ಕರ್ನಾಟಕ

karnataka

By

Published : Jul 31, 2020, 4:38 PM IST

ETV Bharat / business

ಡಿಜಿಟಲೀಕರಣಕ್ಕೆ ಬೆಂಗಳೂರು ದೇಶಕ್ಕೇ ಮಾದರಿ... ಲಂಡನ್, ದುಬೈ ಮಟ್ಟಕ್ಕೆ ಬೆಳೆದ ಕೆಂಪೇಗೌಡ ಕಟ್ಟಿದ ಸಿಟಿ!

ಭಾರತೀಯ ನಗರಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಇರಿಸಲು ಡಿಜಿಟಲೀಕರಣ ಪ್ರಮುಖವಾದ ಅಂಶವಾಗಿದೆ. ದೇಶದಲ್ಲಿ ಡಿಜಿಟಲೀಕರಣದ ಮಾದರಿಯಾಗಿ ಬೆಂಗಳೂರು ಸೂಕ್ತವಾಗಿದೆ ಎಂದು ಸೀಮೆನ್ಸ್ ಎಜಿ 'ಅಟ್ಲಾಸ್ ಆಫ್ ಡಿಜಿಟಲೀಕರಣ' ಎಂಬ ವರದಿ ಹೇಳಿದೆ.

Bangaluru
ಬೆಂಗಳೂರು

ನವದೆಹಲಿ: ಭಾರತದ ಐಟಿ ರಾಜಧಾನಿ ಬೆಂಗಳೂರು ಸುಸ್ಥಿರತೆ, ಚಲನಶೀಲತೆ ಮತ್ತು ಅವಕಾಶದಂತಹ ನಿಯತಾಂಕ ಆಧರಿಸಿ ದೇಶದಲ್ಲಿ ಡಿಜಿಟಲೀಕರಣದ ಮಾದರಿ ನಗರ ಎಂದು ವರದಿಯೊಂದು ತಿಳಿಸಿದೆ.

ಸೀಮೆನ್ಸ್ ಎಜಿ 'ಅಟ್ಲಾಸ್ ಆಫ್ ಡಿಜಿಟಲೀಕರಣ' ಎಂಬ ವರದಿ ಬಿಡುಗಡೆ ಮಾಡಿದ್ದು, ಇದರಲ್ಲಿ ಜಾಗತಿಕವಾಗಿ ನಗರಗಳ ಬದಲಾವಣೆಗಳನ್ನು ವಿಶ್ಲೇಷಿಸಿ, ಹೋಲಿಸಲಾಗಿದೆ.

ಬೆಂಗಳೂರು, ಬರ್ಲಿನ್, ಬ್ಯೂನಸ್ ಐರಿಸ್, ಲಂಡನ್, ಸಿಂಗಪುರ್, ದುಬೈ, ಜೋಹಾನ್ಸ್​ಬರ್ಗ್, ಲಾಸ್ ಏಂಜಲೀಸ್ ಮತ್ತು ತೈಪೆಯಂತಹ ವಿಶ್ವದ ಒಂಬತ್ತು ನಗರಗಳು ವರದಿಯಲ್ಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿ ನಗರದ ವಿಶಿಷ್ಟ ಸವಾಲುಗಳಲ್ಲಿ ಸಂಚಾರ ದಟ್ಟಣೆ, ನೀರಿನ ಲಭ್ಯತೆ ಮತ್ತು ಗಾಳಿಯ ಗುಣಮಟ್ಟ ಸೇರಿದಂತೆ ಡಿಜಿಟಲೀಕರಣ ಸಿದ್ಧತೆ ಮತ್ತು ಪ್ರಬಲತೆಯ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ.

ಭಾರತೀಯ ನಗರಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಇರಿಸಲು ಡಿಜಿಟಲೀಕರಣ ಪ್ರಮುಖವಾದ ಅಂಶವಾಗಿದೆ. ದೇಶದಲ್ಲಿ ಡಿಜಿಟಲೀಕರಣದ ಮಾದರಿಯಾಗಿ ಬೆಂಗಳೂರು ಸೂಕ್ತವಾಗಿದೆ ಎಂದು ವರದಿ ಹೇಳಿದೆ.

ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಕಳೆದ 10 ವರ್ಷಗಳಲ್ಲಿ ಜನಸಂಖ್ಯಾ ಸಾಂದ್ರತೆಯ ಶೇ 47ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಭೆಗಳ ಮೂರನೇ ಒಂದು ಭಾಗವಾಗಿರುವ ಈ ನಗರವು ದೇಶದಲ್ಲಿ ಅತಿ ಹೆಚ್ಚು ಉದ್ಯೋಗದ ಪ್ರಮಾಣ ಹೊಂದಿದೆ. ಹೆಚ್ಚಿನ ಪ್ರಮಾಣದಲ್ಲಿ ಟೆಕ್ ಬುದ್ಧಿವಂತ ಆರಂಭಿಕ ಅಳವಡಿಕೆದಾರರು ಇಲ್ಲಿದ್ದಾರೆ. ಬೆಂಗಳೂರು ಜಗತ್ತಿನಾದ್ಯಂತ ಒದಗಿಸುವ ವಿಶ್ವದ ಪ್ರಮುಖ ಸೇವೆಗಳನ್ನು ಸಂಕೇತಿಸುವ ನಗರವಾಗಿದೆ.

ABOUT THE AUTHOR

...view details