ಕರ್ನಾಟಕ

karnataka

ETV Bharat / business

ಬೆಂಗಳೂರಲ್ಲಿ ಪರಿಸರ ಸ್ನೇಹಿ ರಿಯಲ್ ಎಸ್ಟೇಟ್ ಯೋಜನೆ: ಕಟ್ಟಡದಲ್ಲೇ ನೈಸರ್ಗಿಕ ವಿದ್ಯುತ್‌ ಶಕ್ತಿ - Atelier Global

ರಿಯಲ್​ ಎಸ್ಟೇಟ್​ ಡೆವಲಪರ್​ ಅಟೆಲಿಯರ್​ ನಗರದಲ್ಲಿ ಬೃಹತ್​ ವೈಟ್​​ಫಿಲ್ಡ್​ ಟವರ್​ ನಿರ್ಮಿಸಲಿದ್ದು ಬ್ಯುಸಿನೆಸ್​ ಚೆಕ್​ ಇನ್ ಮೂಲಕ​ 6.9 ಲಕ್ಷ ಚದರಡಿ ವಿಸ್ತೀರ್ಣದ ಕಚೇರಿ ಸಮುಚ್ಚಯ, 2ನೇ ಹಂತದ ಶಾಪಿಂಗ್​ ಮಳಿಗೆಗಳು, 60 ಕೊಠಡಿಗಳ ಬ್ಯಾಂಕ್ವೆಟ್​ ಹೋಟೆಲ್​, ಉನ್ನತ ಮಟ್ಟದ ವಾಣಿಜ್ಯ ಮಳಿಗೆಗಳು ತಲೆ ಎತ್ತಲಿವೆ. ಕಟ್ಟಡದಲ್ಲಿ ನೈಸರ್ಗಿಕ ಅನಿಲವನ್ನು ಬಳಸಿಕೊಂಡು ಶುದ್ಧ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ.

ಸಾಂದರ್ಭಿಕ ಚಿತ್ರ

By

Published : Aug 29, 2019, 7:50 PM IST

ಬೆಂಗಳೂರು: ಬ್ಲೂಮ್ ಎನರ್ಜಿ, ಅಟೆಲಿಯರ್ ಗ್ಲೋಬಲ್, ಗೇಲ್ (ಇಂಡಿಯಾ) ಲಿಮಿಟೆಡ್, ಐಒಸಿ ಮತ್ತು ಅಮೆರಿಕ-ಭಾರತದ ಸ್ಟ್ರಾಟೆಜಿಕ್​ ಸಹಭಾಗಿತ್ವದಡಿ ಬೆಂಗಳೂರಿನಲ್ಲಿ ಬೃಹತ್ ಪರಿಸರ ಸ್ನೇಹಿ ವಾಣಿಜ್ಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಯೋಜನೆಯೊಂದನ್ನು ಘೋಷಿಸಿದೆ.

ರಿಯಲ್​ ಎಸ್ಟೇಟ್​ ಡೆವಲಪರ್​ ಅಟೆಲಿಯರ್​ ಬೃಹತ್​ ವೈಟ್​​ಫಿಲ್ಡ್​ ಟವರ್ ನಿರ್ಮಿಸಲಿದ್ದು, ಬ್ಯುಸಿನೆಸ್​ ಚೆಕ್​ ಇನ್​ ಅಡಿ 6.9 ಲಕ್ಷ ಚದರಡಿ ವಿಸ್ತೀರ್ಣದ ಕಚೇರಿಗಳ ಸಮುಚ್ಚಯ, 2ನೇ ಹಂತದ ಶಾಪಿಂಗ್​ ಮಳಿಗೆಗಳು, 60 ಕೊಠಡಿಗಳ ಬ್ಯಾಂಕ್ವೆಟ್​ ಹೋಟೆಲ್​, ಉನ್ನತ ಮಟ್ಟದ ವಾಣಿಜ್ಯ ಮಳಿಗೆಗಳು ತಲೆ ಎತ್ತಲಿವೆ. ಕಟ್ಟಡದಲ್ಲಿ ನೈಸರ್ಗಿಕ ಅನಿಲವನ್ನು ಬಳಸಿಕೊಂಡು ಶುದ್ಧ ವಿದ್ಯುತ್ ಸರಬರಾಜು ಮಾಡಲು ನಿರ್ಧರಿಸಲಾಗಿದೆ.

ವೈಟ್‌ಫೀಲ್ಡ್ ಟವರ್ ನಿರ್ಮಾಣ ಪೂರ್ಣಗೊಂಡ ಬಳಿಕ 87,000 ಚದರಡಿ ನೆಲ ಅಂತಸ್ತು, ಶುದ್ದ ಗಾಳಿ ಹರಿದಾಡುವಂತಹ ವಾಸ್ತುಶಿಲ್ಪ, ಸೆಂಟ್ರಲ್ ಕೋರ್ ವಿನ್ಯಾಸ 4.5 ಮೀಟರ್ ಎತ್ತರ ಸೇರಿದಂತೆ ಶೇ 100 ಪ್ರತಿಶತದಷ್ಟು ಸೌರಶಕ್ತಿಯನ್ನು ಬಳಸಿಕೊಳ್ಳಲಾಗುವುದು ಎಂದು ಬ್ಲೂಮ್ ಎನರ್ಜಿ ಭರವಸೆ ನೀಡಿದೆ.

ಗೇಲ್ ಒದಗಿಸಿದ ನೈಸರ್ಗಿಕ ಅನಿಲದ ಮೇಲೆ ಬ್ಲೂಮ್ ಎನರ್ಜಿ ಸರ್ವರ್‌ಗಳು ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಅಟೆಲಿಯರ್ ಇರಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಅಭಿವೃದ್ಧಿಪಡಿಸಲಾದ ಬ್ಲೂಮ್ ಎನರ್ಜಿ ಸರ್ವರ್, ವಿಶ್ವದ ಅತ್ಯಂತ ಪರಿಣಾಮಕಾರಿ ವಾಣಿಜ್ಯೀಕರಣವಾಗಿ ಲಭ್ಯವಿರುವ ವಿದ್ಯುತ್ ಉತ್ಪಾದನಾ ಸಾಧನವಾಗಿದೆ. ಇಂತಹ ತಂತ್ರಜ್ಞಾನ ಸಿಲಿಕಾನ್ ಸಿಟಿಗೆ ಬರುತ್ತಿದ್ದು, ಅದು ವೈಟ್‌ಫೀಲ್ಡ್ ಟವರ್​ಗೆ ಅಳವಡಿಸಿಕೊಳ್ಳಲಾಗುತ್ತಿದೆ.

ಈ ಇಂಧನವು ಎಲೆಕ್ಟ್ರೋಕೆಮಿಕಲ್ ಪ್ರಕ್ರಿಯೆಯ ಮೂಲಕ ದಹನವಿಲ್ಲದೆ ವಿದ್ಯುತ್ ಶಕ್ತಿ ಉತ್ಪಾದಿಸುತ್ತದೆ. ಇದು ಯಾವುದೇ ರೀತಿಯ ಹೊಗೆ ಹೊರಸೂಸುವುದಿಲ್ಲ. ಬ್ಲೂಮ್ ಎನರ್ಜಿ ಸರ್ವರ್‌ಗಳು ನೈಸರ್ಗಿಕ ಅನಿಲವನ್ನು ಬಳಸಿಕೊಂಡು ಕಾರ್ಯನಿರ್ವಹಿಸಬಹುದು. ಆಹಾರ ಅಥವಾ ಪ್ರಾಣಿಗಳ ತ್ಯಾಜ್ಯ ಅಥವಾ ಹೈಡ್ರೋಜನ್ ಇಂಧನವಾಗಿ ಬಳಸಬಹುದು ಎಂದು ಬ್ಲೂಮ್ ಎನರ್ಜಿ ಹೇಳಿದೆ. ಈ ತಂತ್ರಜ್ಞಾನ ಅಳವಡಿಕೆಯಿಂದ ಉದ್ಯಾನ ನಗರಿಯಲ್ಲಿ ಯಥೇಚ್ಛವಾಗುತ್ತಿರುವ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರಬಹುದು ಎನ್ನಲಾಗುತ್ತಿದೆ.

ABOUT THE AUTHOR

...view details