ಕರ್ನಾಟಕ

karnataka

ETV Bharat / business

'ಕಂಪನಿಯೊಂದು ಬಾಗಿಲು ಮುಚ್ಚಿದರೆ ಬ್ಯಾಂಕ್​, ನೌಕರ, ಶ್ರೀಸಾಮಾನ್ಯ ಬೆಲೆ ತೆರಬೇಕಾಗುತ್ತೆ, ಸರ್ಕಾರವಲ್ಲ' - ದಿವಾಳಿತನ

ಯಾವುದೇ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮವಿದ್ದರೆ ಅದು ಇಡೀ ವಾಣಿಜ್ಯ ಪರಿಸರ ವ್ಯವಸ್ಥೆಯ ಮೇಲೆ ಪಸರಿಸುತ್ತದೆ. ಅದು ಬ್ಯಾಂಕ್​ಗಳೇ ಆಗಿರಲಿ ಅಥವಾ ನೌಕರರೇ ಆಗಿರಲಿ, ಮಾರಾಟಗಾರರೇ ಆಗಿರಲಿ ಇಲ್ಲವೇ ಗ್ರಾಹಕರೆ ಆಗಿರಲಿ ಅದರ ಪ್ರಭಾವಕ್ಕೆ ಪ್ರತಿಯೊಬ್ಬರೂ ಒಳಪಟ್ಟಿರುತ್ತಾರೆ. ಅಂತಹ ಸಂದಿಗ್ಧತೆ ಎದುರಾಗಿ ಟೆಲಿಕಾಂ ಕಂಪನಿಗಳು ದಿವಾಳಿಯತ್ತ ಸಾಗಿದರೆ ಬ್ಯಾಂಕ್​ಗಳ ಮೇಲೆ ಅದರ ದುಷ್ಪರಿಣಾಮ ಪರಿಣಾಮ ಉಂಟಾಗುತ್ತದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಎಚ್ಚರಿಸಿದರು.

SBI Chairman Rajnish Kumar
ರಜನೀಶ್ ಕುಮಾರ್

By

Published : Feb 15, 2020, 11:44 PM IST

Updated : Feb 15, 2020, 11:50 PM IST

ನವದೆಹಲಿ: ಟೆಲಿಕಾಂ ಕಂಪನಿಗಳು ಹಿಂದಿನ ಬಾಕಿ ಮೊತ್ತ 1.47 ಲಕ್ಷ ಕೋಟಿ ರೂ. ಪಾವತಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ, 'ಯಾವುದೇ ಟೆಲಿಕಾಂ ಸಂಸ್ಥೆಯು ದಿವಾಳಿತನದ ಫೈಲ್ ಮಾಡಿದರೆ ಬ್ಯಾಂಕ್​ಗಳು ಬೆಲೆ ತೆರಬೇಕಾಗುತ್ತವೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಎಚ್ಚರಿಸಿದಾರೆ.

ಟೆಲಿಕಾಂ ಕಂಪನಿಗಳು ಕಾದು ನೋಡುವ ತಂತ್ರದಲ್ಲಿವೆ. ಸುಪ್ರೀಂಕೋರ್ಟ್ ಆದೇಶ ಅನುಸರಿಸುವುದನ್ನು ಖಚಿತಪಡಿಸುವ ಹೊಣೆಗಾರಿಕೆ ದೂರಸಂಪರ್ಕ ಇಲಾಖೆಯ (ಡಿಒಟಿ) ಬಳಿ ಇದೆ ಹೊರತು ಸರ್ಕಾರದ ಅಡಿಯಲ್ಲಿ ಅಲ್ಲ ಎಂದರು.

ಯಾವುದೇ ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮವಿದ್ದರೆ ಅದು ಇಡೀ ವಾಣಿಜ್ಯ ಪರಿಸರ ವ್ಯವಸ್ಥೆಯ ಮೇಲೆ ಪಸರಿಸುತ್ತದೆ. ಅದು ಬ್ಯಾಂಕ್​ಗಳೇ ಆಗಿರಲಿ ಅಥವಾ ನೌಕರರೇ ಆಗಿರಲಿ, ಮಾರಾಟಗಾರರೇ ಆಗಿರಲಿ ಇಲ್ಲವೇ ಗ್ರಾಹಕರೇ ಆಗಿರಲಿ ಅದರ ಪ್ರಭಾವಕ್ಕೆ ಪ್ರತಿಯೊಬ್ಬರೂ ಒಳಪಟ್ಟಿರುತ್ತಾರೆ. ಅಂತಹ ಸಂದಿಗ್ಧತೆ ಎದುರಾಗಿ ಟೆಲಿಕಾಂ ಕಂಪನಿಗಳು ದಿವಾಳಿಯತ್ತ ಸಾಗಿದರೆ ಬ್ಯಾಂಕ್​ಗಳ ಮೇಲೆ ಅದರ ದುಷ್ಪರಿಣಾ ಪರಿಣಾಮ ಉಂಟಾಗುತ್ತದೆ ಎಂದು ಕುಮಾರ್ ಹೇಳಿದರು.

ಯಾವುದೇ ಕಾರ್ಪೊರೇಟ್ ಸಂಸ್ಥೆಯೊಂದು ಸ್ಥಗಿತಗೊಂಡಿರೆ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಉದ್ಯಮವನ್ನು ಸ್ಥಗಿತಗೊಳಿಸುವುದನ್ನು ತಡೆಯುವ ಪ್ರಯತ್ನ ಮಾಡಬೇಕು ಎಂದು ಎಚ್ಚರಿಸಿದರು.

ಅನುತ್ಪಾದಕ ಆಸ್ತಿಯಡಿ (ಎನ್​ಪಿಎ) ಏರ್‌ಸೆಲ್ ಮತ್ತು ಆರ್‌ಕಾಮ್ ದಿವಾಳಿಯಾಗಿವೆ. ಅವುಗಳ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಠೇವಣಿ ವಿಮೆಯ ಪ್ರೀಮಿಯಂ ಹೆಚ್ಚಳದ ಹೊರೆ ಹಾಕುವುದಿಲ್ಲ ಎಂದು ಕುಮಾರ್ ಭರವಸೆ ನೀಡಿದರು.

Last Updated : Feb 15, 2020, 11:50 PM IST

ABOUT THE AUTHOR

...view details