ಕರ್ನಾಟಕ

karnataka

ETV Bharat / business

20 ರೂ. ಇದ್ದ ನೀರಿನ​ ಬಾಟಲ್ ಇನ್ಮುಂದೆ 13 ರೂ.ಗೆ ಮಾರಲು ಆದೇಶ - ಆಹಾರ ಮತ್ತು ನಾಗರಿಕ ಸರಬರಾಜು

ಒಂದು ಲೀಟರ್ ಬಾಟಲ್ ನೀರಿಗೆ ಪ್ರಸ್ತುತ ಕೇರಳ ರಾಜ್ಯದಲ್ಲಿ 20 ರೂ. ನಿಗದಿಪಡಿಸಲಾಗಿದ್ದು, ಇದನ್ನು 13 ರೂ.ಗೆ ಇಳಿಸಲು ನಿರ್ಧರಿಸಿದೆ. ಆದರೆ, ಇದಕ್ಕೆ ಬಾಟಲಿ ನೀರು ತಯಾರಕರು ಮತ್ತು ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Bottled drinking water
ನೀರಿನ​ ಬಾಟಲ್

By

Published : Feb 13, 2020, 10:04 PM IST

ತಿರುವನಂತಪುರಂ: ಕೇರಳದಲ್ಲಿ ಬಾಟಲಿ ಕುಡಿಯುವ ನೀರು ಇನ್ನು ಮುಂದೆ ಅಗ್ಗವಾಗಲಿದೆ. ನೀರಿನ ಬಾಟಲ್​ ಬೆಲೆ ನಿಯಂತ್ರಿಸುವ ಉದ್ದೇಶದಿಂದ ಪ್ಯಾಕೇಜ್ಡ್​ ನೀರನ್ನು ಅಗತ್ಯ ಸರಕುಗಳ ಕಾಯ್ದೆಯ ವ್ಯಾಪ್ತಿಗೆ ತರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಒಂದು ಲೀಟರ್ ಬಾಟಲ್ ನೀರಿಗೆ ಪ್ರಸ್ತುತ ಕೇರಳ ರಾಜ್ಯದಲ್ಲಿ 20 ರೂ. ನಿಗದಿಪಡಿಸಲಾಗಿದೆ. ಇದನ್ನು 13 ರೂ.ಗೆ ಇಳಿಸಲು ನಿರ್ಧರಿಸಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪಿ. ತಿಲೋಥಮನ್ ಅವರು ಮಾತನಾಡಿ, ಬಾಟಲಿ ನೀರಿನ ಬೆಲೆಯನ್ನು ನಿಯಂತ್ರಿಸಲು ಸರ್ಕಾರ ನಿರ್ಧರಿಸಿದೆ. ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು. ಹೀಗಾಗಿ, ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಹೊಸ ಬೆಲೆಯ ಅಧಿಸೂಚನೆಯು ಇನ್ನೆರಡು ದಿನಗಳಲ್ಲಿ ಜಾರಿಗೆ ಬರಲಿದೆ. ಅಗತ್ಯ ವಸ್ತುಗಳ ವರ್ಗದ ಅಡಿಯಲ್ಲಿ ಬಾಟಲಿ ನೀರನ್ನು ತರುವ ಬಗ್ಗೆ ನಾವು ಕಾನೂನು ತಜ್ಞರ ಅಭಿಪ್ರಾಯಗಳನ್ನು ಪಡೆದಿದ್ದೇವೆ. ಪ್ರತಿ ಲೀಟರ್‌ ನೀರಿಗೆ 13 ರೂ. ನಿಗದಿಪಡಿಸಲಾಗುವುದು ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರವು 11-12 ರೂ.ಯಷ್ಟು ಬೆಲೆ ಕಡಿತಗೊಳಿಸಲು ನಿರ್ಧರಿಸಿದ್ದರೂ ದೊಡ್ಡ ಪ್ರಮಾಣದ ಬಾಟಲಿ ನೀರು ತಯಾರಕರು ಮತ್ತು ವ್ಯಾಪಾರಿಗಳ ಪ್ರತಿಭಟನೆಯಿಂದಾಗಿ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಸಚಿವರು ಹೇಳಿದರು.

ಬೆಲೆಯ ವಿರುದ್ಧ ವ್ಯಾಪಕ ದೂರುಗಳು ಬಂದವು. ತಯಾರಕರ ಒಂದು ಭಾಗವು ಬೆಲೆ ಕಡಿತವನ್ನು ವಿರೋಧಿಸಿತ್ತು. ಸಭೆ ಕರೆದಾಗ ಸ್ಥಳೀಯ ವ್ಯಾಪಾರಿಗಳು 11-12 ರೂ.ಗೆ ಮಾರಾಟ ಮಾಡುವ ಪ್ರಸ್ತಾಪವನ್ನು ವಿರೋಧಿಸಿದರು. ಬಾಟಲಿ ನೀರನ್ನು ಅತ್ಯಗತ್ಯ ಸರಕುವನ್ನಾಗಿ ಮಾಡಿರುವುದರಿಂದ ಬೆಲೆ ಕಡಿತ ಸಾಧ್ಯ ಎಂದು ಸಚಿವರು ಹೇಳಿದರು.

ಎರಡು ವರ್ಷಗಳ ಹಿಂದೆ ಬಾಟಲ್​ ನೀರಿನ ದರವನ್ನು 12 ರೂ.ಗೆ ಇಳಿಸಲು ಸಿದ್ಧರಿದ್ದರು. ಆದರೆ ಸದಸ್ಯರ ಮತ್ತೊಂದು ಗುಂಪು ಇದಕ್ಕೆ ವಿರುದ್ಧ ವ್ಯಕ್ತಪಡಿಸಿತ್ತು. ಕೇರಳದೊಳಗೆ ಪ್ಯಾಕೇಜ್ ಕುಡಿಯುವ ನೀರಿನ ಬೆಲೆ 13 ರೂ.ಗಿಂತ ಹೆಚ್ಚಿದ್ದರೆ ಅದು ಅಪರಾಧವಾಗುತ್ತದೆ ಎಂದು ಕೇರಳದ ಬಾಟಲಿ ನೀರು ತಯಾರಕರ ಸಂಘದ ಅಧ್ಯಕ್ಷ ಕೆ ಮುಹಮ್ಮದ್ ತಿಳಿಸಿದ್ದಾರೆ.

ABOUT THE AUTHOR

...view details