ಕರ್ನಾಟಕ

karnataka

ETV Bharat / business

ಸೆ.15ರ ಒಳಗೆ ಸಾಲಗಾರರ ನಿರ್ಣಯ ಯೋಜನೆ ರೂಪಿಸಿ: ಬ್ಯಾಂಕರ್​ಗಳಿಗೆ ಸೀತಾರಾಮನ್ ತಾಕೀತು - ಸಾಲ

2020ರ ಸೆಪ್ಟೆಂಬರ್ 15ರ ಒಳಗೆ ಸಾಲ ನೀಡುವವರ ನಿರ್ಣಯ ಯೋಜನೆ ರೂಪಿಸಬೇಕು. ಆ ನಂತರ ಜಾಗೃತಿ ಮೂಡಿಸುವ ನಿರಂತರ ಮಾಧ್ಯಮ ಅಭಿಯಾನ ಕೈಗೊಳ್ಳಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕರ್​ಗಳಿಗೆ ಒತ್ತಾಯಿಸಿದರು.

FM Nirmala Sitharaman
ನಿರ್ಮಲಾ ಸೀತಾರಾಮನ್

By

Published : Sep 3, 2020, 5:47 PM IST

ನವದೆಹಲಿ: ಬ್ಯಾಂಕ್ ಸಾಲಗಳಲ್ಲಿನ ಕೋವಿಡ್​ -19 ಸಂಬಂಧಿತ ಒತ್ತಡಗಳಿಗೆ ಪರಿಹಾರದ ಚೌಕಟ್ಟು ಅನುಷ್ಠಾನಗೊಳಿಸುವ ಕುರಿತು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶೆಡ್ಯೂಲ್ಡ್​ ವಾಣಿಜ್ಯ ಬ್ಯಾಂಕ್​ಗಳು ಮತ್ತು ಎನ್‌ಬಿಎಫ್‌ಸಿಗಳ ನಿರ್ವಾಹಕರ ಜತೆ ಗುರುವಾರ ಪರಿಶೀಲನಾ ಸಭೆ ನಡೆಸಿದರು.

2020ರ ಸೆಪ್ಟೆಂಬರ್ 15ರ ಒಳಗೆ ಸಾಲ ನೀಡುವವರ ನಿರ್ಣಯ ಯೋಜನೆ ರೂಪಿಸಬೇಕು. ಆ ನಂತರ ಜಾಗೃತಿ ಮೂಡಿಸುವ ನಿರಂತರ ಮಾಧ್ಯಮ ಅಭಿಯಾನ ಕೈಗೊಳ್ಳಬೇಕು ಎಂದು ಹಣಕಾಸು ಸಚಿವರು ಒತ್ತಾಯಿಸಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ವ್ಯವಹಾರಗಳನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಿರುವ ಬ್ಯಾಂಕ್​ಗಳು ನಿರ್ಣಯ ಯೋಜನೆಗಳನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು. ಸಾಲ ಮರುಪಾವತಿಗಳ ಮೇಲಿನ ನಿಷೇಧ ತೆಗೆದುಹಾಕಿದಾಗ ಸಾಲಗಾರರನ್ನು ಬೆಂಬಲಿಸುವಂತೆ ಸೀತಾರಾಮನ್ ಸಾಲದಾತರಿಗೆ ಕೋರಿದರು. ಸಾಂಕ್ರಾಮಿಕ ರೋಗದಿಂದ ಉಂಟಾಗುವ ತೊಂದರೆಯು ಸಾಲಗಾರರ ಸಾಲದ ಮೌಲ್ಯಮಾಪನಕ್ಕೆ ಪರಿಣಾಮ ಬೀರಬಾರದು ಎಂದು ಎಚ್ಚರಿಸಿದರು.

ಕೆ.ವಿ. ಕಾಮತ್ ಸಮಿತಿಯು ಸಾಲದ ಸೇವಾ ವ್ಯಾಪ್ತಿ ಅನುಪಾತ, ಸಾಲ-ಈಕ್ವಿಟಿ ಅನುಪಾತದ ರೆಸಲ್ಯೂಶನ್ ಮತ್ತು ಕಾರ್ಪೊರೇಟ್ ಸಾಲ ಮರುಪಡೆಯಲು ಬಡ್ಡಿ ವ್ಯಾಪ್ತಿ ಅನುಪಾತದಂತಹ ಹಣಕಾಸಿನ ನಿಯತಾಂಕಗಳ ಶಿಫಾರಸುಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ತಜ್ಞರ ತಂಡ ರಚಿಸಿದ 30 ದಿನಗಳಲ್ಲಿ ಇದರ ಶಿಫಾರಸುಗಳನ್ನು ತಿಳಿಸಲಾಗುವುದು. ಅಂದರೆ ಅಧಿಸೂಚನೆಯು ಸೆಪ್ಟೆಂಬರ್ 6ರ ಒಳಗೆ ಹೊರಬರಲಿದೆ.

ಚೌಕಟ್ಟಿನಡಿಯಲ್ಲಿ ಜಾರಿಗೆ ತರಬೇಕಾದ ನಿರ್ಣಯ ಯೋಜನೆಗಳು, ಸಾಲ ಪಡೆದ ಆದಾಯದ ಮೌಲ್ಯಮಾಪನದ ಆಧಾರದ ಮೇಲೆ ಸಂಗ್ರಹಿಸಿದ ಯಾವುದೇ ಬಡ್ಡಿಯನ್ನು ಮತ್ತೊಂದು ಸಾಲ ಸೌಲಭ್ಯವಾಗಿ ಪರಿವರ್ತಿಸುವುದು ಅಥವಾ ನಿಷೇಧಿಸುವುದು ಮತ್ತು ಮರುಪಾವತಿಗಳ ಮರುಹೊಂದಿಸುವಿಕೆ ಎರಡು ವರ್ಷಗಳವರೆಗೆ ಇರಬಹುದಾಗಿದೆ.

ABOUT THE AUTHOR

...view details