಕೆಯು ಮುಂದಿನ ಸೆಪ್ಟೆಂಬರ್ ತನಕ ಮುಂದುವರಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.
ವಿತ್ತೀಯ ನೀತಿ ಸಮಿತಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಗ್ರಾಹಕರ ಹಣದುಬ್ಬರವು ಉತ್ತುಂಗಕ್ಕೇರಿರುವ ಸಾಧ್ಯತೆಯಿದೆ. ಚಳಿಗಾಲ ಇರುವುದರಿಂದ ಹಾಳಾಗುವ ವಸ್ತುಗಳ ಕಡಿಮೆ ಬೆಲೆಯ ಕಾರಣದಿಂದಾಗಿ ಅಸ್ಥಿರತೆಗೆ ತಡೆಯಾಗಿದೆ ಎಂದರು.
ರೈತರ ಆದಾಯ ದ್ವಿಗುಣಗೊಳಿಸಲು ಮೋದಿಯಿಂದ ಸಾಧ್ಯವಿಲ್ಲ: ಅಭಿಜಿತ್ ಸೇನ್ ವಿಶ್ಲೇಷಣೆ!
2020-21ರ 3ನೇ ತ್ರೈಮಾಸಿಕದಲ್ಲಿ ಸಿಪಿಐ ಹಣದುಬ್ಬರವು ಶೇ 6.8ರಷ್ಟು, 4ನೇ ತ್ರೈಮಾಸಿಕದಲ್ಲಿ ಶೇ 5.8ರಷ್ಟು ಇರಲಿದೆ ಎಂಬ ನಿರೀಕ್ಷೆ ಇದೆ. 2021-22ರ ಅರ್ಧ ವಾರ್ಷಿಕದಲ್ಲಿ ಶೇ 5.2ರಿಂದ 4.6ರಷ್ಟಿದೆ ಎಂದು ಇತ್ತೀಚಿನ ಹಣಕಾಸು ನೀತಿ ತಿಳಿಸಿದೆ.