ಕರ್ನಾಟಕ

karnataka

By

Published : Oct 10, 2019, 3:18 PM IST

ETV Bharat / business

3 ವರ್ಷದಲ್ಲಿ 416 ಕಟಬಾಕಿದಾರರಿಂದ 1.76 ಲಕ್ಷ ಕೋಟಿ ರೂ. ವಂಚನೆ... ಹೇಗಾಯಿತು ಇದೆಲ್ಲ?

ಆರ್‌ಟಿಐ ಪ್ರತ್ಯುತ್ತರದಲ್ಲಿ 2014-15ರಿಂದ ದೇಶದ ಸಾರ್ವಜನಿಕ ವಲಯದ  ಮತ್ತು ಖಾಸಗಿ ಬ್ಯಾಂಕ್​ಗಳ ವಸೂಲಾಗದ ಮೊತ್ತದಲ್ಲಿ ನಿರಂತರ ಏರಿಕೆಯಾಗಿರುವುದು ಕಂಡುಬಂದಿದೆ. 2015 ಮತ್ತು 2018ರ ನಡುವೆ ಒಟ್ಟು 2.17 ಲಕ್ಷ ಕೋಟಿ ರೂ.ಯಷ್ಟು ವಾಣಿಜ್ಯ ಬ್ಯಾಂಕ್​​ಗಳ ಕೆಟ್ಟ ಸಾಲ(ಬ್ಯಾಡ್​ ಲೋನ್​) ಇದೆ. ಕಳೆದ 3 ವರ್ಷಗಳಲ್ಲಿ 416 ಜನ ಸಾಲ ಪಡೆದು ಹಿಂದುರುಗಿಸದ ಕಾರಣದಿಂದಾಗಿ 1.76 ಲಕ್ಷ ಕೋಟಿ ರೂ.ನಷ್ಟು ಬ್ಯಾಂಕ್​ಗಳಿಗೆ ನಷ್ಟವಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ:ಕಳೆದ ಮೂರು ವರ್ಷಗಳಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಗೆ 416 ಮಂದಿ ಸಾಲ ಪಡೆದು ಹಿಂದುರುಗಿಸದ ಕಾರಣದಿಂದಾಗಿ 1.76 ಲಕ್ಷ ಕೋಟಿ ರೂ. ಬ್ಯಾಂಕ್​ಗಳಿಗೆ ನಷ್ಟವಾಗಿದೆ.

ಪ್ರತಿಯೊಂದು ಸಾಲ ವಂಚನೆ ಪ್ರಮಾಣವು 100 ಕೋಟಿ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ್ದಾಗಿದ್ದು, ಅಷ್ಟು ಹಣ ಬಾಕಿ ಹಣ ಉಳಿಸಿಕೊಂಡಿವೆ. ಪ್ರತಿ ಸಾಲಗಾರನಿಗೆ ಸುಮಾರು 424 ಕೋಟಿ ರೂ.ನಷ್ಟು ವಸೂಲಾಗದ ಸಾಲವಿದೆ (ಎನ್​​ಪಿಎ) ಎಂದು ಹೇಳಲಾಗುತ್ತಿದೆ.

ದೊಡ್ಡ ಪ್ರಮಾಣದ ಸಾಲಗಳು ಮತ್ತು ಅತಿದೊಡ್ಡ ಸಾಲ ವಂಚಕ ಪ್ರಕರಣಗಳಿಗೆ ಸಂಬಂಧಿಸಿದ ದತ್ತಾಂಶವು ಮೊದಲ ಬಾರಿಗೆ ಕನಿಷ್ಠ 100 ಕೋಟಿ ರೂ. ದಾಟಿದೆ.

ಎಲ್ಲ ನಿಗದಿತ ವಾಣಿಜ್ಯ ಬ್ಯಾಂಕ್​ಗಳಿಗೆ ಬರಬೇಕಾದ ಮೊತ್ತವನ್ನು ಸ್ಪಷ್ಟಪಡಿಸುವಂತೆ ಮತ್ತು ಖಾತೆಗಳನ್ನು ಸರಿಯಾಗಿ ಹೊಂದಿಸುವಂತೆ ಆರ್‌ಬಿಐ ನಿರ್ದೇಶನ ನೀಡಿದ ಬಳಿಕ ಖಾಸಗಿ ಸುದ್ದಿವಾಹಿನಿ ಸಲ್ಲಿಸಿದ ಆರ್​ಟಿಐನಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಆರ್‌ಟಿಐ ಪ್ರತ್ಯುತ್ತರದಲ್ಲಿ 2014-15ರಿಂದ ದೇಶದ ಸಾರ್ವಜನಿಕ ವಲಯದ ಮತ್ತು ಖಾಸಗಿ ಬ್ಯಾಂಕ್​ಗಳ ವಸೂಲಾಗದ ಮೊತ್ತದಲ್ಲಿ ನಿರಂತರ ಏರಿಕೆಯಾಗಿರುವುದು ಕಂಡುಬಂದಿದೆ. 2015 ಮತ್ತು 2018ರ ನಡುವೆ ಒಟ್ಟು 2.17 ಲಕ್ಷ ಕೋಟಿ ರೂ.ಯಷ್ಟು ವಾಣಿಜ್ಯ ಬ್ಯಾಂಕ್​​ಗಳ ಬ್ಯಾಡ್​ ಲೋನ್​ ಇದೆ.

ABOUT THE AUTHOR

...view details