ನವದೆಹಲಿ :ಭಾರತದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳಿಗೆ 2021ರ ಜನವರಿಯಲ್ಲಿ 16 ರಜಾ ದಿನಗಳನ್ನು ಪಡೆದುಕೊಳ್ಳಲಿದೆ. ಇದರಲ್ಲಿ ನಾಲ್ಕು ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳಿವೆ. ಜನವರಿ 1 ಆಯ್ದ ನಗರಗಳಲ್ಲಿ ಮಾತ್ರ ಬ್ಯಾಂಕ್ ರಜಾದಿನವಾಗಿದ್ದು, ರಾಷ್ಟ್ರೀಯ ಬ್ಯಾಂಕ್ ರಜಾದಿನವಲ್ಲ.
ಹೊಸ ವರ್ಷದ ದಿನ ಶುಕ್ರವಾರ ಇರುವುದರಿಂದ ದೀರ್ಘ ವಾರಾಂತ್ಯದಲ್ಲಿ ಪ್ರಾರಂಭವಾಗುತ್ತಿದ್ದರೂ ಶನಿವಾರ ಮತ್ತು ಭಾನುವಾರದ ನಂತರ ಬಹುತೇಕ ನಗರಗಳಲ್ಲಿ ಬ್ಯಾಂಕ್ಗಳು ತೆರೆದಿರುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಇತ್ತೀಚೆಗೆ 2021ರ ಬ್ಯಾಂಕ್ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿತು.
ಹೊಸ ವರ್ಷದ ಮುನ್ನಾದಿನದಂದು ಐಜಾಲ್, ಚೆನ್ನೈ, ಇಂಫಾಲ್, ಗ್ಯಾಂಗ್ಟಾಕ್ ಮತ್ತು ಶಿಲ್ಲಾಂಗ್ ರಾಜ್ಯಗಳಲ್ಲಿ ಬ್ಯಾಂಕ್ಗಳು ಮುಚ್ಚಿರುತ್ತವೆ. ಜನವರಿ 2ರಂದು ಸಹ ಐಜಾಲ್ನಲ್ಲಿ ರಜಾದಿನವಾಗಿದೆ. ಜನವರಿ 12ರಂದು ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ಬ್ಯಾಂಕ್ಗಳು ಬಾಗಿಲು ಹಾಕಿರುತ್ತವೆ.
ಇದನ್ನೂ ಓದಿ: ಮೌಲ್ಯ ಮಿತಿಯಿಲ್ಲದೆ ಲಸಿಕೆ ಮಾರಾಟ, ಖರೀದಿಗೆ ಕೇಂದ್ರ ಸರ್ಕಾರದ ಅನುಮತಿ
ಈ ವರ್ಷದ ಜನವರಿ 14ರಂದು ಮಕರ ಸಂಕ್ರಾಂತಿಯ ಹಬ್ಬದಂದು ಗ್ಯಾಂಗ್ಟಾಕ್, ಅಹಮದಾಬಾದ್, ಬೆಂಗಳೂರು ಮತ್ತು ಹೈದರಾಬಾದ್ನಲ್ಲಿನ ಬ್ಯಾಂಕ್ಗಳಿಗೆ ರಜೆ ಅನ್ವಯಿಸಲಿದೆ. ಚೆನ್ನೈನಲ್ಲಿ ಹಲವು ರಜಾದಿನಗಳ ಕಾರಣದಿಂದ ಜನವರಿ 15-17ರಿಂದ ಬ್ಯಾಂಕ್ಗಳನ್ನು ಮುಚ್ಚಲಾಗುವುದು. ತಿರುವಳ್ಳುವರ್ ದಿನ, ಮಾಘ ಬಿಹು ಮತ್ತು ತುಸು ಪೂಜೆಯ ಸಂದರ್ಭದಲ್ಲಿ ಜನವರಿ 15ರಂದು ಹೈದರಾಬಾದ್‌ನಲ್ಲಿ ಬ್ಯಾಂಕ್ಗಳು ಬಾಗಿಲು ತೆರೆಯುವುದಿಲ್ಲ. ಜನವರಿ 26ರಂದು ಗಣರಾಜ್ಯೋತ್ಸವದಂದು ದೇಶಾದ್ಯಂತ ಬ್ಯಾಂಕ್ಗಳು ಮುಚ್ಚುತ್ತಿದ್ದು, ಜನವರಿಯಲ್ಲಿ ಇದೊಂದೇ ಏಕೈಕ ರಾಷ್ಟ್ರೀಯ ರಜಾದಿನ.
ಆರ್‌ಬಿಐ ಪ್ರಕಟಿಸಿರುವ ಬ್ಯಾಂಕ್ ಹಾಲಿಡೇಸ್ 2021 ಪಟ್ಟಿಯ ಪ್ರಕಾರ, ಈ ಕೆಳಗಿನ ದಿನಗಳಲ್ಲಿ ಬ್ಯಾಂಕ್ಗಳು ಮುಚ್ಚಿರುತ್ತವೆ.
2021ರ ಜನವರಿಯಲ್ಲಿ ರಾಷ್ಟ್ರೀಯ ಬ್ಯಾಂಕ್ ರಜಾದಿನಗಳ ಪಟ್ಟಿ ಹೀಗಿದೆ:
- ಜನವರಿ 1 ಹೊಸ ವರ್ಷದ ದಿನ
- ಜನವರಿ 2 ಹೊಸ ವರ್ಷದ ಆಚರಣೆ
- ಜನವರಿ 3 ಭಾನುವಾರ
- ಜನವರಿ 9 ಎರಡನೇ ಶನಿವಾರ
- ಜನವರಿ 10 ವಾರದ ರಜೆ (ಭಾನುವಾರ)
- ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ
- ಜನವರಿ 14 ಮಕರ ಸಂಕ್ರಾಂತಿ / ಪೊಂಗಲ್ / ಮಾಘೆ ಸಂಕ್ರಾಂತಿ
- ಜನವರಿ 15 ತಿರುವಳ್ಳುವರ್ ದಿನ / ಮಾಘ ಬಿಹು ಮತ್ತು ತುಸು ಪೂಜೆ
- ಜನವರಿ 16 ಉಝಾವರ್ ತಿರುನಾಲ್
- ಜನವರಿ 17 ಭಾನುವಾರ
- ಜನವರಿ 20 ಗುರು ಗೋವಿಂದ್ ಸಿಂಗ್ ಜನ್ಮದಿನ
- ಜನವರಿ 23 ನಾಲ್ಕನೇ ಶನಿವಾರ, ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮದಿನ
- ಜನವರಿ 24 ಭಾನುವಾರ
- ಜನವರಿ 25 ಮಣಿಪುರ ಹಬ್ಬ
- ಜನವರಿ 26 ಗಣರಾಜ್ಯೋತ್ಸವ
- ಜನವರಿ 31 ಭಾನುವಾರ
ಗಮನಿಸಿ : ಮೇಲೆ ತಿಳಿಸಲಾದ ಕೆಲವು ರಜಾದಿನಗಳು ಪ್ರಾದೇಶಿಕವಾದ್ದರಿಂದ ಸಂಬಂಧಪಟ್ಟ ಶಾಖೆಗೆ ಭೇಟಿ ನೀಡುವ ಮೊದಲು ಗ್ರಾಹಕರು ಮೊದಲು ಆಯಾ ಬ್ಯಾಂಕ್ಗಳೊಂದಿಗೆ ದೂರವಾಣಿ ಮುಖೇನ ಸಂಪರ್ಕಿಸಿ.