ನವದೆಹಲಿ: ಇಂದು ಕೇಂದ್ರದ ಬಜೆಟ್ ಮಂಡಿಸುವಾಗ 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆ ಅದ್ಭುತ ಫಲಿತಾಂಶಗಳನ್ನು ನೀಡಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಂತಸ ವ್ಯಕ್ತಪಡಿಸಿದರು.
'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯಿಂದ ಬಾಲಕಿಯರ ದಾಖಲಾತಿ ಹೆಚ್ಚಳ - Women Budget 2020
ಇಂದು ಕೇಂದ್ರದ ಬಜೆಟ್ ಮಂಡಿಸುವಾಗ 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆ ಅದ್ಭುತ ಫಲಿತಾಂಶಗಳನ್ನು ನೀಡಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸಂತಸ ವ್ಯಕ್ತಪಡಿಸಿದರು.
ಎಲ್ಲಾ ಹಂತದ ಶಿಕ್ಷಣದಲ್ಲಿ ಬಾಲಕಿಯರ ಒಟ್ಟು ದಾಖಲಾತಿ ಅನುಪಾತವು ಬಾಲಕರಿಗಿಂತ ಹೆಚ್ಚಾಗಿದೆ. 2017-18ರಲ್ಲಿ ಕುಪೋಷಣ ಅಭಿಯಾನದ ಮೂಲಕ ಜಾಗೃತಿ ಮಕ್ಕಳ ಪೌಷ್ಟಿಕಾಂಶ, ಗರ್ಭಿಣಿಯರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 6 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತರು ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಿ, ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಹಾಗೂ ಪೌಷ್ಠಿಕಾಂಶಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಗರ್ಭಿಣಿಯರ ಸಾವು ತಡೆಗಟ್ಟುವ ಉದ್ದೇಶದಿಂದ ಹೊಸ ಟಾಸ್ಕ್ ಪೋರ್ಸ್ ನಿಯೋಜನೆಗೆ ಯೋಜನೆ ರೂಪಿಸಲಾಗಿದೆ. 28,600 ಕೋಟಿ ಅನುದಾನವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಯೋಜನೆಗೆ ಮೀಸಲಿಡಲಾಗಿದೆ ಎಂದು ಘೋಷಿಸಿದರು.