ಕರ್ನಾಟಕ

karnataka

ETV Bharat / business

ರಾಜ್ಯ ಸರ್ಕಾರದಿಂದ ಬಿಎಎಸ್ಎಫ್ ಕೆಮಿಕಲ್ಸ್​ ಕಂಪನಿಗೆ ಡಿಮ್ಯಾಂಡ್​ ತೆರಿಗೆ ನೋಟಿಸ್ ಜಾರಿ - ವಾಣಿಜ್ಯ ತೆರಿಗೆ ಇಲಾಖೆ

ಕಂಪನಿಯ ಮಂಗಳೂರು ಘಟಕದ ವಿತರಕರಿಗೆ ಷೇರು ವರ್ಗಾವಣೆಯ ಅಂತರ್​ ರಾಜ್ಯ ಮಾರಾಟದಡಿ 2006-2007ರಿಂದ 2014-2015ರ ಅವಧಿಯಲ್ಲಿ ಒಟ್ಟು 620.93 ಕೋಟಿ ರೂ. (ಬಡ್ಡಿ ಮತ್ತು ದಂಡ ಸೇರಿದಂತೆ) ಗಳಿಕೆಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ ಡಿಮ್ಯಾಂಡ್​ ನೋಟಿಸ್ ಬಂದಿದೆ ಎಂದು ಬಿಎಎಸ್ಎಫ್ ಇಂಡಿಯಾ ಲಿಮಿಟೆಡ್ ತಿಳಿಸಿದೆ.

tax notice
ತೆರಿಗೆ

By

Published : Jul 9, 2020, 5:14 PM IST

ನವದೆಹಲಿ: ಕೆಮಿಕಲ್ಸ್ ತಯಾರಕ ಬಿಎಎಸ್ಎಫ್ ಇಂಡಿಯಾ ಲಿಮಿಟೆಡ್​, ಕರ್ನಾಟಕ ರಾಜ್ಯ ಸರ್ಕಾರದಿಂದ 46 ಕೋಟಿ ರೂ.ಯಷ್ಟು ತೆರಿಗೆ ಡಿಮ್ಯಾಂಡ್​ ನೋಟಿಸ್ ಸ್ವೀಕರಿಸಿದೆ.

ಕಂಪನಿಯ ಮಂಗಳೂರು ಘಟಕದ ವಿತರಕರಿಗೆ ಷೇರು ವರ್ಗಾವಣೆಯ ಅಂತರ್​ ರಾಜ್ಯ ಮಾರಾಟದಡಿ 2006-2007ರಿಂದ 2014-2015ರ ಅವಧಿಯಲ್ಲಿ ಒಟ್ಟು 620.93 ಕೋಟಿ ರೂ. (ಬಡ್ಡಿ ಮತ್ತು ದಂಡ ಸೇರಿದಂತೆ) ಗಳಿಕೆಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ ಡಿಮ್ಯಾಂಡ್​ ನೋಟಿಸ್ ಬಂದಿದೆ ಎಂದು ಕಂಪನಿ ತಿಳಿಸಿದೆ.

2006-2007 ರಿಂದ 2010-2011 ಮತ್ತು 2014-2015ರ ಅವಧಿಯ ಡಿಮ್ಯಾಂಡ್​ ಅನ್ನು ಮರುಪಡೆಯಲು ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದಿಂದ ಸ್ಟೇ ಆರ್ಡರ್ ಸಿಕ್ಕಿದೆ ಎಂದು ಬಿಎಎಸ್ಎಫ್ ಹೇಳಿದೆ.

ಕಂಪನಿಯು ಈಗ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ 2015-2016ರ ಹೆಚ್ಚಿನ ಅವಧಿಗೆ ಡಿಮ್ಯಾಂಡ್ ನೋಟಿಸ್ ಸ್ವೀಕರಿಸಿದೆ, ಮಂಗಳೂರು ಘಟಕದ ಷೇರು ವರ್ಗಾವಣೆಯನ್ನು ವಿತರಕರಿಗೆ ಅಂತರ್ ರಾಜ್ಯ ಮಾರಾಟವೆಂದು ಪರಿಗಣಿಸುವ ಮೂಲಕ ಒಟ್ಟು 46.01 ಕೋಟಿ ರೂ. (ಬಡ್ಡಿ ಮತ್ತು ದಂಡ) ಸೇರಿದೆ ಬಿಎಎಸ್ಎಫ್ ಇಂಡಿಯಾ ನಿಯಂತ್ರಕ ಫೈಲಿಂಗ್​ನಲ್ಲಿ ಹೇಳಿದೆ.

ABOUT THE AUTHOR

...view details