ನವದೆಹಲಿ:ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ಗಳು 1.15 ಲಕ್ಷ ಕೋಟಿ ರೂ. ಮೊತ್ತದಷ್ಟು ರೈಟ್ಆಫ್ ಸುಸ್ತಿ ಸಾಲ ಬರೆದಿಟ್ಟಿವೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಯಲ್ಲಿ ತಿಳಿಸಿದರು.
ಆರ್‌ಬಿಐ ಮಾರ್ಗಸೂಚಿ ಮತ್ತು ಬ್ಯಾಂಕ್ ಮಂಡಳಿಗಳು ಅನುಮೋದಿಸಿದ ನೀತಿಯ ಪ್ರಕಾರ, ನಾಲ್ಕು ವರ್ಷಗಳ ಪೂರ್ಣಗೊಂಡ ನಂತರ ಪೂರ್ಣ ನಿಬಂಧನೆಗಳನ್ನು ಒಳಗೊಂಡಂತೆ ನಿಷ್ಕ್ರಿಯ ಸಾಲಗಳನ್ನು ಸಂಬಂಧಪಟ್ಟ ಬ್ಯಾಂಕಿನ ಬ್ಯಾಲೆನ್ಸ್ ಶೀಟ್‌ನಿಂದ ರೈಟ್ಆಫ್ ಮೂಲಕ ಸುಸ್ತಿ ಸಾಲ ತೆಗೆದುಹಾಕಲಾಗುತ್ತದೆ ಎಂದು ಹೇಳಿದರು.
ಬ್ಯಾಂಕ್ಗಳು ತಮ್ಮ ಬ್ಯಾಲೆನ್ಸ್ ಶೀಟ್ ಅನ್ನು ಸ್ವಚ್ಛಗೊಳಿಸಲು, ತೆರಿಗೆ ಪ್ರಯೋಜನ ಪಡೆಯಲು ಮತ್ತು ಆರ್‌ಬಿಐ ಮಾರ್ಗಸೂಚಿ ಹಾಗೂ ತಮ್ಮ ಮಂಡಳಿಗಳು ಅನುಮೋದಿಸಿದ ನೀತಿಗೆ ಅನುಸಾರವಾಗಿ ಬಂಡವಾಳವನ್ನು ಉತ್ತಮಗೊಳಿಸಲು ನಿಯಮಿತ ನಡೆಯ ಭಾಗವಾಗಿ ರೈಟ್ಆಫ್ ಮೌಲ್ಯಮಾಪನ ಮಾಡುತ್ತವೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ ಹೇಳಿದರು.
ಸುಸ್ತಿ ಸಾಲಗಳ ಸಾಲಗಾರರು ಮರುಪಾವತಿಗೆ ಹೊಣೆಗಾರರಾಗಿ ಮುಂದುವರಿಯುತ್ತಿರುತ್ತದೆ. ಸಾಲದ ದಾಖಲೆ ಅಕೌಂಟ್ಗಳಲ್ಲಿ ಸಾಲಗಾರರಿಂದ ಬಾಕಿ ವಸೂಲಿ ಮಾಡುವ ಪ್ರಕ್ರಿಯೆಯು ಮುಂದುವರಿದಂತೆ ರೈಟ್ ಆಫ್ ಸಾಲಗಾರನಿಗೆ ಪ್ರಯೋಜನ ಆಗುವುದಿಲ್ಲ ಎಂದರು.
ಎಲೆಕ್ಷನ್ ಮಹಿಮೆ: ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆ
ಆರ್‌ಬಿಐ ಅಂಕಿಅಂಶಗಳ ಪ್ರಕಾರ, 2018-19, 2019-20ರ ಹಣಕಾಸು ವರ್ಷದಲ್ಲಿ ಹಾಗೂ 2020-21ರ ಮೊದಲ 3 ತ್ರೈಮಾಸಿಕದಲ್ಲಿ ರೈಟ್ ಆಫ್ ಪ್ರಮಾಣವು ಕ್ರಮವಾಗಿ ವಾಣಿಜ್ಯ ಬ್ಯಾಂಕ್ಗಳಲ್ಲಿ (ಎಸ್‌ಸಿಬಿ) 2,36,265 ಕೋಟಿ ರೂ., 2,34,170 ಕೋಟಿ ರೂ. ಮತ್ತು 1,15,038 ಕೋಟಿ ರೂ.ಯಷ್ಟು ಇದೆ ಎಂದರು.
ಏನಿದು ರೈಟ್ ಆಫ್?
ರೈಟ್ ಆಫ್ ಎಂದರೆ, ಸಾಲದ ದಾಖಲೆಯನ್ನು ತಾಂತ್ರಿಕವಾಗಿ ಕಡತದಿಂದ ಹೊರಗಿಡುವುದು ಎಂದರ್ಥ. ರೈಟ್ ಆಫ್ ಎಂದರೆ ಸಾಲಮನ್ನಾ ಮಾಡುವುದು ಎಂದರ್ಥವಲ್ಲ. ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚು ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ನೀಡುವ ಕ್ರಮವೇ ಸಾಲದ ರೈಟ್ ಆಫ್. ಬ್ಯಾಂಕ್ಗಳು ತಾವು ನೀಡಿದ ಸಾಲದ ಮರು ಮರು ವಸೂಲಾತಿ ತುಂಬ ಕಷ್ಟ ಎಂದು ಗಮನಕ್ಕೆ ಬಂದಾಗ ಈ ಕ್ರಮ ಕೈಗೊಳ್ಳುತ್ತವೆ. ಸುಸ್ತಿ ಸಾಲಗಳನ್ನು ತಮ್ಮ ಬ್ಯಾಲೆನ್ಸ್ಶೀಟ್ನಿಂದ ಪ್ರತ್ಯೇಕಗೊಳಿಸಲು ರೈಟ್ ಆಫ್ ಪದ್ಧತಿಯನ್ನು ಬಳಸುತ್ತವೆ. ಇದು ಪಕ್ಕ ಲೆಕ್ಕಪತ್ರಗಳ ಅನುಗುಣವಾಗಿ ಬಳಸಬಹುದಾದ ವಿಧಾನ. ಇದರಿಂದ ಬ್ಯಾಂಕ್ಗಳಿಗೆ ತೆರಿಗೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ರೈಟ್ ಆಫ್ ಎಂದರೇ ಯಾವುದೇ ಕಾರಣಕ್ಕೂ ಸಾಲ ಮನ್ನಾ ಅಲ್ಲ. ಸಾಲ ವಸೂಲಾತಿಯನ್ನು ಮುಂದೂಡಬಹುದು. ಅವಕಾಶ ಸಿಕ್ಕಾಗ ಬ್ಯಾಂಕ್ಗಳು ಬಡ್ಡಿ ಸಮೇತ ವಸೂಲಿ ಮಾಡುತ್ತವೆ.