ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ವಾರ್ಷಿಕ ವರದಿಯ ಪ್ರಕಾರ, ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಭಾರತದಲ್ಲಿ ಬ್ಯಾಂಕಿಂಗ್ ವಂಚನೆಗಳ ಮೌಲ್ಯವು 2019-20ರಲ್ಲಿ ದ್ವಿಗುಣಗೊಂಡಿದೆ.
ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ 2019-20ರ ಅವಧಿಯಲ್ಲಿ 8,707 ವಂಚನೆ ಪ್ರಕರಣಗಳಿಂದ 1.86 ಲಕ್ಷ ಕೋಟಿ ರೂ. ಹಾಗೂ 2018-19ರಲ್ಲಿ 6,799 ಪ್ರಕರಣಗಳಿಂದ 71,543 ಕೋಟಿ ರೂ.ಯಷ್ಟು ದಾಖಲಾಗಿವೆ.
ಬ್ಯಾಂಕ್/ ಎಫ್‌ಐಐಗಳು (ಹಣಕಾಸು ಸಂಸ್ಥೆಗಳು) ವರದಿ ಮಾಡಿದ ವಂಚನೆಗಳ ಒಟ್ಟು ಪ್ರಕರಣಗಳ 2019-20ರ ಅವಧಿಯಲ್ಲಿ ಪ್ರಮಾಣದಲ್ಲಿ ಶೇ 28ರಷ್ಟು ಮತ್ತು ಮೌಲ್ಯದಲ್ಲಿ ಶೇ 159ರಷ್ಟು ಹೆಚ್ಚಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ಆರ್ಬಿಐನ ಬ್ಯಾಂಕಿಂಗ್ ವಂಚನೆ ದತ್ತಾಂಶವು 1 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ಸಣ್ಣ ಮೊತ್ತವನ್ನು ಒಳಗೊಂಡ ಪ್ರಕರಣಗಳನ್ನುಮ ಇದರಲ್ಲಿ ಸೇರಿಸಲಾಗಿಲ್ಲ.
ಈ ವಂಚನೆ ಪ್ರಕರಣಗಳಲ್ಲಿ ಭಾಗಿ ಆಗಿರುವ ಮೊತ್ತವು ನಷ್ಟದ ಪ್ರಮಾಣವನ್ನು ಪ್ರತಿಬಿಂಬಿಸುವುದಿಲ್ಲ. ವಸೂಲಿಗಳನ್ನು ಅವಲಂಬಿಸಿ ಆಗುವ ನಷ್ಟವು ಕಡಿಮೆಯಾಗುತ್ತದೆ. ಈ ಮೊತ್ತವನ್ನು ಬೇರೆಡೆಗೆ ತಿರುಗಿಸಬೇಕಾಗಿಲ್ಲ ಎಂದು ಕೇಂದ್ರ ಬ್ಯಾಂಕ್ ಹೇಳಿದೆ.