ಕರ್ನಾಟಕ

karnataka

ETV Bharat / business

ತಪ್ಪುಗಳಿಂದ ಪಾಠ ಕಲಿಯದೇ ಬ್ಯಾಂಕ್​ಗಳ ವಿಲೀನತೆ ಫಲ ನೀಡುವುದಿಲ್ಲ - ಭಾರತೀಯ ಬ್ಯಾಂಕಿಂಗ್

ಸ್ವಾತಂತ್ರ್ಯದ ಬಳಿಕ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಸುದೀರ್ಘ ಮತ್ತು ಕಠಿಣ ಹಾದಿಯಲ್ಲಿ ಸಾಗಿ ಬಂದಿದೆ. ಮಿತಿಮೀರಿದ ನಿಯಂತ್ರಣ ಮತ್ತು ನಿಯಂತ್ರಣದ ಕಿರಿದಾದ ಹಾದಿಗಳ ಮಧ್ಯೆ ಹಾದು ಹೋಗಿದೆ. ಸುಧಾರಣಾ ಪೂರ್ವದ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಸ್ವತ್ತುಗಳ ಮೇಲೆ ಅಧಿಕ ಹೊರೆ ಇತ್ತು. 90ರ ದಶಕದ ಆರಂಭದಲ್ಲಿ ಉದಾರೀಕರಣದೊಂದಿಗೆ ಬ್ಯಾಂಕ್​ಗಳು ನವ ಜೀವನ ಉತ್ಸವದೊಂದಿಗೆ ಉಸಿರಾಡಿದವು. ಅಂದಿನಿಂದ ಬಲಗೊಳ್ಳುತ್ತಲೇ ಬೆಳೆದು ಬರುತ್ತಿರುವ ಬ್ಯಾಂಕಿಂಗ್​ ವ್ಯವಸ್ಥೆಯು ವಿಶ್ವದ ಅತ್ಯಂತ ಚೇತರಿಸಿಕೊಂಡ ಉದ್ಯಮಗಳಲ್ಲಿ ಒಂದಾಗಿದೆ.

ಸಾಂದರ್ಭಿಕ ಚಿತ್ರ

By

Published : Sep 8, 2019, 11:27 AM IST

Updated : Sep 8, 2019, 11:33 AM IST

ಆಗಸ್ಟ್ 30ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 10 ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು (ಪಿಎಸ್‌ಬಿ) ನಾಲ್ಕು ಘಟಕಗಳಾಗಿ ವಿಲೀನಗೊಳಿಸುವುದಾಗಿ ಘೋಷಿಸಿದ್ದರು. ಹೀಗಾಗಿ, ಭಾರತದ ಒಟ್ಟು ಪಿಎಸ್‌ಬಿಗಳ ಸಂಖ್ಯೆ 27ರಿಂದ 12ಕ್ಕೆ ಇಳಿಯಲಿದೆ.

ಇದರ ಜೊತೆಗೆ, ಪಿಎಸ್‌ಬಿ ಮಂಡಳಿಗಳ ಸುಧಾರಣೆಗೆ ಅವುಗಳ ಆಡಳಿತವನ್ನು ಸುಧಾರಿಸುವ ಕ್ರಮಗಳನ್ನು ಸಹ ಘೋಷಿಸಿದರು. ಎನ್​ಡಿಎ ಎರಡನೇ ಅಧಿಕಾರಾವಧಿಯ ಆರ್ಥಿಕ ನೀತಿಗಳ ಸುಧಾರಣೆಗಳಲ್ಲಿ ದೊಡ್ಡ ನಿರ್ಧಾರ ಇದಾಗಿದೆ. ಇದು ಭಾರತೀಯ ಬ್ಯಾಂಕಿಂಗ್ ಭವಿಷ್ಯದ ಕಥೆಯನ್ನು ಬದಲಾಯಿಸಬಹುದು.

ಸ್ವಾತಂತ್ರ್ಯದ ಬಳಿಕ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಸುದೀರ್ಘ ಮತ್ತು ಕಠಿಣ ಹಾದಿಯೊಂದಿಗೆ ಸಾಗಿ ಬಂದಿದೆ. ಮಿತಿಮೀರಿದ ನಿಯಂತ್ರಣ ಮತ್ತು ನಿಯಂತ್ರಣದ ಕಿರಿದಾದ ಹಾದಿಗಳ ಮಧ್ಯೆ ಹಾದು ಹೋಗಿದೆ. ಸುಧಾರಣಾ ಪೂರ್ವದ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಸ್ವತ್ತುಗಳ ಮೇಲೆ ಅಧಿಕ ಹೊರೆ ಇತ್ತು. 90ರ ದಶಕದ ಆರಂಭದಲ್ಲಿ ಉದಾರೀಕರಣದೊಂದಿಗೆ ಬ್ಯಾಂಕ್​ಗಳು ನವ ಜೀವನ ಉತ್ಸವದೊಂದಿಗೆ ಉಸಿರಾಡಿದವು. ಅಂದಿನಿಂದ ಬಲಗೊಳ್ಳುತ್ತಲೇ ಬೆಳೆದು ಬರುತ್ತಿರುವ ಬ್ಯಾಂಕಿಂಗ್​ ವ್ಯವಸ್ಥೆಯು ವಿಶ್ವದ ಅತ್ಯಂತ ಚೇತರಿಸಿಕೊಂಡ ಉದ್ಯಮಗಳಲ್ಲಿ ಒಂದಾಗಿದೆ.

ಬಿಕ್ಕಟ್ಟುಗಳಲ್ಲಿ ಸ್ಥಿರತೆ:

ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂಭವಿಸಿದ್ದಾಗ ಕೈಗಾರಿಕೀಕರಣಗೊಂಡ ದೇಶಗಳ ಪ್ರಮುಖ ಬ್ಯಾಂಕ್​ಗಳು ದೊಡ್ಡ ಮಟ್ಟದಲ್ಲಿ ವಿಫಲತೆಯನ್ನು ಕಂಡಿದ್ದಿದೆ. ಜಗತ್ತಿನಲ್ಲಿ ತಲೆದೋರಿದ ಸಾಲದ ಬಿಕ್ಕಟ್ಟಿನಿಂದ ಯುರೋಪಿಯನ್ ಒಕ್ಕೂಟದ ಬ್ಯಾಂಕ್​ಗಳು ಅಲುಗಾಡಿದವು. ಆದರೆ, ಆ ಸಂದರ್ಭದಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಬಲವಾಗಿ ಮತ್ತು ಸ್ಥಿರವಾಗಿ ನಿಂತಿದ್ದವು. ಬೇರೆ ರಾಷ್ಟ್ರಗಳ ಬ್ಯಾಂಕ್​ಗಳಿಗೆ ಹೋಲಿಸಿದ್ರೆ ಹೆಚ್ಚಿನ ಮಟ್ಟದ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದ್ದವು.

ಈ ಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವು ಭಾರತೀಯ ವಿತ್ತೀಯ ಅಧಿಕಾರಿಗಳು ವಹಿಸಿದ ಮುನ್ನೆಚ್ಚರಿಕೆಗೆ ಸಲ್ಲಬೇಕಾದ ಪ್ರಶಂಸೆ. ಇಂತಹವುಗಳು ಇದ್ದಕ್ಕಿದ್ದಂತೆ ಸಂಭವಿಸಲಿಲ್ಲ. ದಶಕಗಳ ಕಾಲ ಎಚ್ಚರಿಕೆಯಿಂದ ರಚಿಸಲಾದ ನೀತಿಗಳ ಪರಿಣಾಮ, ಸ್ವಾತಂತ್ರ್ಯದ ನಂತರ ಬ್ಯಾಂಕ್​ಗಳು ಹುಟ್ಟುಹಾಕಿದ ಅಪಾರ ನಂಬಿಕೆ ಮತ್ತು ವಿಶ್ವಾಸ ಎಂದು ಹೇಳಬಹುದು. ಇದು ಬ್ಯಾಂಕಿಂಗ್ ವ್ಯವಸ್ಥೆಗೆ ಸಮೃದ್ಧವಾದ ಲಾಭಾಂಶ ತಂದುಕೊಟ್ಟಿತ್ತು. ಆಸ್ತಿಯ ಗುಣಮಟ್ಟ, ಸಾಲ ವಿಸ್ತರಣೆಯ ಜಾಲ, ಬಂಡವಾಳದ ಸಮರ್ಪಕತೆ ಸೇರಿದಂತೆ ಇತರೆ ಅಂಶಗಳಲ್ಲಿ ಸುಧಾರಣೆ ಕಂಡವು.

ಬ್ಯಾಂಕಿಂಗ್‌ಗೆ ಸಂಬಂಧಿಸಿದ ನೀತಿ-ನಿಲುವುಗಳು ಆಗಾಗ ಬದಲಾದಂತೆ ಕಂಡುಬಂದಿವೆ. ಬಲವಾದ ರಾಷ್ಟ್ರೀಯತೆಯ ಉಪಸ್ಥಿತಿ, ವಿಸ್ತರಿಸಿಕೊಳ್ಳುತ್ತ ಬಂದ ಜಾಗತಿಕ ವ್ಯಾಪ್ತಿಯತೆ ಮತ್ತು ಮೌಲ್ಯ ವರ್ಧಿತ ಸಾಮರ್ಥ್ಯದೊಂದಿಗೆ ಪ್ರಬಲ ಮತ್ತು ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್​ಗಳ ಗುಂಪನ್ನು ರಚಿಸಲು ಭಾರತ ಸರ್ಕಾರ ಚಿಂತಿಸಿತು.

ಮುಂದಿನ ತಲೆಮಾರಿನ ಬ್ಯಾಂಕ್​ಗಳ ಸ್ಥಾಪಿಸಲು ಆಯ್ದುಕೊಂಡ ನೀತಿಯ ಉದ್ದೇಶಗಳು ಶ್ಲಾಘನೀಯ. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಲೆಹ್ಮನ್‌ ಬ್ರದರ್ಸ್‌ ಬ್ಯಾಂಕ್‌, ಕರಡಿ ಸ್ಟೆರ್ನ್ಸ್ ಮತ್ತು ಹಣಕಾಸು ಸಂಸ್ಥೆಯಾದ ಅಮೆರಿಕನ್​ ಇಂಟರ್​ನ್ಯಾಷನಲ್ ಗ್ರೂಪ್​ನ (ಎಐಜಿ) ವೈಫಲ್ಯತೆಯು ದಶಕದ ಹಿಂದೆ ಜಾಗತಿಕ ಹಣಕಾಸು ವ್ಯವಸ್ಥೆಯ ಕಟ್ಟಡದ ಬುನಾದಿ ಅಲುಗಾಡಿಸಿದ್ದ ಪಾಠಗಳನ್ನು ಮರೆಯದಿರುವುದು ಸೂಕ್ತ.

ದೊಡ್ಡ ಬ್ಯಾಂಕ್​ಗಳ ವೈಫಲ್ಯತೆಯ ಪಾಠ:

5 ಟ್ರಿಲಿಯನ್ ಡಾಲರ್​ ಆರ್ಥಿಕತೆಯನ್ನು ನಿರ್ಮಿಸಲು ಭಾರತವು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಜಾಗತಿಕ ಮಟ್ಟದಲ್ಲಿ ಹಣಕಾಸು ಸಂಸ್ಥೆಗಳ ಅಗತ್ಯವಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ವೇಳೆ, ಬ್ಯಾಂಕ್​ನ ಗಾತ್ರ ದೊಡ್ಡದಾದಷ್ಟು ಆರ್ಥಿಕತೆಯ ಮೇಲೆ ಅದರ ವೈಫಲ್ಯದ ಪ್ರಭಾವವೂ ಹೆಚ್ಚಿಸುತ್ತದೆ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು. ಬ್ಯಾಂಕ್​​ಗಳು ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕತೆಯ ಒಂದು ಭಾಗವಾಗಿರುತ್ತವೆ. ಅದು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ಉತ್ಪಾದನೆ ಮತ್ತು ಸಂಪತ್ತಿನ ಸೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ವೈಫಲ್ಯಗಳನ್ನು ತಡೆಗಟ್ಟಲು ತಪ್ಪುಮಾಡಲು ಆಸ್ಪದವಿಲ್ಲದ (ಫೂಲ್ ಪ್ರೂಫ್) ಯಾಂತ್ರಿಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳವುದು ಖಚಿತವಾಗಿದೆ. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕ್​ಗಳು ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯದ ಬೆನ್ನಟ್ಟಿದವು. ಇದು ಸಾರ್ವಜನಿಕ ಹಣವನ್ನು ಅಪಾಯಕಾರಿ ಮತ್ತು ವಿಷಕಾರಿ ಹಣಕಾಸು ಸ್ವತ್ತುಗಳಲ್ಲಿ ಹೂಡಿಕೆಗೆ ಬಳಕೆಯಾಯಿತು. ಇದರಿಂದಾಗಿ ಬ್ಯಾಂಕ್​ಗಳು ಬಿಕ್ಕಟ್ಟಿಗೆ ಸಿಲುಕಿದವು.

ಮಾರುಕಟ್ಟೆಯ ಮೇಲ್ವಿಚಾರಣೆಯಲ್ಲಿನ ಸಡಿಲತೆಯ ಅನಿಯಂತ್ರಿತ ನೀತಿಗಳನ್ನು ಮಾರುಕಟ್ಟೆಯ ಕೆಲ ಶಕ್ತಿಗಳು ಅದನ್ನು ಬಿಕ್ಕಟ್ಟಗಳ ಸೃಷ್ಟಿಗೆ ಬಳಸಿಕೊಂಡವು. ಮತ್ತೊಂದೆಡೆ, ಕಾರ್ಪೊರೇಟ್ ಆಡಳಿತದ ಮಾನದಂಡಗಳ ಕುಸಿತವು ಬ್ಯಾಂಕ್​ಗಳ ಸಿಇಒಗಳು ಸಾರ್ವಜನಿಕ ನಿಧಿಯ ವೆಚ್ಚದಲ್ಲಿ ಭಾರಿ ಲಾಭ ಪಡೆದುಕೊಂಡು ಹೋಗುವುದನ್ನು ತಡೆಯುವಲ್ಲಿ ವಿಫಲವಾದವು.

ಭಾರತವು ಮೆಗಾ ಬ್ಯಾಂಕ್​ಗಳನ್ನು ಸ್ಥಾಪಿಸಲು ಯತ್ನಿಸಿದಾಗ, ದೊಡ್ಡ ಬ್ಯಾಂಕ್​ಗಳಿಂದ ಹಿಂದೆ ಅನುಭವಿಸಿದ ವೈಫಲ್ಯಗಳ ಮೂಲಕ ಮತ್ತೆ ತಪ್ಪು ಹೆಜ್ಜೆಗಳು ಮರುಕಳಿಸದಂತೆ ಖಚಿತಪಡಿಸಿಕೊಳ್ಳುವುದು ಅವಶ್ಯವಿದೆ. ವಾಸ್ತವದಲ್ಲಿ ಅಂತಹ ವೈಫಲ್ಯಗಳಿಂದ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿದ್ದು ಕಡಿಮೆ. ಬ್ಯಾಂಕ್​ಗಳ ವಿಲೀನ ಸಮಯದಲ್ಲಿ ಭೌಗೋಳಿಕ ತಾಂತ್ರಿಕತೆ ಮತ್ತು ಮಾನವ ಸಂಪನ್ಮೂಲ ಸಹಕಾರ ಬಳಸಿಕೊಂಡು ಸೇವೆಯಲ್ಲಿ ದಕ್ಷತೆ ಸಾಧಿಸುವುದು ಅವಶ್ಯಕತೆಯಿದೆ.

ಬ್ಯಾಂಕ್​ಗಳಲ್ಲಿನ ಆಡಳಿತ ಸುಧಾರಣೆಗಳ ಬಗ್ಗೆ ಧನಾತ್ಮಕ ಮಾತುಕತೆಗಳಿದ್ದರೂ ಬ್ಯಾಂಕ್​ನ ಆಡಳಿ ಮಂಡಳಿಯ ಉನ್ನತ ವರ್ಗದಲ್ಲಿ ಹೆಚ್ಚಿನ ವೃತ್ತಿಪರತೆ ತರುವ ಅವಶ್ಯಕತೆಯಿದೆ. ರಾಜಕೀಯ ನೇಮಕಾತಿಗಳಿಂದ ಪಿಎಸ್‌ಬಿ ಮಂಡಳಿಗಳನ್ನು ದೂರ ಇರಿಸಬೇಕು. ಬ್ಯಾಂಕಿಂಗ್ ಕ್ಷೇತ್ರ ಮತ್ತು ಹಣಕಾಸು ವಲಯದ ಅಭಿವೃದ್ಧಿಯ ನಡುವಿನ ಆಳವಾದ ಸಂಪರ್ಕ ಜಾಲ ಗಮನಿಸಿದರೆ, ಹಣಕಾಸು ವ್ಯವಸ್ಥೆಯನ್ನು ಹೆಚ್ಚು ಒಳಗೊಳ್ಳುವಂತೆ ಮಾಡಲು ದೃಢವಾದ ಬ್ಯಾಂಕಿಂಗ್ ವ್ಯವಸ್ಥೆ ಹೊಂದುವುದು ಸೂಕ್ತವಾಗಿದೆ. ಈ ಕ್ರಮಗಳು ಜಾರಿಗೆ ಬಂದರೆ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಅಳಿಸದಂತಹ ಪ್ರಭಾವ ಬೀರಲು ಭಾರತದ ಬ್ಯಾಂಕ್​ಗಳಿಗೆ ನೆರವು ನೀಡಿದಂತೆ ಆಗಲಿದೆ.

Last Updated : Sep 8, 2019, 11:33 AM IST

ABOUT THE AUTHOR

...view details