ಕೋಲ್ಕತ್ತಾ:ದೇಶದ ಕಲ್ಲಿದ್ದಲು ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡುವ ಕೇಂದ್ರದ ನಡೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧಿಸಿ, 'ಇದು ತಪ್ಪು ಸಂದೇಶ ರವಾನಿಸುವಂತಹದ್ದು' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
'ಆತ್ಮನಿರ್ಭರ' ಮಾತಾಡಿ ಕಲ್ಲಿದ್ದಲು ಕ್ಷೇತ್ರದಲ್ಲಿ ಶೇ 100% FDIಗೆ ಅವಕಾಶ ಕೊಟ್ಟಿದ್ದು ಸರಿಯೇ? ಮೋದಿಗೆ ದೀದಿ ಪತ್ರ - ಪ್ರಧಾನಿ ಮೋದಿಗೆ ಪತ್ರ
ಎಂಎನ್‌ಸಿಗಳಿಗೆ ಕಲ್ಲಿದ್ದಲು ವಲಯದಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶ ನೀಡುವುದು ತಪ್ಪು ಸಂದೇಶ ನೀಡುತ್ತದೆ. ಏಕೆಂದರೆ ಅದು 'ಆತ್ಮನಿರ್ಭರ ಭಾರತ'ದ ಮೂಲ ತತ್ವಕ್ಕೆ ವಿರುದ್ಧವಾಗಿರುತ್ತದೆ ಎಂದು ದೀದಿ ಅವರು ಮೋದಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಮೋದಿ- ಮಮತಾ ಬ್ಯಾನರ್ಜಿ
ಎಂಎನ್‌ಸಿಗಳಿಗೆ ಕಲ್ಲಿದ್ದಲು ವಲಯದಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶ ನೀಡುವುದು ತಪ್ಪು ಸಂದೇಶ ನೀಡುತ್ತದೆ. ಏಕೆಂದರೆ ಅದು 'ಆತ್ಮನಿರ್ಭರ ಭಾರತ'ದ ಮೂಲ ತತ್ವಕ್ಕೆ ವಿರುದ್ಧವಾಗಿರುತ್ತದೆ. ಇದು ನಾವು ಮೊದಲಿನಿಂದಲೂ ಅನುಸರಿಸುತ್ತಿರುವ ಸ್ವಾವಲಂಬಿ ನೀತಿಯ ದೃಷ್ಟಿಯನ್ನು ಕೊಲ್ಲುತ್ತದೆ ಎಂದು ದೀದಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.