ನವದೆಹಲಿ: ದೇಶದಲ್ಲಿನ ಬ್ಯಾಂಕುಗಳು ಆಗಸ್ಟ್‌ನಲ್ಲಿ ಬರೋಬ್ಬರಿ 15 ದಿನಗಳವರೆಗೆ ಬಂದ್ ಆಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕ್ಯಾಲೆಂಡರ್ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳನ್ನು ಹೊರತುಪಡಿಸಿ, ಆಗಸ್ಟ್ ತಿಂಗಳಲ್ಲಿ ಒಟ್ಟು ಎಂಟು ರಜಾದಿನಗಳಿವೆ. ಈ 8 ರಜಾದಿನಗಳಲ್ಲಿ ಕೆಲವು ರಾಜ್ಯಗಳ ನಿರ್ದಿಷ್ಟ ರಜಾದಿನಗಳಾಗಿದ್ದು ಎಲ್ಲಾ ಬ್ಯಾಂಕುಗಳು ಮುಚ್ಚಲ್ಪಡುವುದಿಲ್ಲ.
ದೇಶದಲ್ಲಿ ಬ್ಯಾಂಕ್‌ಗಳ ರಜಾದಿನಗಳನ್ನು 3 ವಿಭಾಗಗಳಲ್ಲಿ ವರ್ಗೀಕರಣ
ನೆಗೋಶಿಯಬಲ್ ಇನ್‌ಸ್ಟ್ರೂಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನಗಳು, ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾದಿನಗಳು ಮತ್ತು ಬ್ಯಾಂಕುಗಳ ಖಾತೆಗಳನ್ನು ಮುಚ್ಚುವುದು. ಆಗಸ್ಟ್ ತಿಂಗಳಲ್ಲಿ ರಾಜ್ಯ ನಿರ್ದಿಷ್ಟ ರಜಾದಿನಗಳು ನೆಗೋಶಿಯಬಲ್ ಇನ್‌ಸ್ಟ್ರೂಮೆಂಟ್ಸ್ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ.