ಕರ್ನಾಟಕ

karnataka

ETV Bharat / business

ವಿಲೀನ ವಿರೋಧಿಸಿ ಬ್ಯಾಂಕ್​ ನೌಕರರ ಮುಷ್ಕರ; 26, 27ರಂದು ಸೇವೆಯಲ್ಲಿ ತೊಡಕು

ಸೆಪ್ಟೆಂಬರ್​ 26 ಮತ್ತು 27ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್​ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್​ ನ್ಯಾಷನಲ್​ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್​ (ಐಎನ್​ಬಿಒಸಿ) ಮತ್ತು ನ್ಯಾಷನಲ್​ ಆರ್ಗನೈಸೇಷನ್​ ಆಫ್ ಬ್ಯಾಂಕ್​ ಅಧಿಕಾರಿಗಳ (ನೊಬೊ) ಜಂಟಿಯಾಗಿ ನಡೆಸಲಿವೆ.

ಸಾಂದರ್ಭಿಕ ಚಿತ್ರ

By

Published : Sep 13, 2019, 8:08 PM IST

ನವದೆಹಲಿ:ಸಾರ್ವಜನಿಕ ವಲಯದ ಬ್ಯಾಂಕು​ಗಳನ್ನು ವಿಲೀನಗೊಳಿಸುವ ಸರ್ಕಾರದ ಕ್ರಮ ವಿರೋಧಿಸಿ ನಾಲ್ಕು ಬ್ಯಾಂಕ್​ ಅಧಿಕಾರಿಗಳ ಸಂಘಗಳು ಎರಡು ದಿನ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿವೆ.

ಸೆಪ್ಟೆಂಬರ್​ 26 ಮತ್ತು 27ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್​ ಮುಷ್ಕರಕ್ಕೆ ಕರೆ ನೀಡಲಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್​ ನ್ಯಾಷನಲ್​ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್​ (ಐಎನ್​ಬಿಒಸಿ) ಮತ್ತು ನ್ಯಾಷನಲ್​ ಆರ್ಗನೈಸೇಷನ್​ ಆಫ್ ಬ್ಯಾಂಕ್​ ಅಧಿಕಾರಿಗಳ (ನೊಬೊ) ಜಂಟಿಯಾಗಿ ಮುಷ್ಕರ ನಡೆಸಲಿವೆ.

ಬ್ಯಾಂಕಿಂಗ್ ಉದ್ಯಮವನ್ನು ಸಂಪೂರ್ಣವಾಗಿ ಮುಚ್ಚುವ 48 ಗಂಟೆಗಳ ಈ ಮುಷ್ಕರಕ್ಕೆ ಇತರ ಅನೇಕ ಸಂಘಗಳು ಮತ್ತು ಸಂಸ್ಥೆಗಳು ತಮ್ಮೊಂದಿಗೆ ಸೇರಿಕೊಳ್ಳಲಿವೆ ಎಂದು ಸಂಘಟನೆಗಳು ತಿಳಿಸಿವೆ.

ಆಗಸ್ಟ್​ 30ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಾರ್ವಜನಿಕ ಸ್ವಾಮ್ಯದ 10 ಬ್ಯಾಂಕ್​ಗಳನ್ನು ನಾಲ್ಕು ಹಂತದಲ್ಲಿ ವಿಲೀನಗೊಳಿಸುವುದಾಗಿ ಹೇಳಿದ್ದರು.

ABOUT THE AUTHOR

...view details