ನವದೆಹಲಿ:ಎಟಿಎಂಗಳಲ್ಲಿ ತಾಂತ್ರಿಕ ಕಾರಣದಿಂದ ವಿಫಲಗೊಳ್ಳುವ ವಹಿವಾಟನ್ನು ಉಚಿತ ವಹಿವಾಟಿನನೊಂದಿಗೆ ಸೇರಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸಹವರ್ತಿ ಬ್ಯಾಂಕ್ಗಳಿಗೆ ಸೂಚನೆ ನೀಡಿದೆ.
ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್... ಎಟಿಎಂನ ಈ ಸೇವೆಗಳಲ್ಲಿ ಬದಲಾವಣೆ - ATM Transaction Today News
ಖಾತೆಯ ಉಳಿತಯ ಪರಿಶೀಲನೆ, ಚೆಕ್ ಬುಕ್ ಕೋರಿಕೆ, ತೆರಿಗೆ ಪಾವತಿ, ಹಣ ವರ್ಗಾವಣೆಯಂತಹ ಸೇವೆಗಳನ್ನು ಉಚಿತ ಎಟಿಎಂ ವಹಿವಾಟಿನ ವ್ಯಾಪ್ತಿಗೆ ಸೇರಿಸದಂತೆ ಆರ್ಬಿಐ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಖಾತೆಯ ಉಳಿತಯ ಪರಿಶೀಲನೆ, ಚೆಕ್ ಬುಕ್ ಕೋರಿಕೆ, ತೆರಿಗೆ ಪಾವತಿ, ಹಣ ವರ್ಗಾವಣೆಯಂತಹ ಸೇವೆಗಳನ್ನು ಉಚಿತ ಎಟಿಎಂ ವಹಿವಾಟಿನ ವ್ಯಾಪ್ತಿಗೆ ಸೇರಿಸದಂತೆ ಆರ್ಬಿಐ ತಿಳಿಸಿದೆ.
ಎಟಿಎಂಗಳಲ್ಲಿ ಹಣ ಇಲ್ಲದಿರುವಿಕೆ, ಸಾಫ್ಟವೇರ್, ಹಾರ್ಡ್ವೇರ್ ಸಮಸ್ಯೆ, ತಪ್ಪಾಗಿ ಪಿನ್ ನಮೂದಿಸುವಿಕೆ ಮತ್ತಿತರ ಕಾರಣದಿಂದ ಎಟಿಎಂ ವಹಿವಾಟು ವಿಫಲಗೊಳ್ಳುವುದಕ್ಕೆ ಬ್ಯಾಂಕ್ಗಳು ಶುಲ್ಕ ವಿಧಿಸುತ್ತಿರುವುದು ಗಮನಕ್ಕೆ ಬಂದಿದೆ. ತಾಂತ್ರಿಕ ಕಾರಣದಿಂದ ವಿಫಲವಾದ ಎಟಿಎಂ ವಹಿವಾಟಿಗೆ ಶುಲ್ಕ ವಿಧಿಸದಂತೆ ಆರ್ಬಿಐ ಸೂಚಿಸಿದೆ.