ಲಂಡನ್ :ಕೊರೊನಾ ವೈರಸ್ ಬಿಕ್ಕಟ್ಟು ಡಿಜಿಟಲ್ ಬ್ಯಾಂಕಿಂಗ್ ಮತ್ತು ರಿಮೋಟ್ ವರ್ಕಿಂಗ್ ಸಂಸ್ಕೃತಿಯನ್ನು ವೇಗಗೊಳಿಸುವುದರಿಂದ ಬ್ಯಾಂಕ್ಗಳು ಸೈಬರ್ ದಾಳಿಯ ಅಪಾಯವನ್ನು ಹೆಚ್ಚಾಗಿ ಎದುರಿಸುತ್ತಿವೆ ಎಂದು ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ತನ್ನ ವರದಿಯಲ್ಲಿ ತಿಳಿಸಿದೆ.
ಸಾಮಾಜಿಕ ಅಂತರವು ಪಾವತಿ, ಡಿಜಿಟಲ್ ನಗದು ವರ್ಗಾವಣೆ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಮತ್ತು ಬ್ಯಾಂಕ್ ಉದ್ಯೋಗಿಗಳ ರಿಮೋಟ್ ವರ್ಕಿಂಗ್‌ನ ವ್ಯಾಪಕವಾಗಿ ಸೃಷ್ಟಿಸಿದೆ ಎಂದು ಮೂಡಿಸ್‌ನ ಹಿರಿಯ ಉಪಾಧ್ಯಕ್ಷ ಅಲೆಸ್ಸಾಂಡ್ರೊ ರೊಕಾಟಿ ಹೇಳಿದರು.
ಫಿಶಿಂಗ್ ಇಮೇಲ್ ಅಥವಾ ಸೋಷಿಯಲ್ ಎಂಜಿನಿಯರಿಂಗ್ ಸ್ಕ್ಯಾಮ್ ಮುಖೇನ ಬ್ಯಾಂಕ್ಗಳ ಡಿಜಿಟಲ್ ಗ್ರಾಹಕರು ವಂಚಕರ ವಕ್ರದೃಷ್ಟಿಗೆ ಸ್ವಾಭಾವಿಕ ಗುರಿಯಾಗಿದ್ದಾರೆ. ಆಫೀಸ್ ನೆಟ್‌ವರ್ಕ್‌ಗಳನ್ನು ಲಾಗ್ಇನ್ ಆಗಲು ಬ್ಯಾಂಕ್ ಉದ್ಯೋಗಿಗಳು ಮನೆಯಲ್ಲಿನ ಸಾಧನಗಳನ್ನು ಬಳಸುತ್ತಿದ್ದಾರೆ. ಹೀಗಾಗಿ, ಮಾಲ್‌ವೇರ್ ಅಥವಾ ಸ್ಪೈವೇರ್ ದಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದ್ದು, ಅಸುರಕ್ಷಿತ ಮನೆ ವೈ-ಫೈ ನೆಟ್‌ವರ್ಕ್‌ಗಳು ದುರ್ಬಲ ಭದ್ರತೆಯ ರೂಟರ್‌ಗಳ ಜೊತೆ ಬಳಸಲಾಗುತ್ತಿವೆ ಎಂದಿದೆ.
ಸೈಬರ್ ದಾಳಿಗಳು ಹೆಚ್ಚಾಗಿ ಆರ್ಥಿಕವಾಗಿ ಪ್ರೇರಿತವಾಗಿವೆ. ಬಲಿಪಶು ಆಗುವ ಸಂಸ್ಥೆಗಳಿಂದ ಸುಲಭವಾಗಿ ಹಣಗಳಿಸಲು ಗುರಿಯಾಗಿಸುತ್ತಿವೆ. ದಾಳಿಗಳು ವಿವಿಧ ಮಾದರಿಯಲ್ಲಿ ನಡೆಯುತ್ತಿವೆ. ಬಹುಪಾಲು ಜನರು ವೈಯಕ್ತಿಕ ಡೇಟಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಬ್ಯಾಂಕ್ ಡೇಟಾದ ಮೇಲೆ ವಂಚಕರು ದೃಷ್ಟಿ ನೆಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವೆರಿಝೋನ್‌ನ ಇತ್ತೀಚಿನ ವರದಿಯ ಪ್ರಕಾರ, ಹಣಕಾಸು ವಲಯದಲ್ಲಿ ಸೈಬರ್-ದಾಳಿಗಳು ಹೆಚ್ಚಾಗಿ ಬಾಹ್ಯ ಹ್ಯಾಕರ್ಗಳಿಂದ (ಶೇ 64ರಷ್ಟು ಡೇಟಾ ಉಲ್ಲಂಘನೆ), ವೆಬ್ ಅಪ್ಲಿಕೇಷನ್ ಮತ್ತು ಕಂಪನಿಯ ಉದ್ಯೋಗಿಗಳು ಮಾಡಿದ ದೋಷಗಳ ಮೂಲಕ ನಡೆಯುತ್ತವೆ. ಸುಲಭವಾಗಿ ಹಣಗಳಿಸಿದ ಡೇಟಾವನ್ನು ಪಡೆಯುವುದು ದಾಳಿ ಹಿಂದಿನ ಪ್ರಮುಖ ಅಂಶವಾಗಿದೆ (ಡೇಟಾ ಉಲ್ಲಂಘನೆಯ ಶೇ 77ರಷ್ಟು).
ಬ್ಯಾಂಕ್ಗಳು ಸೈಬರ್ ಅಪಾಯವನ್ನು ಮೂರು ರೀತಿಯಲ್ಲಿ ತಗ್ಗಿಸುತ್ತವೆ ಎಂದು ವರದಿ ಹೇಳಿದೆ. ಮೊದಲನೆಯದು ಸೈಬರ್ ಭದ್ರತಾ ಚೌಕಟ್ಟುಗಳು, ನೀತಿ ಜಾರಿ ಮತ್ತು ವರದಿ ಮಾಡುವಿಕೆ ಸೇರಿದಂತೆ ಬಲವಾದ ಸಾಂಸ್ಥಿಕ ಆಡಳಿತ ರಚನೆ. ಎರಡನೆಯದು ಅಪಾಯ ತಡೆಗಟ್ಟುವಿಕೆ ಮತ್ತು ರೆಸ್ಪಾನ್ಸ್ ಮತ್ತು ಚೇತರಿಕೆಯ ಸಿದ್ಧತೆ. ಮೂರನೆಯದು ಇತರ ಬ್ಯಾಂಕ್ಗಳೊಂದಿಗೆ ಮಾಹಿತಿ ಹಂಚಿಕೆ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು ಮತ್ತು ನಿಯಂತ್ರಕ ಮೇಲ್ವಿಚಾರಣೆ ನಡೆಸುವುದು ಸೇರಿದೆ.