ಕರ್ನಾಟಕ

karnataka

ETV Bharat / business

ಭಾರತದ ಬೆಳವಣಿಗೆ ದರವು ನೇಪಾಳ, ಬಾಂಗ್ಲಾಗಿಂತ ಹಿಂದೆ... ಏನಾಗುತ್ತಿದೆ 'ನಮೋ' ಆರ್ಥಿಕತೆಗೆ? - ವಿಶ್ವ ಬ್ಯಾಂಕ್

ದಕ್ಷಿಣ ಏಷ್ಯಾದಾದ್ಯಂತ ಆಮದು ತೀವ್ರವಾಗಿ ಕುಸಿದಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಶೇ. 15 ರಿಂದ 20ರಷ್ಟು ಸಂಕುಚಿತಗೊಂಡಿದೆ. ಭಾರತದ ದೇಶಿ ಬೇಡಿಕೆ ಇಳಿಕೆಯಾಗಿದ್ದು, ಖಾಸಗಿ ಬಳಕೆಯು ಕಳೆದ ತ್ರೈಮಾಸಿಕದಲ್ಲಿ ಶೇ. 3.1ರಷ್ಟು ಏರಿಕೆಯಾಗಿದೆ. ಆದರೆ, ಉತ್ಪಾದನಾ ಬೆಳವಣಿಗೆಯು 2019ರ ಎರಡನೇ ತ್ರೈಮಾಸಿಕದಲ್ಲಿ ಈ ಹಿಂದಿನ ವರ್ಷದ ಇದೇ ಅವಧಿಯಲ್ಲಿದ್ದ ಶೇ. 10ಕ್ಕೆ ಹೋಲಿಸಿದರೇ ಶೇ. 1ರಷ್ಟು ಕಡಿಮೆಯಾಗಿದೆ. ನೆರೆಯ ಬಾಂಗ್ಲಾದೇಶ ಮತ್ತು ನೇಪಾಳ 2019ರಲ್ಲಿ ಭಾರತಕ್ಕಿಂತ ವೇಗವಾಗಿ ಬೆಳವಣಿಗೆ ಹೊಂದಲಿವೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ಸಾಂದರ್ಭಿಕ ಚಿತ್ರ

By

Published : Oct 13, 2019, 12:36 PM IST

ವಾಷಿಂಗ್ಟನ್​:ನೆರೆಯ ಬಾಂಗ್ಲಾದೇಶ ಮತ್ತು ನೇಪಾಳ 2019ರಲ್ಲಿ ಭಾರತಕ್ಕಿಂತ ವೇಗವಾಗಿ ಬೆಳೆವಣಿಗೆ ಹೊಂದಲಿವೆ ಎಂದು ವಿಶ್ವ ಬ್ಯಾಂಕ್​ ಅಂದಾಜಿಸಿದೆ.

ದಕ್ಷಿಣ ಏಷ್ಯಾದ ಒಟ್ಟಾರೆ ಬೆಳವಣಿಗೆಯು ಜಾಗತಿಕ ಆರ್ಥಿಕ ಪ್ರವೃತ್ತಿಗೆ ಅನುಗುಣವಾಗಿ ಈ ಆರ್ಥಿಕತೆಯನ್ನು ನಿಧಾನಗೊಳಿಸುವ ಸಾಧ್ಯತೆ ಇದೆ. ಪಾಕಿಸ್ತಾನದ ಬೆಳವಣಿಗೆಯ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 2.4ರಷ್ಟು ಕುಸಿಯುವ ನಿರೀಕ್ಷೆಯಿದೆ. ವಿತ್ತೀಯ ನೀತಿ ಬಿಗಿಯಾದ ನಿಲುವು ಮತ್ತು ಯೋಜಿತ ಹಣಕಾಸಿನ ಬಲವರ್ಧನೆಯು ದೇಶಿಯ ಬೇಡಿಕೆಯನ್ನು ಸಂಕುಚಿತಗೊಳಿಸುತ್ತದೆ ಎಂದು ಹೇಳಿದೆ.

2019ರಲ್ಲಿ ದಕ್ಷಿಣ ಏಷ್ಯಾದ ಬೆಳವಣಿಗೆ ದರವು ಶೇ. 5.9ತಕ್ಕೆ ಇಳಿಯಲಿದೆ. ಇದು 2019ರ ಎಪ್ರಿಲ್​ನಲ್ಲಿ ಅಂದಾಜುಗಿಂತ ಶೇ 1.1 ಪಾಯಿಂಟ್‌ ಕಡಿಮೆಯಾಗಿದೆ. ಅಲ್ಪಾವಧಿಯಲ್ಲಿ ಮರುಚೇತರಿಸಿಕೊಳ್ಳುವಿಕೆಯ ಬಗ್ಗೆ ಇದು ಅನಿಶ್ಚಿತತೆ ಉಂಟುಮಾಡಲಿದೆ ಎಂದು ವಿಶ್ವ ಬ್ಯಾಂಕ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.

ದಕ್ಷಿಣ ಏಷ್ಯಾ ಆರ್ಥಿಕತೆಯಲ್ಲಿನ ಇತ್ತೀಚಿನ ಆವೃತ್ತಿಯಾದ (ವಿ)ಕೇಂದ್ರೀಯ ಕಾರ್ಯಗತ, ಬಲವಾಗಿದ್ದ ದೇಶಿಯ ಬೇಡಿಕೆಯ ದುರ್ಬಲತೆ ಮತ್ತು ಈ ವ್ಯಾಪ್ತಿಯಲ್ಲಿ ಆವರಿಸಿದ ನಿಧಾನಗತಿಯ ಚಟುವಟಿಕೆಗಳು ಕುಸಿತಕ್ಕೆ ಕಾರಣವೆಂದು ಹೇಳಿದೆ.

ದಕ್ಷಿಣ ಏಷ್ಯಾದಾದ್ಯಂತ ಆಮದು ತೀವ್ರವಾಗಿ ಕುಸಿದಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಶೇ. 15 ರಿಂದ 20ರಷ್ಟು ಸಂಕುಚಿತಗೊಂಡಿದೆ. ಭಾರತದ ದೇಶಿಯ ಬೇಡಿಕೆ ಸಹ ಇಳಿಕೆಯಾಗಿದ್ದು, ಖಾಸಗಿ ಬಳಕೆಯು ಕಳೆದ ತ್ರೈಮಾಸಿಕದಲ್ಲಿ ಶೇ. 3.1ರಷ್ಟು ಏರಿಕೆಯಾಗಿದೆ. ಆದರೆ, ಉತ್ಪಾದನಾ ಬೆಳವಣಿಗೆಯು 2019ರ ಎರಡನೇ ತ್ರೈಮಾಸಿಕದಲ್ಲಿ ಈ ಹಿಂದಿನ ವರ್ಷದ ಇದೇ ಅವಧಿಯಲ್ಲಿದ್ದ ಶೇ. 10ಕ್ಕೆ ಹೋಲಿಸಿದರೇ ಶೇ. 1ರಷ್ಟು ಕಡಿಮೆಯಾಗಿದೆ.

ABOUT THE AUTHOR

...view details