ನವದೆಹಲಿ :ಕೊರೊನಾ ವೈರಸ್ನಿಂದಾಗಿ ರಾಷ್ಟ್ರಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್ ಅವಧಿಯಲ್ಲಿ ಆರೋಗ್ಯ ವಿಮೆ ಹಾಗೂ ಮೋಟಾರ್ ವಾಹನಗಳ ವಿಮಾ ಕಂತುಗಳ ಪಾವತಿಯನ್ನು ಮುಂದೂಡಲಾಗಿದೆ. ವಿಮೆಗಳ ಪ್ರೀಮಿಯಂ ಪಾವತಿ ಅವಧಿಯನ್ನು ಏಪ್ರಿಲ್ 21ರವರೆಗೂ ವಿಸ್ತರಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಬಿಗ್ ರಿಲೀಫ್.. ಆರೋಗ್ಯ, ಮೋಟಾರ್ ವಾಹನ ವಿಮೆ ಕಂತು ಪಾವತಿ ಮುಂದೂಡಿಕೆ.. - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಮಾರ್ಚ್ 25ರಿಂದ ಏಪ್ರಿಲ್ 14ರ ತನಕ ಪಾವತಿ ಆಗಬೇಕಾದ ಆರೋಗ್ಯ ಮತ್ತು ಆಟೋ ವಿಮೆ ಪಾಲಿಸಿ ಸ್ಥಗಿತವಾಗಲಿದೆ. ಪಾಲಿಸಿದಾರರು ಲಾಕ್‌ಡೌನ್ ಅವಧಿಯಲ್ಲಿ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೆ, ಪಾಲಿಸಿ ಕಳೆದುಕೊಳ್ಳುವ ಬಗ್ಗೆ ಆತಂಕ ಪಡಬೇಕಿಲ್ಲ.
ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಥರ್ಡ್ ಪಾರ್ಟಿ (ಮೂರನೇ ವ್ಯಕ್ತಿಯ)ಮೋಟಾರ್ ವಾಹನ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿದಾರರಿಗೆ ಸರ್ಕಾರ ಕಾಲಾವಕಾಶ ಒದಗಿಸುತ್ತಿದೆ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಾರ್ಚ್ 25ರಿಂದ ಏಪ್ರಿಲ್ 14ರ ತನಕ ಪಾವತಿ ಆಗಬೇಕಾದ ಆರೋಗ್ಯ ಮತ್ತು ಆಟೋ ವಿಮೆ ಪಾಲಿಸಿ ಸ್ಥಗಿತವಾಗಲಿದೆ. ಪಾಲಿಸಿದಾರರು ಲಾಕ್‌ಡೌನ್ ಅವಧಿಯಲ್ಲಿ ಪ್ರೀಮಿಯಂ ಪಾವತಿಸಲು ಸಾಧ್ಯವಾಗದಿದ್ದರೆ, ಪಾಲಿಸಿ ಕಳೆದುಕೊಳ್ಳುವ ಬಗ್ಗೆ ಆತಂಕ ಪಡಬೇಕಿಲ್ಲ. ಏಪ್ರಿಲ್ 21ರವರೆಗೆ ಪಾವತಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.