ನವದೆಹಲಿ:ವರ್ಷಾಂತ್ಯದ ಡಿಸೆಂಬರ್‌ನಲ್ಲಿ ಸಾರ್ವಜನಿಕ ವಲಯದ ಹಾಗೂ ಖಾಸಗಿ ಬ್ಯಾಂಕ್ಗಳ ನೌಕರರಿಗೆ ಸಾಲು- ಸಾಲು ರಜೆಗಳ ಭಾಗ್ಯ ದೊರೆಯಲಿದೆ.
ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಎಂಬುದು ಬಹುತೇಕರಿಗೆ ತಿಳಿದಿರುವ ಬ್ಯಾಂಕ್ ಹಾಲಿಡೇ ಆಗಿದೆ. ಡಿ.25ರ ರಜೆ ಹೊರತುಪಡಿಸಿ ಅನೇಕ ರಾಜ್ಯಗಳಲ್ಲಿ ಸ್ಥಳೀಯ ರಜಾದಿನಗಳ ಸುಗ್ಗಿ ಸಹ ಉದ್ಯೋಗಿಗಳಿಗೆ ಲಭ್ಯವಾಗಲಿದೆ. ಇದರಿಂದ ಬ್ಯಾಂಕ್ ಗ್ರಾಹಕರಿಗೆ ಅನಾನುಕೂಲ ಎದುರಾಗಲಿದೆ..
ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಮನವಿ ಸಲ್ಲಿಸಲಿರುವ ಮೊಡೆರ್ನಾ ಇಂಕಾ
2020ರ ಡಿಸೆಂಬರ್‌ನಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರವೂ ಎಲ್ಲಾ ಬ್ಯಾಂಕ್ಗಳಿಗೆ ರಜಾದಿನಗಳಾಗಿವೆ. ಕ್ರಿಸ್‌ಮಸ್ ರಜೆಯು ಎಲ್ಲಾ ರಾಜ್ಯಗಳಲ್ಲಿನ ಖಾಸಗಿ ಅಥವಾ ಸಾರ್ವಜನಿಕ ಬ್ಯಾಂಕ್ಗಳಿಗೆ ಅನ್ವಯವಾಗುತ್ತದೆ. ರಾಜ್ಯದ ನಿರ್ದಿಷ್ಟ ಬ್ಯಾಂಕ್ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಿ ಕಾರ್ಯಗತಗೊಳಿಸುತ್ತವೆ. 2020ರ ಡಿಸೆಂಬರ್‌ನಲ್ಲಿ ರಾಜ್ಯವಾರು ಬ್ಯಾಂಕ್ ರಜಾದಿನಗಳು ಈ ಕೆಳಗಿನಂತಿವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ, 2020ರ ಡಿಸೆಂಬರ್ನಲ್ಲಿಬ್ಯಾಂಕ್ ರಜಾದಿನಗಳ ಪಟ್ಟಿ:
ಡಿಸೆಂಬರ್ 1- ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ 1 (ಹೈದರಾಬಾದ್ಗೆ ಮಾತ್ರ)
ಡಿಸೆಂಬರ್ 3 - ಕರ್ನಾಟಕದಲ್ಲಿ ಕನಕದಾಸ ಜಯಂತಿ / ಗೋವಾದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಜನ್ಮದಿನ (ಕರ್ನಾಟಕ)